Breaking News

ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ : ಸಾಹಿತಿ ನವಮಿ ಬಂಡಿಗೆರೆ.

Cultivate the habit of reading Kannada newspapers : Saathi Navami Bandigere.


ಚಾಮರಾಜನಗರದ ಸರ್ಕಾರಿ ಆದರ್ಶ ವಿದ್ಯಾಲಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೩’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಕನ್ನಡದ ಬಗ್ಗೆ ನಿಮ್ಮ ಜ್ಞಾನ ಹೆಚ್ಚಾಗಲಿದೆ. ಯುವಸಮುದಾಯದಲ್ಲಿ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ದಶ್ಯ ಮಾದ್ಯಮಗಳ ವೀಕ್ಷಣೆ ಹೆಚ್ಚುತ್ತಿದೆ, ಆದರೆ ದಶ್ಯ ಮಾಧ್ಯಮ ನಮ್ಮ ಕಲ್ಪನೆಗಳನ್ನು ಬೆಳೆಸುವುದಿಲ್ಲ, ನಮ್ಮ ಕಲ್ಪನೆಯನ್ನು ಹುಟ್ಟುಹಾಕಿ, ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಪತ್ರಿಕಾ ಮಾಧ್ಯಮದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿ ಜೀವನದಿಂದಲೇ ಪತ್ರಿಕೆಯನ್ನು ಓದಲು ಪ್ರಾರಂಭಿಸಿದರೆ ಧೆರ್ಯ ಹಾಗೂ ಅನುಭವ ಹೆಚ್ಚಾಗುತ್ತದೆ. ಮನುಷ್ಯ ಬೆಳೆಯುವುದು ಕ್ರಿಯೆ-ಪ್ರಕ್ರಿಯೆ ಮೂಲಕ. ದಶ್ಯ ಮಾಧ್ಯಮಗಳು ಬಂದ ಮೇಲೆ ಜನರ ಕಲ್ಪನೆ ಸಾಯುತ್ತಿದೆ. ಕೆಲವು ಕೆಟ್ಟ ಸಂಪ್ರದಾಯಗಳನ್ನು ಅವು ಹುಟ್ಟು ಹಾಕುತ್ತಿವೆ. ಆದರೆ ಪತ್ರಿಕಾ ಮಾಧ್ಯಮ ಹಾಗಲ್ಲ. ಅದು ಇನ್ನೂ ಜೀವಂತವಾಗಿದೆ, ನೇರವಂತಿಕೆಯಿದೆ. ಆದ್ದರಿಂದ ದಶ್ಯಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮ ಒಂದೇ ಅಲ್ಲ. ವಿದ್ಯಾರ್ಥಿಗಳು ಟಿ.ವಿ.ನೋಡುವುದನ್ನು ಕಡಿಮೆ ಮಾಡಿ, ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಶಿಕ್ಷಕ ಅರ್ಕಪ್ಪ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸುಧಾರಣೆಗೆ ಕಾರಣವಾಗುವ ಪತ್ರಿಕಾರಂಗವು ಸಮಾಜಕ್ಕೆ ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಇಲ್ಲದಿದ್ದಲ್ಲಿ ಪ್ರಜಾಪ್ರಭುತ್ವವೇ ಇರುತ್ತಿರಲಿಲ್ಲ. ಸಮಾಜದ ಕುಂದುಕೊರತೆಗಳನ್ನು ಸರಕಾರಕ್ಕೆ ತಲುಪಿಸುವಲ್ಲಿ ತನ್ಮೂಲಕ ಸರಕಾರದ ಕಣ್ಣುತೆರೆಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕರಾದ ಲಿಂಗರಾಜು, ಶಾಲಿನಿ, ಮಂಜುನಾಥ, ಲೀಲಾ, ಸುರೇಶ, ಬಸವಣ್ಣ, ಶಿವಕುಮಾರ, ಮಂಜುನಾಥಸ್ವಾಮಿ, ಸಂತೋಷ, ಆಸಿಯಾ, ಬಸವರಾಜು ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.