Breaking News

ಕೊಪ್ಪಳ ಜೆಸ್ಕಾಂ ಕಾರ್ಯ & ಪಾಲನೆ ಘಟಕ-02ನ್ನು ಕಿನ್ನಾಳಗೆ ಸ್ಥಳಾಂತರ

Shifting of Koppal JESCOM Work & Maintenance Unit-02 to Kinna
Community-verified icon








ಕೊಪ್ಪಳ ಜುಲೈ 21 (ಕರ್ನಾಟಕ ವಾರ್ತೆ): ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ ಕಾರ್ಯ ಮತ್ತು ಪಾಲನೆ ಘಟಕ-02ನ್ನು ಕಿನ್ನಾಳ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೊಪ್ಪಳ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಿಂದ ಕಾರ್ಯ ಮತ್ತು ಪಾಲನೆ ಘಟಕ-02 ಪ್ರಸ್ತುತ ಕೊಪ್ಪಳ ಉಪ-ವಿಭಾಗದ ಆವರಣದಲ್ಲಿ ಇರುವುದನ್ನು ವಿದ್ಯುತ್ ಸಂಪರ್ಕ ಹಾಗೂ ಬಿಲ್ಲುಗಳ ಬಗ್ಗೆ ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ಜಿಲೈ 20ರಿಂದಲೇ ಜಾರಿಗೆ ಬರುವಂತೆ ಕಾರ್ಯ ಮತ್ತು ಪಾಲನೆ ಘಟಕ-02ನ್ನು ಕಿನ್ನಾಳ ಗ್ರಾಮದಲ್ಲಿ ಸ್ಥಳಾಂತರಿಸಲಾಗಿದೆ. ಕಿನ್ನಾಳ್, ಬಸಾಪುರ, ಕಿಡದಾಳ್, ಓಜನಹಳ್ಳಿ, ಚಿಲವಡಗಿ, ಯತ್ನಟ್ಟಿ, ಮಾದನೂರು, ಮುದ್ಲಾಪುರ, ನರೆಗಲ್ಲು, ಟನಕಕಲ್ಲು, ಹನುಮನಹಟ್ಟಿ, ಸಂಗಾಪುರ, ಲೇಬಗೇರಿ, ಹಟ್ಟಿ (ಎಲ್), ತಾಳಕನಕಾಪುರ, ಕಲಕೇರಿ, ಬುಡಶೇಟ್‌ನಾಳ್, ದೇವಲಪುರ, ಕಾಮನೂರು, ಅಬ್ಬಿಗೇರಿ ಮತ್ತು ಕೆಂಚಿನದೋಣಿ ತಾಂಡ, ಈ ಎಲ್ಲಾ ಗ್ರಾಮಗಳ ಗ್ರಾಹಕರು ವಿದ್ಯುತ್‌ಗೆ ಸಂಬಂದಿಸಿದಂತೆ ಎಲ್ಲಾ ಕೆಲಸ ಕಾರ್ಯಗಳಿಗಾಗಿ ಕಾರ್ಯ ಮತ್ತು ಪಾಲನೆ ಘಟಕ-02 ಕಿನ್ನಾಳ ಕಚೇರಿಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು

About Mallikarjun

Check Also

ಮಾರ್ಟಳ್ಳಿ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!

Universe corruption in Manrega scheme in Martalli Panchayat..! ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.