Breaking News

ನಮ್ಮ ಚಾಮರಾಜನಗರ ಜಿಲ್ಲೆ ಜಾನಪದ ಸಾಹಿತ್ಯದ ತವರೂರು : ಕವಿ ಶಾಂತರಾಜು

Our Chamarajanagar district is the birthplace of folk literature: poet Shantraju


ಚಾಮರಾಜನಗರ ತಾಲೂಕಿನ ಬಾಗಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೩’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲೆ ಚಲನಶೀಲ ನಾಡು. ಪ್ರಪಂಚದಲ್ಲೇ ಎರಡನೇ ಅತಿದೊಡ್ಡ ಮತ್ತು ಹೆಚ್ಚಿನ ಜಾನಪದ ಸಾಹಿತ್ಯ ಪ್ರಕಾರಗಳನ್ನು ಕೊಟ್ಟ ಜಿಲ್ಲೆ ನಮ್ಮದು. ಅವು ಶ್ರೀ ಮಲೆಮಹದೇಶ್ವರ, ಶ್ರೀ ಮಂಟೇಸ್ವಾಮಿ ಮತ್ತು ಶ್ರೀ ಬಿಳಿಗಿರಿರಂಗನ ಮಹಾಕಾವ್ಯಗಳಾಗಿವೆ. ಇದಕ್ಕೆ ನಾವು ಹೆಮ್ಮೆ ಪಡಬೇಕು. ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ – ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಪ್ರಮುಖವಾಗಿವೆ. ಜನರಿಂದ ಜನರಿಗೆ, ನಾಲಿಗೆಯಿಂದ ನಾಲಿಗೆಗೆ ಹೃದಯದಿಂದ ಹೃದಯಕ್ಕೆ ಜನಪದ ರಸವಾಕ್ಯಗಳು ತಟ್ಟಿ ಹೊಸ ಸಾರ್ಥಕ ಬದುಕಿಗೆ ನಿದರ್ಶನವಾಗಿ ಜಾನಪದ ಗೀತೆಗಳು ಬಾಳಿವೆ. ನಮ್ಮ ಪೂರ್ವಜರಿಗೆ ಬದುಕಿನ ಬಗ್ಗೆ ಎಷ್ಟೊಂದು ಆಸ್ಥೆ ಇತ್ತೋ, ಅಷ್ಟೇ ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿ ಇತ್ತು. ಬದುಕು ಕೇವಲ ನಿಂತ ನೀರಲ್ಲ. ಪ್ರತಿನಿತ್ಯ ಬಾಳನ್ನು ಸಂಸ್ಕರಿಸಬೇಕು. ದುಃಖ-ಸುಖಗಳಲ್ಲೂ ತಟಸ್ಥ ಭಾವ ಇರಬೇಕು. ಬರುವ ಕಷ್ಟಗಳಿಗೆ ಎದುರಿಸುವ ಧೈರ್ಯವಿರಬೇಕು. ಬಾಳು ಗಂಭೀರವಾಗಿ ಕಂಡರೂ ಸರ್ವಕಾಲಕ್ಕೂ ಖುಷಿಯಿಂದ ಜೀವಿಸಬೇಕು ಎಂಬುವ ಅನೇಕ ಉದಾತ ವಿಚಾರಗಳು ನಮ್ಮ ಜನರದು. ಅಂತಲೆ ನಮ್ಮ ನಡುವೆ ಗಾದೆಗಳು, ಒಗಟುಗಳು, ಕುಟ್ಟುವ, ಬೀಸುವ, ನೀತಿಯ, ಸೋಬಾನ, ಕಥೆಗಳು ಬಿತ್ತರಿಸುವ ಪದಗಳು ಹುಟ್ಟಿಕೊಂಡವು. ಇಡೀ ಜಗತ್ತಿನ ಸಾಹಿತ್ಯದ ಮೂಲವನ್ನೇಲ್ಲ ಜನಪದ ಸಾಹಿತ್ಯದಲ್ಲಿ ಕಾಣಬಹುದು. ಅದಕ್ಕೆ ನಮ್ಮ ಬಿಎಂಶ್ರೀ ಅವರು ಜನಪದ ಸಾಹಿತ್ಯವನ್ನು ‘ಜನವಾಣಿ ಬೇರು; ಕವಿವಾಣಿ ಹೂವು’ ಎಂದು ಕರೆದಿದ್ದಾರೆ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಶಂಕರ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಅದು ಮನುಷ್ಯನಿಗೆ ಬದುಕುವ ದಾರಿಯನ್ನು ತೋರಿಸುತ್ತದೆ. ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ತಿಳಿಸಿಕೊಡುವ ಕಾರ್ಯವನ್ನು ನಾವು ಮಾಡಬೇಕು. ಈ ಪ್ರತಿಷ್ಠಾನವು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಪ್ರತಿಭೆಗಳನ್ನು ಗುರುತಿಸಿ, ಹೊರತರುವ ಪ್ರಯತ್ನವನ್ನು ಮಾಡಬೇಕು ಎಂದರು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕರಾದ ಇಂದ್ರಾ, ದಮಯಂತಿ, ಸರ್ವಮಂಗಳ, ಶ್ವೇತ, ಶಾಲಾ ಸಿಬ್ಬಂದಿಗಳು, ಗುರುಬಸಪ್ಪ, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.