Breaking News

ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಿ ತಮ್ಮತನಉಳಿಸಿಕೊಳ್ಳಬೇಕಿದೆ-ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಅಭಿಮತ

Journalists should act with social responsibility and maintain their identity – senior journalist K. Ningajja Abhima

ಜಾಹೀರಾತು


ಹಗರಿಬೊಮ್ಮನಹಳ್ಳಿ: ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯೊಂದಿಗೆ ತಮ್ಮತನ ಉಳಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಹೇಳಿದರು.
ಅವರು
ಹಗರಿಬೊಮ್ಮನಹಳ್ಳಿಯ ಗಂಗಾವತಿ ಭೀಮಪ್ಪ ಸರಕಾರಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ತಾಲೂಕು ಘಟಕದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತರು ಋಣಾತ್ಮಕ ವರದಿಗಳ ಮೂಲಕ ಸಾಮಾಜಿಕ ವಿಘಟನೆ ಮಾಡದೇ ಧನಾತ್ಮಕ ವರದಿ ಮಾಡಿ ಶೋಷಿತ,ಧಮನಿತರು ಮುಖ್ಯವಾಹಿನಿಗೆ ಬರುವಂತಾಗಬೇಕು. ಪೂರ್ವಪರ ಚಿಂತನೆ ಇಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಋಣಾತ್ಮಕ ವರದಿಗಳು ಹೆಚ್ಚು ವರದಿಗಳು ಪ್ರಸಾರ ಮತ್ತು ಪ್ರಕಟವಾಗುತ್ತಿರುವುದರಿಂದ ಸಮಾಜ ಮತ್ತು ರಾಜಕೀಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ದೇಶ ಎದುರಿಸುತ್ತಿದೆ. ಪತ್ರಕರ್ತರ ಧನಾತ್ಮಕ ಚಿಂತನೆಯಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಇದರಿಂದ ಪ್ರಜಾಪ್ರಭುತ್ವ, ಸಂವಿಧಾನದ ಆಶಯ ಅನುಷ್ಠಾನವಾಗುತ್ತದೆ.ಪತ್ರಕರ್ತರಿಗೆ ಸಂಘಟನೆ ಅವಶ್ಯ,ಸಂಘಟನೆ ಮೂಲಕ ಸೇವಾಭದ್ರತೆ ಹಾಗೂ ನವೀಕರಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪತ್ರಕರ್ತರ ದಿನಾಚರಣೆಗೆ ಚಾಲನೆ ನೀಡಿದ
ಶಾಸಕ ನೇಮಿರಾಜ ನಾಯ್ಕ
ರವರು ನೆರವೇರಿಸಿದರು. ಮಾತನಾಡಿ, ಪತ್ರಕರ್ತರು ಸೇವಾಭದ್ರತೆ ಇಲ್ಲದೇ ಸಮಾಜದಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಸರಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸಿ ದೇಶದ ಅಭಿವೃದ್ಧಿಗೆ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಾರೆ. ಹಂಗರಿ ಬೊಮ್ಮನಹಳ್ಳಿ ಪಟ್ಟಣ ಮತ್ತು ಗ್ರಾಮೀಣ ಪತ್ರಕರ್ತರಿಗೆ ಆದ್ಯತೆ ಮೇರೆ ನಿವೇಶ ಮತ್ತು ಮನೆ ನಿರ್ಮಿಸಿ ಕೊಡಲಾಗುತ್ತದೆ ಎಂದರು. ಪ್ರಸ್ತಾವಿಕವಾಗಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷ‌ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ,ಪತ್ರಕರ್ತರಿಗೆ ಸೇವಾಭದ್ರತೆ ಇಲ್ಲ ಕಾರ್ಮಿಕ ಇಲಾಖೆಯ ನಿಯಮದಂತೆ ಪತ್ರಿಕೆಗಳ ಮಾಲೀಕರು ಪತ್ರಕರ್ತರು ಮತ್ತು ಸಿಬ್ಬಂದಿಗಳಿಗೆ ಯಾವುದೆ ಸೌಕರ್ಯ ಕೊಡುತ್ತಿಲ್ಲ.ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದ ಸಭೆಯಲ್ಲಿ ಸಮಸ್ಯೆಗಳ ಕುರಿತು ಗಮನ ಸೆಳೆದು ಮನವಿ ಸಲ್ಲಿಸಲಾಯಿತು ಎಂದರು.
ಕಾರ್ಯಕ್ರಮದ
ಸಾನಿಧ್ಯವನ್ನು ಪೂಜ್ಯ
ಸೋಮಶಂಕರ ಮಹಾಸ್ವಾಮಿಗಳು, ಡಾ.ಮಹೇಶ್ವರ ಮಹಾಸ್ವಾಮಿಗಳು, ಶಿವಲಿಂಗ ರುದ್ರಮುನಿ ಸ್ವಾಮಿಗಳು ಹಾಗೂ ಅಭಿನವ ಶ್ರೀ ಹಾಲ ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಎಂ. ಶಿವಮೂರ್ತಿ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾಲಯದ ಜಾನಪದ ಅಧ್ಯಯನದ ಮುಖ್ಯಸ್ಥ ಡಾ.ಮಂಜುನಾಥ ಬೇವಿನಕಟ್ಟಿ , ರಾಜ್ಯ ರೈತ ಸಂಘದ ಕಾರ್ಯದರ್ಶಿ ವೀರ ಸಂಗಯ್ಯ,ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್, ಸಂಘಟನೆಯ ರಾಜ್ಯ ಕಾರ್ಯದರ್ಶಿ ಇಸಾಕ್,ಬರಹಗಾರ ಹುರಕಡ್ಲಿ ಶಿವಕುಮಾರ,ಜೆಡಿ ಎಸ್ ಮುಖಂಡ ವೈ.ಮಲ್ಲಿಕಾರ್ಜುನ, ಬದಾಮಿ ಸೇರಿ ಅನೇಕರಿದ್ದರು.

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.