ಗಂಗಾವತಿ: ದೇಶದ ವಿಮಾ ಕ್ಷೇತ್ರದ ಮೇಲೆ ವ್ಯಾಪಕ ಪರಿಣಾಮ ಬೀರುವ. ( ಐಆರ್‌ಡಿಎ)ನಿಯಮಾಳಿಗಳನ್ನು ತಿದ್ದುಪಡಿ ಮಾಡಲು ಮುಂದಾಗಿರುವ ಕೇಂದ್ರ ಸರಕಾರದ ನೀತಿ ವಿರುದ್ಧ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ನಗರ ಎಲ್‌ಐಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಹಾಗೂ ಲಿಖೈ ಸ್ಥಳೀಯ ಅಧ್ಯಕ್ಷ ಎಂ.ನಿರುಪಾದಿ ಬೆಣಕಲ್ ಮಾತನಾಡಿ, ೧೯೫೬ ರಲ್ಲಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಎಲ್ಲಾ ಖಾಸಗಿ ವಿಮಾ ಕಂಪನಿಗಳನ್ನು ಒಂದು ಗೂಡಿಸಿ ಕೇಂದ್ರ ಸರಕಾರದ ಗ್ಯಾರಂಟಿಯೊAದಿಗೆ ಎಲ್‌ಐಸಿ ಸ್ಥಾಪನೆಯಾಗಿದ್ದು ಪ್ರತಿಯೊಬ್ಬ ಭಾರತೀಯರ ಆರ್ಥಿಕ ಭದ್ರತೆಗಾಗಿ ವಿಮಾ ಮಾರಾಟ ಮಾಡಿ ಸಾಮಾಜಿಕ ಭದ್ರತೆಯ ಅಭಯ ನೀಡಿದ್ದು ನಂತರ ೪೦ ವರ್ಷಗಳ ಕಾಲ ಎಲ್‌ಐಸಿ ದೇಶ ನಿರ್ಮಾಣದಲ್ಲಿ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಕೇಂದ್ರ ರಾಜ್ಯ ಸರಕಾರಗಳ ಮೂಲಕ ಖರ್ಚು ಮಾಡಲಾಗಿದೆ. ನಂತರ ಐಆರ್‌ಡಿಎ ರಚನೆ ಮಾಡಿ ಕೆಲ ನಿಯಮಗಳನ್ನು ಬದಲಿಸಿದ್ದು ಎಲ್‌ಐಸಿ ಮತ್ತು ಪ್ರತಿನಿಧಿಗಳ ಶಕ್ತಿ ಕುಂದಿಸುವ ಕಾರ್ಯ ಮಾಡಲಾಗುತ್ತಿದೆ. ಐಆರ್‌ಡಿಎ ಕಾಯ್ದೆಗೆ ತಿದ್ದುಪಡಿ ಮಾಡಲು ಪುನಹ ಸಂಸತ್ತಿನಲ್ಲಿ ಕಾಯ್ದೆ ಮಂಡನೆ ಮಾಡಲು ಹೊರಟಿರುವುದನ್ನು ದೇಶವ್ಯಾಪಿಯಾಗಿ ಖಂಡಿಸಿ ಎಲ್‌ಐಸಿ ಕಚೇರಿ ಮುಂದೆ ಧರಣಿ ಸತ್ಯಗ್ರಹ ನಡೆಸಿ ಕೇಂದ್ರದ ನೀತಿಯನ್ನು ಖಂಡಿಸಲಾಗಿದೆ. ಕೇಂದ್ರ ಸರಕಾರ ಐಆರ್‌ಡಿಎ ಕಾಯ್ದೆಗಳ ತಿದ್ದುಪಡಿಯನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಸವರಾಜ ಸಜ್ಜನ, ಕುಬೇರಪ್ಪ, ಹುಸೇನಬಾಷಾ, ಹುಸೇನಸಾಬ, ರಾಮಣ್ಣ ಕುರಿ, ನರೇಶ, ಭಾರತಿ, ನಿಜಲಿಂಗಪ್ಪ, ಶ್ರೀನಿವಾಸ, ದುರ್ಗಾಪ್ರಸಾದ, ವಲಿಮೋಹಿಯುದ್ದೀನ್, ಖಾಜವಲಿ, ಕಳಕಪ್ಪ, ಶ್ರೀನಿವಾಸ ಆನೆಗೊಂದಿ,ತಬರೀಶ ಸೇರಿ ಎಲ್‌ಐಸಿ ಪ್ರತಿನಿಧಿಗಳು ಮತ್ತು ವಿಮಾನೌಕರರು ಮತ್ತು ಸಿಐಟಿಯು ಸಂಘಟನೆಯ ಕಾರ್ಯಕರ್ತರಿದ್ದರು.
ಐಆರ್‌ಡಿಎ ತಿದ್ದುಪಡಿ ಖಂಡಿಸಿ ಎಲ್‌ಐಸಿ ಪ್ರತಿನಿಧಿಗಳಿಂದ ಪ್ರತಿಭಟನೆ LIC representatives protest against IRDA amendment
ಜಾಹೀರಾತು