Breaking News

ಪರಿಸರ ಉಳಿವಿಗೆ ಶ್ರಮಿಸಿ ತಾಪಂ ಇಓ ಲಕ್ಷ್ಮೀದೇವಿ ಚಾಲನೆ Strive for environmental protection, Tapam EO Lakshmidevi drive

ವಸುಧಾ ವಂದನ್ ಕಾರ್ಯಕ್ರಮಕ್ಕೆ ತಾಪಂ ಇಓ ಚಾಲನೆ

ಗಂಗಾವತಿ : ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನದುರ್ಗಾದಲ್ಲಿ ವಸುಧಾ ವಂದನ್ ಕಾರ್ಯಕ್ರಮದಡಿ ಅಮೃತ ವಾಟಿಕಾ ಸಸಿ ನೆಡುವ ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಶುಕ್ರವಾರ ಚಾಲನೆ ನೀಡಿದರು.

ಬಸವನದುರ್ಗಾದಲ್ಲಿ ನರೇಗಾದಡಿ ನಿರ್ಮಾಣ ಆಗುತ್ತಿರುವ ಅಮೃತ ಸರೋವರ ಬಳಿ ಸಸಿಗಳನ್ನು ನೆಡಲಾಯಿತು.

ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಆ.15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಸುಧಾ ವಂದನ್ ಕಾರ್ಯಕ್ರಮಮದಡಿ ಒಂದೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 75 ಸಸಿಗಳನ್ನು ನೆಡಲಾಗುತ್ತಿದೆ. ನೆಟ್ಟ ಸಸಿಗಳ ಪೋಷಣೆ ಮಾಡಬೇಕು. ಪರಿಸರ ಉಳಿವಿಗೆ ಶ್ರಮಿಸಬೇಕು ಎಂದರು.

ನನ್ನ ನೆಲ, ನನ್ನ ದೇಶ ಅಭಿಯಾ‌ನ ಶುರುವಾಗಿದ್ದು, ಎಲ್ಲರೂ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು.

ಕಾಮಗಾರಿ ವೀಕ್ಷಣೆ : ನರೇಗಾದಡಿ ನಿರ್ಮಾಣ ಆಗುತ್ತಿರುವ ಡುಮ್ಕಿಕೊಳ ( ಅಮೃತ ಸರೋವರ) ಕಾಮಗಾರಿಯ ತಾಪಂ ಇಓ ಲಕ್ಷ್ಮೀದೇವಿ ಪರಿಶೀಲನೆ ನಡೆಸಿದರು.

ಆನೆಗೊಂದಿ ಗ್ರಾಪಂ ಕಾರ್ಯದರ್ಶಿಗಳಾದ ಹನುಮವ್ವ, ನರೇಗಾ ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸದಸ್ಯರಾದ ಡಾ.ವೆಂಕಟೇಶ ಬಾಬು, ರಾಜಶೇಖರ ಹಾಗೂ ಗ್ರಾಮಸ್ಥ ಹೊನ್ನಪ್ಪ ನಾಯಕ ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.