Breaking News

ದೆಹಲಿಯ ನಿರ್ದೇಶಕರ NAFCUB ಬ್ಯಾಂಕಿಗೆ ಸ್ಪರ್ಧಿಸಿದ್ದಕೆ.ಕಾಳಪ್ಪನವರಿಗೆ ಭರ್ಜರಿ ಗೆಲುವು

A resounding victory for K. Kalappa, who contested for NAFCUB Bank, Delhi as a director:

ಗಂಗಾವತಿ: ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳಿ ನಿ., ನವದೆಹಲಿ ಇದರ ಆಡಳಿತ ಮಂಡಳಿಗೆ ಕರ್ನಾಟಕ ರಾಜ್ಯದಿಂದ ಚುನಾವಣೆಯ ಮೂಲಕ ಗಂಗಾವತಿ ನಗರದ ಶ್ರೀ ಚನ್ನಬಸವ ಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ನಿರ್ದೇಶಕರಾಗಿರುವ ಕೆ.ಕಾಳಪ್ಪ ಇವರು ಸತತವಾಗಿ ಎರಡನೇ ಬಾರಿಗೆ ಭರ್ಜರಿ ಗೆಲುವು ದಾಖಲಿಸಿ ರಾಜ್ಯದಿಂದ ದೆಹಲಿಗೆ ಆಯ್ಕೆಯಾಗಿದ್ದಾರೆ. ಗಂಗಾವತಿ ನಗರದ ಸ್ಥಳೀಯ ಸಿ.ಬಿ.ಎಸ್. ಬ್ಯಾಂಕಿನ ಪ್ರತಿನಿಧಿಯಾಗಿ ಸ್ಪರ್ಧಿಸಿ ಶ್ರೀ ಚನ್ನಬಸವ ಮಹಾಶಿವಯೋಗಿ ಗಳ ಅನುಗ್ರಹದಿಂದ ಹಾಗೂ ರಾಜ್ಯದಲ್ಲಿ ನನ್ನ ಪರವಾಗಿ ಮತಚಲಾಯಿಸಿ ನನ್ನ ಗೆಲುವಿಗೆ ಕಾರಣರಾದವರಿಗೆ ಅಭಿನಂದನೆಗಳು, ನನ್ನ ಮೇಲೆ ಸಂಪೂರ್ಣ ಭರವಸೆಯನ್ನಿಟ್ಟುಕೊಂಡು ರಾಜ್ಯದ ಸಹಕಾರಿ ಬ್ಯಾಂಕುಗಳು ನನ್ನನ್ನು ನವ ದೆಹಲಿಗೆ ಆಯ್ಕೆ ಮಾಡಿದ್ದಾರೆ, ಅವರ ಆಶಯಗಳಿಗೆ ಧಕ್ಕೆ ಬರದ ಹಾಗೆ ಮತ್ತು ಪ್ರತಿ ಸಂದರ್ಭದಲ್ಲಿಯೂ ಅವರ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡುವುದಾಗಿ ತಿಳಿಸಿದರು.

ಶ್ರೀ ಪದ್ಮಶಾಲಿ ಸಮಾಜ ವತಿಯಿಂದ ಆಯ್ಕೆಯಾಗಿರುವ ಕೆ.ಕಾಳಪ್ಪನವರಿಗೆ ಸನ್ಮಾನಿಸಿ ಮಾತನಾಡಿದ ಸಮಾಜದ ಉಪಾಧ್ಯಕ್ಷರಾದ ಷಣ್ಮುಖಪ್ಪ ಚಿಲವೇರಿ ನಮ್ಮ ಸಮಾಜ ಅತ್ಯಂತ ಹಿಂದುಳಿದ ಜನಾಂಗವಾಗಿದ್ದು, ಇಂತಹ ಸಣ್ಣ ಸಮಾಜದಲ್ಲಿ ಕಷ್ಟಪಟ್ಟು ಶ್ರದ್ಧೆಯಿಂದ ಬೆಳೆದು ದೊಡ್ಡ ಉದ್ಯಮಿಯಾಗಿರುವ ಕೆ.ಕಾಳಪ್ಪನವರಿಗೆ ಇಂತಹ ದೊಡ್ಡ ಹುದ್ದೆ ಲಭಿಸಿರುವುದು ನಮ್ಮ ಸಮಾಜಕ್ಕೆ ಅತ್ಯಂತ ಸಂತಸ ತಂದಿದೆ, ಇಂತಹ ಇನ್ನೂ ಹಲವಾರು ಹುದ್ದೆಗಳು ಇವರಿಗೆ ದೊರೆಯಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ನಾರಾಯಣ ವಗ್ಗ, ಲಕ್ಷ್ಮಣಪ್ಪ ಬಡಗಲ್, ಶಿರಸಾಲೆ ವೆಂಕಟೇಶಪ್ಪ, ಕೊಂಕತಿ ಕಣಿವೆಪ್ಪ, ನೇಕಾರ್ ಸಂಜೀವಕುಮಾರ್, ಗೋಪಾಲ ಜಕ್ಕ, ವಿಠಲ್ ಗಾಜಲ್, ಹನುಮಂತಪ್ಪ ಚಿಲಕ, ಚಿಲವೇರಿ ಶಿವರಾಜ, ಕೃಷ್ಣ ಕೊಂಕತಿ, ಜೇರಬಂಡಿ ವೀರೇಶ, ಮಾರ್ಕಂಡಯ್ಯ ನೀಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.