ಕೊಪ್ಪಳದಲ್ಲಿ ವಿವಿಧ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ; ನೋಟಿಸ್ ಜಾರಿ, ಕಾನೂನು ಕ್ರಮದ ಎಚ್ಚರಿಕೆ

H.Mallikarjun
H.Mallikarjun - Kalyanasiri
1 Min Read
Surprise raids on various hotels in Koppal; notices issued, warning of legal action.

 

ಕೊಪ್ಪಳದಲ್ಲಿ ವಿವಿಧ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ; ನೋಟಿಸ್ ಜಾರಿ, ಕಾನೂನು ಕ್ರಮದ ಎಚ್ಚರಿಕೆ

ಜಾಹೀರಾತು


ಕೊಪ್ಪಳ, ಆ. 27 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೊಪ್ಪಳ ನಗರದ ವಿವಿಧ ಪ್ರಮುಖ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ, ಗುಣಮಟ್ಟವಿಲ್ಲದ, ಬಣ್ಣಯುಕ್ತ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ವಚ್ಛತೆ ಕಾಪಾಡದ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಹೋಟೆಲ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


ಕೊಪ್ಪಳ ನಗರದ ಮಾಲತೇಶ ಹೋಟೆಲ್, ಅಕ್ಷಯ ಹೋಟೆಲ್, ಉಡುಪಿ ಉಪಹಾರ, ಜಿ.ಕೆ.ಎಸ್. ಹೋಟೆಲ್, ಹಂಪಿ ಎಕ್ಸ್‌ಪ್ರೆಸ್ ಕೆಫೆ ಹಾಗೂ ಸಂಧ್ಯಾ ಹೋಟೆಲ್‌ಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ಅವಧಿ ಮೀರಿದ ಹಾಗೂ ಲೇಬಲ್ ಇಲ್ಲದ ಆಹಾರ ಪದಾರ್ಥಗಳು, ಬಣ್ಣಯುಕ್ತ ಆಹಾರ ಸಾಮಗ್ರಿಗಳು ಪತ್ತೆಯಾಗಿವೆ. ಸುಮಾರು 14 ಕೆಜಿ ಚಿಕನ್, 2 ಕೆಜಿ ಮೀನು, 8 ಕೆಜಿ ಪನ್ನೀರ್, ಮಿರಿಂಡಾ, ಪೆಪ್ಸಿ ಹಾಗೂ ಸೆವೆನ್ ಅಪ್‌ನ 36 ಬಾಟಲ್‌ಗಳು, ಬ್ರೂ ಕಾಫಿ ಪುಡಿಯ 4 ಪ್ಯಾಕೇಟ್‌ಗಳು, 800 ಎಂಎಲ್ ಸಲಾಡ್ ಎಣ್ಣೆ, 3 ಕೆಜಿ ಗೋಬಿ, 1 ಕೆಜಿ ಪಿಜ್ಜಾ ಬ್ರೆಡ್ ಹಾಗೂ 4 ಕೆಜಿ ಉಪ್ಪಿನಕಾಯಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೋಟೆಲ್‌ಗಳಲ್ಲಿ ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದು, ನಿಯಮ ಉಲ್ಲಂಘನೆ ಮುಂದುವರಿದಲ್ಲಿ ಸಂಬಂಧಪಟ್ಟವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Total Views: 3
ಜಾಹೀರಾತು
Share This Article