Breaking News

ಶ್ರೀಕನಕದಾಸರ ಜಯಂತ್ಯುತ್ಸವ ಅದ್ದೂರಿ ಆಚರಣೆ ನಿರ್ಧಾರ

Srikanakadasa’s Jayantyutsava grand celebration decision…



ಗಂಗಾವತಿ: ದಾಸ ಸಾಹಿತ್ಯಕ್ಕೆ ವಿಶೇಷ ಕೊಡುವ ನೀಡಿ ಜಾತಿ ವ್ಯವಸ್ಥೆ ವಿರುದ್ಧ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದ ಶ್ರೀ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಶಾಲಾ ಕಾಲೇಜು ಮಕ್ಕಳು ಸಮಾಜದ ಸಂಘ ಸಂಸ್ಥೆಗಳ ಪದಾದಿಕಾರಿಗಳು ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಅದ್ದೂರಿ ಆಚರಣೆಗೆ ಸಹಕರಿಸುವಂತೆ ಗ್ರೇಡ್ ೨ ತಹಸೀಲ್ದಾರ್ ಮಹಾಂತಗೌಡ ಹೇಳಿದರು.
ಅವರು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶ್ರೀ ಕನಕದಾಸರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕನಕದಾಸರು ಯಾವುದೇ ಒಂದು ಧರ್ಮ ಮತ್ತು ಜಾತಿಗೆ ಸೇರಿದವರಲ್ಲ. ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸಿದ ಮಹಾನ್ ವ್ಯಕ್ತಿಯಾಗಿದ್ದು ಇದರ ಜೀವನ ಮೌಲ್ಯಗಳನ್ನು ತಿಳಿಯುವ ಮೂಲಕ ಸೌಹಾರ್ಧ ಬದುಕು ನಡೆಸಲು ಪ್ರೇರಣೆಯಾಗಬೇಕೆಂದರು. ತಾಲೂಕು ಕನಕದಾಸ ಕುರುಬರ ಸಂಘದ ಅಧ್ಯಕ್ಷ ಯಮನಪ್ಪ ವಿಠಲಾಪೂರ ಮಾತನಾಡಿ, ಮಹನೀಯರ ಜಯಂತ್ಯುತ್ಸವಗಳನ್ನು ಇತ್ತೀಚೆಗೆ ಜಾತಿಗೆ ಸೀಮಿತ ಮಾಡುತ್ತಿರುವುದು ಅವರಿಗೆ ಮಾಡುವ ಅಪಚಾರವಾಗಿದೆ. ಮಹನೀಯರ ಜಯಂತ್ಯುತ್ಸವದ ಸಂದರ್ಭದಲ್ಲಿ ಜಾತಿ ಬೇಧ ಮರೆತು ಎಲ್ಲರೂ ಪಾಲ್ಗೊಳ್ಳಬೇಕು. ನ.೩೦ ರಂದು ಶ್ರೀಕನಕದಾಸರ ಜಯಂತ್ಯುತ್ಸವದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಶ್ರೀಕನಕದಾಸರ ವೃತ್ತದಲ್ಲಿ ರಸ್ತೆ ಗುಂಡಿ ಮುಚ್ಚಬೇಕು. ಹೈಮ್ಯಾಸ್ಟ ದೀಪ ದುರಸ್ತಿ ಮಾಡಬೇಕು. ಅಂದು ವಾಹನಗಳ ಸಂಚಾರ ಮಾರ್ಗ ಬದಲಿಸಬೇಕು. ಎಲ್ಲಾ ಜನಪ್ರತಿನಿಧಿಗಳನ್ನು ಕರೆದು ಗೌರವಿಸಲು ತಾಲೂಕು ಆಡಳಿತ ನೆರವಾಗುವಂತೆ ಮನವಿ ಮಾಡಿದರು.
ಸಭೆಯಲ್ಲಿ ಹಾಲುಮತ ಕುರುಬ ಸಮಾಜದ ಕೆ.ನಾಗೇಶಪ್ಪ, ಸಣ್ಣ ನೀಲಪ್ಪ, ಮೋರಿ ದುರುಗಪ್ಪ, ಅಡ್ಡಿ ಶಾಮಣ್ಣ, ಬೆಟ್ಟಪ್ಪ ಬೆಣಕಲ್, ಹೊಸಳ್ಳಿ ಶಿವು, ಸಾಯಿಕುಮಾರ ವಕೀಲ, ಅಧಿಕಾರಿಗಳಾದ ರವಿ, ಸಂತೋಷ ಪಟ್ಟದಕಲ್ಲು, ನಾಗರಾಜ., ಚೇತನಕುಮಾರ, ಕೊಟ್ರೇಶಯ್ಯ, ಗೋಪಾಲ, ರಂಗಸ್ವಾಮಿ ಸೇರಿ ಅನೇಕರು ಪಾಲ್ಗೊಂಡಿದ್ದರು.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.