Breaking News

ಬಿರುಬಿಸಿಲ ದಾಹ ನೀಗಿಸುವ ನೀರಿನ ಅರವಟ್ಟಿಗೆ:ನಿಟ್ಟುಸಿರು ಬಿಡುತ್ತಿರುವಸಾರ್ವಜನಿಕರು

The public is sighing at the sudden burst of thirst-quenching water


ಗಂಗಾವತಿ:16 ಗಂಗಾವತಿ ನಗರದಲ್ಲಿ ದಲಿತ ಸಂಘಟನಾ ಸಮಿತಿ (ಭೀಮ ಘರ್ಜನೆ) ವತಿಯಿಂದ ನೀರಿನ ಅರವಟ್ಟಿಗೆ ಉದ್ಘಾಟನೆ,
ನಂತರ ಉದ್ಘಾಟಿಸಿ ಮಾತನಾಡಿದ ದಲಿತ ಸಂಘಟನೆ ಸಮಿತಿ (ಭೀಮ ಘರ್ಜನೆ) ಕೊಪ್ಪಳ ಜಿಲ್ಲಾಧ್ಯಕ್ಷ ಅಜಯಕುಮಾರ ಛಲವಾದಿ ಅವರು ನಗರದಲ್ಲಿ ಬಿಸಿಲಿನ ಪ್ರಖರತೆ ತೀವ್ರಗೊಳ್ಳುತ್ತಿದ್ದು, ಬಾಯಾರಿ ಬಳಲುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ದುಡ್ಡು ಕೊಟ್ಟು ಅಂಗಡಿಗಳಲ್ಲಿ ಷರಬತ್ತು ಕುಡಿಯಲು ಆಗದ ಬಡ ಜನರಿಗೆಂದೇ ನೀರಿನ ಅರವಟ್ಟಿಗೆಗಳೂ ಮಾರ್ಚ್‌ ತಿಂಗಳಲ್ಲೇ ಆರಂಭವಾಗುತ್ತಿವೆ.
ಬಿಸಿಲಿನ ಪರಿಣಾಮವಾಗಿ ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೂ ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರವೂ ಕಡಿಮೆಯಾಗಿದೆ. ಸಂಜೆ 4 ಗಂಟೆಯಾದರೂ ಚುರುಗುಟ್ಟುವ ಬಿಸಿಲು ಇರುವುದರಿಂದ, ನೂರಾರು ಆಸ್ಪತ್ರೆ ಕೋರ್ಟ್ ಪೊಲೀಸ್ ಠಾಣೆಗೆ,ಪೊಸ್ಟ್ ಆಫೀಸ್ ಗೆ, ಶಾಲಾ ವಿದ್ಯಾರ್ಥಿಗಳು ಹೆಚ್ಚು ದಣಿಯುತ್ತಿದ್ದಾರೆ. ದೂರದ ಊರುಗಳಿಂದ ಬರುವವರು ಹಾಗೂ ಸಾರ್ವಜನಿಕರಿಗೆ ಅರವಟ್ಟಿಗೆಗಳು ಬಾಯಾರಿಕೆ ತಣಿಸಿ ಸಮಾಧಾನ ನೀಡುತ್ತಿವೆ.
ಮೂರು ತಿಂಗಳು: ಸಾಮಾನ್ಯವಾಗಿ ಪತ್ರಿ ವರ್ಷ ನಗರದಲ್ಲಿ ಅರವಟ್ಟಿಗೆಗಳು ಏಪ್ರಿಲ್‌ ತಿಂಗಳಿನಲ್ಲಿ ಆರಂಭವಾಗುತ್ತಿದ್ದವು. ಆದರೆ ಈ ಬಾರಿ ಮಾರ್ಚ್‌ ಮೊದಲ ವಾರದಲ್ಲೇ ಆರಂಭವಾಗಿವೆ. ಇದು, ಬಾಯಾರುವ ಜನರ ಬವಣೆಯನ್ನು ದಾನಿಗಳು ಮನಗಂಡ ಪರಿಣಾಮ.
ಇನ್ನೊಂದು ವಿಶೇಷ ಎಂದರೆ, ಪ್ರತಿ ವರ್ಷ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮಾತ್ರ ಅರವಟ್ಟಿಗೆಗಳನ್ನು ಸ್ಥಾಪಿಸಲಾಗುತ್ತಿತ್ತು. ಆದರೆ ಈ ಬಾರಿ, ನೀರಿನ ಕೊರತೆಯ ಸಮಸ್ಯೆಯೂ ಇರುವುದರಿಂದ, ಮೂರು ತಿಂಗಳ ಕಾಲ ಅರವಟ್ಟಿಗೆಯನ್ನು ನಡೆಸಲು ಹಲವರು ನಿರ್ಧರಿಸಿದ್ದೇವೆ.
ವಿವಿಧೆಡೆ ಗಂಗಾವತಿ ಬಸ್ಸು ನಿಲ್ದಾಣ ಮುಂಭಾಗದಲ್ಲಿ ಇರುವ ಬಸವೇಶ್ವರ ವೃತ್ತ,ಕೋರ್ಟ್‌ ಮುಂಭಾಗದಲ್ಲಿ ಸೇರಿದಂತೆ ವಿವಿಧೆಡೆ ಅರವಟ್ಟಿಗೆಗಳನ್ನು ಇಡಲಾಗಿದೆ.
ಈ ಸಂದರ್ಭದಲ್ಲಿ ದಲಿತ ಸಂಘಟನಾ ಸಮಿತಿ (ಭೀಮ ಘರ್ಜನೆ) ತಾಲೂಕು ಅಧ್ಯಕ್ಷ ಸುರೇಶ ಮಾಳೇಮನಿ,ಸಂಘಟನೆ ಪದಾಧಿಕಾರಿಗಳಾದ ಡಿ.ರಮೇಶ,ಜಂಭಣ್ಣ,ಪರಶುರಾಮ ನಾಯಕ,ವೆಂಕಟೇಶ ಉಪ್ಪಾರ,ಮುತ್ತುರಾಜ ಅಮರಾವತಿ, ಯಮನಪ್ಪ,ಸೇರಿದಂತೆ ಇತರರು ಇದ್ದರು

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.