ಗಂಗಾವತಿ:ಗಂಗಾವತಿ ನಗರದ 34 ನೇ ವಾರ್ಡ್ ಹಿರೇಜಂತಕಲ್ 3ನೇ ಕೇಂದ್ರ ಅಂಗನವಾಡಿ ಶಾಲೆಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 16 ಚೇರಗಳನ್ನು ಶ್ರೀಮತಿ ಶ್ರೀದೇವಿ ಗಂಡ ಶರಣಬಸವ ಕುಟುಂಬದಿಂದ ಚೇರ್ ವಿತರಣೆ ಮಾಡಲಾಯಿತು.ನಂತರ ಮಾತನಾಡಿ ಶ್ರೀದೇವಿ ಅವರು ಈ ಒಂದು ಅಂಗನವಾಡಿ ಶಾಲೆಯಲ್ಲಿ ನಮ್ಮ ಮಗುಕೂಡ ಈ ಶಾಲೆಯಲ್ಲಿ ಓದುತ್ತಿರುವದರಿಂದ ಈ ಶಾಲೆಗೆ ಬರುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಜೊತೆಗೆ ಇಲ್ಲಿಯ ಶಿಕ್ಷಕಿ ಬಹಳಷ್ಟು ಕ್ರಿಯಾಶೀಲರಾಗಿ ಮಕ್ಕಳ ಜೊತೆಗೆ ಮಗುವಿನಂತೆ ಇರುವ ಈ ಶಾಲೆಯ ಶಿಕ್ಷಕಿ ಸುನೀತಾ ಅವರು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಪಡೆಯುತ್ತಾರೆ ಎಂದು ನಮಗೆ ನಂಬಿಕೆ ಇದೆ ಮತ್ತು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಕುರ್ಚೆ ಆಟ ಆಡಿಸಲು ಚೇರ ಅವಶ್ಯಕತೆ ಇದೆ ಎಂದು ನಮ್ಮ ಗಮನಕ್ಕೆ ಬಂದಿದ್ದು ಈ ಶಾಲೆಯಲ್ಲಿ ಓದುವ ಮಕ್ಕಳಿಗೆ ಅನುಕೂಲವಾಗಲೆಂದು ನಮ್ಮ ಕೈಯಲ್ಲಿ ಎಷ್ಟು ಸಾದ್ಯ ಅಷ್ಟು ಸಹಾಯ ಮತ್ತು ಸಹಕಾರ ಇರುತ್ತದೆ ಎಂದು ವಿಶ್ವನಾಥ ಅವರ ಪೋಷಕರಾದ ಶ್ರೀಮತಿ ಶ್ರೀದೇವಿ ಅವರು ಮಾತನಾಡಿದರು ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಾದ ಸುನೀತಾ, ನೀಲಮ್ಮ.ಕಲಾವತಿ.ಶರಣಮ್ಮ.ರೇಣುಕಾ. ಹಾಗೂ ಅಂಗನವಾಡಿ ಸಹಾಯಕಿಯಾದ ಮಂಜಮ್ಮ ಸೇರಿದಂತೆ ಇತರರು ಇದ್ದರು
Tags kalyanasiri News
Check Also
ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??
The garbage disposal vehicle hasn't arrived for fifteen days! Who listens to the public's complaints? …