Breaking News

ಮಂಡ್ಯಕುರುಬರಹಾಸ್ಟೆಲ್ ಮೇಲಿನದಾಳಿ,ಸಿಎಂ ಸಿದ್ದು ವಿರುದ್ಧ ಅವಾಚ್ಯ ಹೇಳಿಕೆಖಂಡಿಸಿಪ್ರತಿಭಟನೆ

Attack on Mandyakurubara Hostel, protest against CM Siddu’s unspoken statement


ಗಂಗಾವತಿ: ಮಂಡ್ಯ ನಗರದಲ್ಲಿ ಹನುಮ ಧ್ವಜ ವಿಚಾರವಾಗಿ ಜರುಗಿದ ಪ್ರತಿಭಟನೆ ವೇಳೆ ಕುರುಬರ ಹಾಸ್ಟೆಲ್ ಮೇಲಿನ ದಾಳಿ, ಶ್ರೀ ಕನಕದಾಸರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ಲೇಕ್ಸ್ ಹರಿದು ಹಾಕಿದ ಘಟನೆ ಹಾಗೂ ಸಂಸದ ಅನಂತಕುಮಾರ ಹೆಗಡೆ ಸಿದ್ದರಾಮಯ್ಯನರನ್ನು ಮಗನೇ ಎಂದು ನಿಂದಿಸಿದ್ದನ್ನು ಖಂಡಿಸಿ ಶ್ರೀ ಕನಕದಾಸ ತಾಲೂಕ ಕುರುಬರ ಸಂಘ,ಶ್ರೀಬೀರಲಿಂಗೇಶ್ವರ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಕನಕದಾಸ ಎಸ್.ಟಿ ಹೋರಾಟ ಸಮಿತಿ, ಶ್ರೀ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವಕ ಸಂಘ, ತಾಲೂಕ ಕುರುಬರ ಸಂಘ ಮತ್ತು ಹಾಲುಮತ ಮಹಾಸಭಾದ ಕಾರ್ಯಕರ್ತರು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮುಖಂಡರಾದ ವಿಠಲಾಪೂರ ಯಮನಪ್ಪ, ಶರಣೇಗೌಡ, ಕೆ.ನಾಗೇಶಪ್ಪ, ಮಂಜುನಾಥ ದೇವರಮನಿ ಹಾಗೂ ಲಕ್ಷö್ಮಣಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರು. ಮಾಜಿ ಸಚಿವ ಸಿ.ಟಿ.ರವಿರವರ ನೇತೃತ್ವದಲ್ಲಿ ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜದ ವಿವಾದದ ಪ್ರತಿಭಟನೆಯ ಮೆರವಣಿಗೆ ಸಮಯದಲ್ಲಿ ಮಂಡ್ಯ ನಗರದ ಬಿ.ಎಂ. ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲು ತೂರಾಟ ಮಾಡಿ ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿ. ದಾಸಶ್ರೇಷ್ಠ ಶ್ರೀ ಕನಕದಾಸರ ಭಾವಚಿತ್ರ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾವಚಿತ್ರ ಹರಿದು ಹಾಕಿ ಆಗೌರವ ಸೂಚಿಸಿರುತ್ತಾರೆ ಮತ್ತು ಸದರಿ ಪ್ರತಿಭಟನಕಾರರು ಅಲ್ಲಿನ ಕೆಲವು ವಾಹನಗಳಿಗೆ ಬೆಂಕಿ ಹಚ್ಚುವ ಹುನ್ನಾರವನ್ನು ಪೊಲೀಸರ ಮಧ್ಯ ಪ್ರವೇಶದಿಂದ ದೊಡ್ಡ ಅನಾಹುತವನ್ನು ತಡೆದಂತಾಗಿದೆ. ಈ ಒಂದು ವಿವಾದವನ್ನು ರಾಜಕೀಯ ದುರುದ್ದೇಶಕ್ಕಾಗಿ ಸೃಷ್ಟಿಸಲಾಗಿದೆ. ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಸಮಾವೇಶವು ಯಶಸ್ವಿಯಾಗಿರುವುದನ್ನು ಸಹಿಸಲಾಗದೆ, ಅಸೂಯೆಯಿಂದ ಸಿಎಂ ಸಿದ್ದರಾಮಯ್ಯರವರನ್ನು ಗುರಿಯಾಗಿಸಿಕೊಂಡು ಇಂತಹ ಹೀನ ಕೃತ್ಯಗಳನ್ನು ಸೃಷ್ಟಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರು ಮತ್ತು ಬಿ.ಜೆ.ಪಿ ಪಕ್ಷದ ಕೆಲ ಮುಖಂಡರು ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಾಡಿನಲ್ಲಿ ಭಯ ಮತ್ತು ದಬ್ಬಾಳಿಕೆಯ ವಾತಾವರಣವನ್ನು ಸೃಷ್ಟಿಸಲು ಹೊರಟಿರುತ್ತಾರೆ. ಈ ದಬ್ಬಾಳಿಕೆ ಮತ್ತು ನೀಚ ಕೃತ್ಯಗಳನ್ನು ಸಮರ್ಥವಾಗಿ ಎದುರಿಸಲು ರಾಜ್ಯದಲ್ಲಿರುವ ಕುರುಬ ಸಮಾಜವು ಶಕ್ತವಾಗಿದೆ. ಕುರುಬ ಸಮಾಜದ ಸಹನೆ ಮತ್ತು ತಾಳ್ಮೆಯನ್ನು ಪರಿಕ್ಷಿಸಬೇಡಿ. ಪಚೋದನಕಾರಿ ಕೃತ್ಯಗಳಿಂದ ಹಿಂದುಳಿದ ವರ್ಗಗಳ ಯುವಕರುಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. ೨೦೨೩ ರ ವಿಧಾನಸಭಾ ಚುನಾವಣೆಗೂ ಮುಂಚೆ ತಾವು ಧರ್ಮ ಧರ್ಮಗಳ ಮಧ್ಯ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಈಗ ಜಾತಿ ಜಾತಿಗಳ ಮಧ್ಯೆ ವಿಷ ಬೀಜವನ್ನು ಬಿತ್ತಿ ವೈರತ್ವವನ್ನು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಮಾಜದಲ್ಲಿ ಸಾಮಾರಸ್ಯದಿಂದ ಕೂಡಿ ಸಹಬಾಳ್ವೆ ಜೀವನ ನಡೆಸುತ್ತಿರುವ ಈ ಎಲ್ಲಾ ಸಮುದಾಯಗಳನ್ನು ಒಡೆದು ಆಳುವ ನೀತಿಯನ್ನು ಈ ಕೂಡಲೇ ನಿಲ್ಲಿಸದಿದ್ದರೆ. ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷಗಳು ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದರಿಸಬೇಕಾಗುತ್ತದೆ ಮತ್ತು ಎರಡು ಪಕ್ಷಗಳಿಗೆ ತಕ್ಕ ರೀತಿಯಲ್ಲಿ ಪಾಠವನ್ನು ಸಹ ಕಲಿಸಬೇಕಾಗುತ್ತದೆ. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕೃತ್ಯವನ್ನು ಎಸಗಿದ ಸಮಾಜ ಘಾತಕರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆಯ ಕ್ರಮ ಕೈಗೊಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಯಮನಪ್ಪ ವಿಠಲಾಪುರ, ಕೆ. ನಾಗೇಶಪ್ಪ, ಯಮನಪ್ಪ ನವಲಿ,ರಾಮಕೃಷ್ಣ ಎಸ್.ಟಿ, ವೆಂಕಟೇಶ ಬಿ., ಬೆಟ್ಟಪ್ಪ ಹುರಕಡ್ಲಿ,ಅಶೋಕಗೌಡ,ಕೆ.ವೆಂಕಟೇಶ ಜಂತಗಲ್, ಸಿದ್ದಲಿಂಗಪ್ಪಗೌಡ, ವೀರನಗೌಡ, ಪುಂಡಗೌಡ, ನೀಲಕಂಠ, ಬಕ್ಕಂಡಿ ಬಸವರಾಜ,ಸಂಗಟಿ ಬಸವರಾಜ, ಫಕೀರಯ್ಯ, ಕೃಷ್ಣ, ಅಯ್ಯಪ್ಪ, ಕಲ್ಲಪ್ಪ,ಗಡ್ಡಿ ಬಸವರಾಜ,ರುದ್ರೇಶ ರ‍್ಹಾಳ, ತಿರುಕಪ್ಪ, ರಾಜಪ್ಪ ಸಂಗಾಪೂರ ಸೇರಿ ನಗರ ಹಾಗೂ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಹಾಲುಮತ ಕುರುಬ ಸಮಾಜದವರಿದ್ದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.