ಕಾವೇರಿ ವನ್ಯ ಜೀವಿ ಅರಣ್ಯದಲ್ಲಿರುವ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ನಿರಂತರ ದಾಳಿ ಅಪಾರ ನಷ್ಟ .‌

H.Mallikarjun
H.Mallikarjun - Kalyanasiri
2 Min Read
Repeated attacks on anti-poaching camps in the Cauvery Wildlife Sanctuary have resulted in immense loss.




Repeated attacks on anti-poaching camps in the Cauvery Wildlife Sanctuary have resulted in immense loss.




ಕಾವೇರಿ ವನ್ಯ ಜೀವಿ ಅರಣ್ಯದಲ್ಲಿರುವ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ನಿರಂತರ ದಾಳಿ ಅಪಾರ ನಷ್ಟ .‌

ಜಾಹೀರಾತು
ಜಾಹೀರಾತು


ವರದಿ: ಬಂಗಾರಪ್ಪ. ಸಿ.‌
ಹನೂರು :ಸರ್ಕಾರವು ಅರಣ್ಯ ಇಲಾಖೆಯಿಂದ ಕಾಡುಗಳಲ್ಲಿನ ಮರಗಳು ಮತ್ತು ಪ್ರಾಣಿಗಳ ಸಂರಕ್ಷಣೆ ಮಾಡುವಲ್ಲಿ ತಮ್ಮ ಇಲಾಖೆಯ ಸಿಬ್ಬಂದಿಗಳು ದಿನ ನಿತ್ಯ ಗಸ್ತು ತಿರುಗುವಲ್ಲಿ ಸಹಕಾರಿಯಾಗಲಿ ಎಂದು ನಿರ್ಮಿಸಿದ
ವಸತಿಗೃಹಗಳನ್ನು ಅಪರಿಚತರು ನಿರಂತರವಾಗಿ ದ್ವಂಸಗೊಳಿಸುತ್ತಿರುವ ಘಟನೆ ಕೊತ್ತನೂರು ಬೀಟು ಸೇರಿದಂತೆ ಅನೇಕ ಕಡೆ ನಡೆಯುತ್ತುವೆ ಎಂದು ಅಧಿಕಾರಿಗಳು ತಿಳಿಸಿದರು.‌

ಹನೂರು ಕಾವೇರಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ನಡೆದ ಗುಂಡೆಟಿಗೆ ಬಲಿಯಾದ ಪ್ರಕರಣದಿಂದ ದಿನಕ್ಕೊಂದು ಪ್ರಕರಣ ಬೆಳಕಿಗೆ ಬರುತ್ತಿದ್ದು . ಕಳ್ಳಬೇಟೆ ತಡೆ ಶಿಬಿರಗಳು ಮತ್ತು ಸಿಬ್ಬಂದಿವಸತಿಗ್ರಹಗಳಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಧ್ವಂಸಗೊಳಿಸಿರುವುದು ತಡವಾಗಿ ಬೆಳಕಿಗೆ ಬರುತ್ತಿದೆ .

ಕಾವೇರಿ ವನ್ಯಜೀವಿಧಾಮದ ಹೊಳೆಮುರಿ ದಟ್ಟ ಗಸ್ತು ಕರಡಿಕಲ್ಲು ಅರಣ್ಯ ಪ್ರದೇಶದಲ್ಲಿ ಆ.15 ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದರು.

ಈ ಘಟನೆಗೆ ಪ್ರತಿಯಾಗಿ ಆಕ್ರೋಶಗೊಂಡ ಕೆಲವು ಅಪರಿಚಿತರು ಮತ್ತು ಗ್ರಾಮಸ್ಥರು ಅರಣ್ಯ ಪ್ರದೇಶಕ್ಕೆ ಮಾರಕಾಸ್ತ್ರಗಳೊಂದಿಗೆ ಅಕ್ರಮ ಪ್ರವೇಶ ಮಾಡಿ ಶಿಬಿರಗಳ ಮೇಲೆ ದಾಳಿ ನಡೆಸಿದ್ದಾರೆ.

ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುಂದ ಬೇಟೆಗಾರನಗುಡ್ಡ, ಬೂದಿಕೆರೆ, ಕಳ್ಳದೊಡ್ಡಿ ಎಂಬ 4 ಕಳ್ಳಬೇಟೆ ತಡೆ ಶಿಬಿರಗಳು ಮತ್ತು ಸಿಬ್ಬಂದಿಗಳ ವಸತಿ ಗೃಹಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ .

ಆ.15 ರಂದು ಬೆಳಗ್ಗೆ 10.30ರಿಂದ 11.30 ರವರೆಗೆ ಶಾಗ್ಯ ಹಾಗೂ ಕಂದೊಡ್ಡಿ ಗ್ರಾಮದಲ್ಲಿರುವ ಸಿಬ್ಬಂದಿಗಳ ವಸತಿ ಗೃಹಗಳು ಮತ್ತು ಕಳ್ಳಿದೊಡ್ಡಿ ಶಿಬಿರಕ್ಕೆ ಹಾನಿ ಮಾಡಲಾಗಿದೆ. ಅದೇ ದಿನ ರಾತ್ರಿ 9.30 ರಿಂದ 11.45ರವರೆಗೆ ಹೊಳೆಮುಂದಟ್ಟ ಸಮೀಪದ ಶಿಬಿರದ ವಸತಿಗೃಹವನ್ನು ಧ್ವಂಸಗೊಳಿಸಲಾಗಿದೆ. ದಾಳಿಯ ಸಂಪೂರ್ಣ ಜಖಂಗೊಂಡು ಉಳಿದ ಭಾಗ
ಬಿರುಕು ಬಿಟ್ಟಿದೆ.
ಇದರೊಂದಿಗೆ ಶಾಗ್ಯ ಗ್ರಾಮದಲ್ಲಿರುವ ಹಳೆ ವಸತಿಗೃಹ ಹಾಗೂ ಗಾಣಿಗ ಮಂಗಲ ಮುಖ್ಯರಸ್ತೆಯಲ್ಲಿರುವ ಹೊಸ ವಸತಿಗೃಹಗಳ ಪೀಠೋಪಕರಣ, ಕಿಟಕಿ ಗಾಜು ಮತ್ತು ದ್ವಿಚಕ ವಾಹನಗಳನ್ನೂ ಧ್ವಂಸಗೊಳಿಸಲಾಗಿದೆ. ಆ.17 ರಂದು ಮಧ್ಯಾಹ್ನ 2.30ಕ್ಕೆ ಶಿಬಿರಗಳು ಘಟನೆ ನಡೆದ ಸಮಯದಲ್ಲಿ ಯಾವೊಬ್ಬ
ಅರಣ್ಯ ಇಲಾಖೆ ಅಧಿಕಾರಿಯೂ ಶಿಬಿರಗಳಲ್ಲಿ ಇರಲಿಲ್ಲ. ಮಾರಕಾಸ್ತ್ರ ಬಳಸಿ ಯಾರು ಈ ಕೃಷ್ಣ ಎಸಗಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ.
ಘಟನಾ ಸ್ಥಳಕ್ಕೆ ಪೊಲೀಸರು ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದರಿ ಶಿಬಿರಗಳು ಮತ್ತು ವಸತಿಗೃಹಗಳು ಸರ್ಕಾರಿ ಸ್ವತ್ತಾಗಿದ್ದು, ಮಾರಕಾಸ್ತ್ರಗಳಿಂದ ಹಾನಿಗೊಳಿಸಿ ರುವ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು ಈ ಕೃತ್ಯವೆಸಗಿದವರನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article