District level debate and essay competition at Gangavati on 26th August
ಕೊಪ್ಪಳ ಆಗಸ್ಟ್ 24 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಸಹಕಾರ ಇಲಾಖೆ ಹಾಗೂ ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಆಗಸ್ಟ್ 26ರಂದು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಗಂಗಾವತಿಯ ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಐ.ಎಂ.ಎ ಸಭಾಂಗಣದಲ್ಲಿ ನಡೆಯಲಿದೆ.
ಈ ಪ್ರಬಂಧ ಸ್ಪರ್ಧೆಯು ಜಿಲ್ಲೆಯ ಪ್ರೌಢ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ “ರಾಷ್ಟ್ರದ ಅರ್ಥವ್ಯವಸ್ಥೆಯ ಬೆಳವಣಿಗೆಗಳಲ್ಲಿ ಸಹಕಾರ ವಲಯದ ಪಾತ್ರ” ಎಂಬ ವಿಷಯದ ಮೇಲೆ ನಡೆಯುತ್ತದೆ. ಜಿಲ್ಲೆಯ ಪದವಿ ಪೂರ್ವ ಮಹಾವಿದ್ಯಾಲಯದ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು “ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯ ವಿತರಣೆಗಳು ಸಹಕಾರ ವಲಯದಿಂದ ಮಾತ್ರವೇ ಜಾರಿಗೊಳಿಸಲು ಸಾಧ್ಯ” ಎಂಬ ವಿಷಯದ ಮೇಲೆ ನಡೆಯುತ್ತದೆ.
ಒಂದು ಶಾಲೆಯಿಂದ ಒಬ್ಬ ವಿದ್ಯಾರ್ಥಿಗೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಪಡೆದ ಪ್ರಬಂಧಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಅನುಕ್ರಮವಾಗಿ ಹೆಚ್ಚು ಅಂಕಗಳನ್ನು ಪಡೆದ 3 ಉತ್ತರ ಪತ್ರಿಕೆಗಳನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ಇವರಿಗೆ ಕಳುಹಿಸಿ ಕೊಡಲಾಗುವುದು. ಆ ಉತ್ತರ ಪತ್ರಿಕೆಗಳನ್ನು ರಾಜ್ಯ ಮಟ್ಟದಲ್ಲಿ ಮೌಲ್ಯ ಮಾಪನ ಮಾಡಿ, ಅತೀ ಹೆಚ್ಚು ಅಂಕಪಡೆದ 3 ಪ್ರಬಂಧಗಳಿಗೆ ರಾಜ್ಯ ಮಟ್ಟದಲ್ಲಿ ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು.
ಜಿಲ್ಲೆಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಚರ್ಚಾ ಸ್ಪರ್ಧೆಗೆ ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಒಬ್ಬರು ವಿಷಯದ ಪರವಾಗಿ ಮತ್ತು ಒಬ್ಬರು ವಿಷಯದ ವಿರೋಧವಾಗಿ ಭಾಗವಹಿಸಲು ಅವಕಾಶವಿರುತ್ತದೆ. ವಿಜೇತರಾದ ಅಭ್ಯರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಈ ಚರ್ಚಾ ಸ್ಪರ್ಧೆಯಲ್ಲಿ “ಪರ” ಮತ್ತು “ವಿರೋಧ”ವಾಗಿ ಮಾತನಾಡಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದಲ್ಲಿ ಜರುಗುವ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿಕೊಡಲಾಗುವುದು.
ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗಂಗಾವತಿ ಬಂದು ಹೋಗುವ ಬಸ್ ಅಥವಾ ರೈಲು ಪ್ರಯಾಣದರ ಮಾತ್ರ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳದ ವತಿಯಿಂದ ಕೊಡಲಾಗುವುದು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ, ಕಾಲೇಜಿನ ದೃಢೀಕರಣದೊಂದಿಗೆ ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಸಹಕಾರ ಯೂನಿಯನ್ ನಿ., ಹೆಚ್.ಓ. ನಂ.36, 9-7-680/528, ಕಣವಿ ಶೇಂಗಾ ಮಿಲ್ ಹತ್ತಿರ, ಕುಷ್ಟಗಿ ರಸ್ತೆ, ಕೊಪ್ಪಳ-583231. ದೂ.ಸಂ: 8073619532, 9844230935, 9481659528ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.