B++ Grade Accreditation for Govt First Class College.
ವರದಿ ಸಚೀನ ಜಾಧವ
ಸಾವಳಗಿ: ಕಳೆದ ಜುಲೈ 13 ಮತ್ತು 14 ರಂದು ಪಟ್ಟಣದ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ ತಂಡ ಕಾಲೇಜಿನ ಮೂಲಭೂತ ಸೌಲಭ್ಯಗಳ ಪರಿಶೀಲಿಸಿ ಕಾಲೇಜಿಗೆ ಬಿ++ ಗ್ರೇಡ ಮಾನ್ಯತೆ ನೀಡಿದೆ ಎಂದು ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ ಮಂಜುನಾಥ ತ್ಯಾಳಗಡೆ ತಿಳಿಸಿದರು.
ನ್ಯಾಕ ತಂಡ ಭೇಟಿ ನೀಡಿ ಬಿ++ ಗ್ರೇಡ್ ಮಾನ್ಯತೆ ನೀಡಿರುವ ಕಾರಣ ಈ ಕುರಿತು ಮಾಹಿತಿ ನೀಡಿ. ಅವರು ನ್ಯಾಕ ಪೀರ್ ತಂಡವು ಭೇಟಿ ನೀಡಿ ಕಾಲೇಜಿನ ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಮಾಹಿತಿ ತಂತ್ರಜ್ಞಾನ ಬಳಕೆ, ವಿದ್ಯಾರ್ಥಿಗಳ ಫಲಿತಾಂಶ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ಗ್ರಂಥಾಲಯ ಬಳಕೆ ಕ್ರೀಡಾ ಕಾರ್ಯ ಚಟುವಟಿಕೆ ಎನ್.ಎಸ್.ಎಸ್ ನ್ಯಾಕ ತಂಡದ, ನ್ಯಾಕ ಪೀರ್ ತಂಡದವರಾದ ಹಿಮಾಚಲ ಪ್ರದೇಶದಿಂದ ಪ್ರೊ ಡಾ. ಆರ್. ಕೆ. ಗುಪ್ತಾ, ಛತ್ತೀಸಗಢದಿಂದ ಡಿ. ಆರ್. ಎಸ್. ಆರ್. ಕಮಲೇಶ್, ಮಹಾರಾಷ್ಟ್ರದಿಂದ ಪ್ರಶಾಂತ್ ಎಸ್. ಅಮೃತಕಾರ ತಂಡದವರು ಬೇಟಿ ನೀಡಿ ಪರಿಶೀಲನೆ ಮಾಡಿದರು.
ಕಾಲೇಜಿನ ಅಧ್ಯಾಪಕರು ಸದಸ್ಯರು ಸೇರಿದಂತೆ ವಿದ್ಯಾರ್ಥಿಗಳ ಪರಿಶ್ರಮದಿಂದ ಆಯಾಮಗಳಲ್ಲಿ ಶೈಕ್ಷಣಿಕ ಗುಣಮಟ್ಟದ ಕುರಿತು ವರದಿ ಮಾಡಿರುತ್ತಾರೆ. ಎರಡು ವರದಿಗಳನ್ನು ಆದರಿಸಿ ನ್ಯಾಕ ತಂಡವು 2.94 ಅಂಕದೊಂದಿಗೆ ಬಿ++ ಶ್ರೇಣಿಯೋಂದಿಗೆ ಉತ್ತಮ ಮಾನ್ಯತೆ ಹೊಂದಿದೆ.
ಸಂಭ್ರಮಾಚರಣೆ: ಈ ಸಂದರ್ಭದಲ್ಲಿ ಡಿಜೆ ಸೌಂಡ್ ಹಚ್ಚಿ ಕಾಲೇಜಿನ ಅಧ್ಯಾಪಕ- ಅಧ್ಯಾಪಕ್ಕಿಯರು, ವಿದ್ಯಾರ್ಥಿಗಳು ಸೇರಿ ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದರು.