Buffalo killed by leopard attack in Astur

ವರದಿ: ಬಂಗಾರಪ್ಪ. .ಸಿ .
ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ
ಅಸ್ತೂರು ಗ್ರಾಮದ ಜಮಿನೊಂದರಲ್ಲಿನ ಮೇವು ಮೆಯಲು ಎಮ್ಮೆಯನ್ನು ಬಿಟ್ಟಿದ್ದ ಸಂದರ್ಭದಲ್ಲಿ ಚಿರತೆಯ ದಿಡಿರ್ ದಾಳಿಯಾಗಿದೆ ಎಂದು
ರಂಗಕಬ್ಬಾಳಪ್ಪ ಬಿನ್ ಗಿಡ್ಡಪ್ಪ ತಿಳಿಸಿದರು .
ನಂತರ ಮಾತನಾಡಿದ ಅವರು ಈಗಾಗಲೇ ಗ್ರಾಮಕ್ಕೆ ಆನೆಯು ಸೇರಿದಂತೆ ಕಾಡು ಪ್ರಾಣಿಗಳು ಹೆಚ್ಚಾಗಿ ಆಗಮಿಸುತ್ತಿದ್ದು ನಾವುಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಷ್ಟೇ ಮನವರಿಕೆ ಮಾಡಿದರು ಯಾವುದೇ ಪ್ರಯೋಜನವಿಲ್ಲ ನಮ್ಮ ಹೊಲದಲ್ಲಿ ಮೆಯಲು ಬಿಟ್ಟಿದ್ದ ಎಮ್ಮೆ ಕೋಣವನ್ನು ಚಿರತೆ ದಾಳಿ ಮಾಡಿದೆ ಅಲ್ಲದೆ ಕುರಿಗಳು ,ಮೇಕೆಗಳು ಸೇರಿದಂತೆ ಅನೇಕ ಸಾಕು ಪ್ರಾಣಿಗಳನ್ನು ತಿಂದು ನರ ಬಲಿಗಾಗಿ ಕಾಯುತ್ತಿವೆ ಇವುಗಳಲ್ಲದೆ ಬೇಟೆ ನಾಯಿಯು ಸಹ ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಮಾಡುತ್ತಿದೆ ಎಂದು ದೂರಿದರು , ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು .