BJP conspiracy against CM Siddaramaiah
ಕೊಪ್ಪಳ: ರಾಜ್ಯದ ಹಿಂದುಳಿದ ಸಮುದಾಯದ ಧೀಮಂತ ನಾಯಕ ಸಿಎಂ ಸಿದ್ದರಾಮಯ್ಯನವರ ಕ್ಲೀನ್ ಇಮೇಜ್ ಕೆಡಿಸಲು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನವರು ಮೋಶಾ ರಿಂದ ಆಜ್ಞೆ ಪಡೆದು ಸುಳ್ಳು ಆರೋಪಗಳ ಮೂಲಕ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಆರೋಪಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಹಿಂದುಳಿದ, ದಲಿತ ಸಮುದಾಯದವರ ಪರವಾಗಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ಜನಪರ ಕೆಲಸ ಮಾಡಿ ಅವರ ಮನಸ್ಸಿನಲ್ಲಿ ಆಳವಾಗಿ ನೆಲೆಯೂರವ ಲಕ್ಷಣ ಅರಿತ ಬಿಜೆಪಿಯ ಕೇಂದ್ರ ಸರಕಾರ ಕುಮಾರಸ್ವಾಮಿ ಮತ್ತು ಬಿಜೆಪಿ ಮುಖಂಡರ ಮೂಲಕ ಸಿಎಂ ವಿರುದ್ಧ ರ್‍ಯಾಲಿಗೆ ಆರ್ಥಿಕ ನೆರವು ನೀಡಿ ಸರಕಾರ ಉರುಳಿಸುವ ಹುನ್ನಾರಕ್ಕೆ ಕೈ ಹಾಕಿದೆ, ಆದರೆ ಇಡೀ ರಾಜ್ಯದ ಮಹಿಳೆಯರ ಧ್ವನಿಯಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಮುಖ್ಯಮಂತ್ರಿಗಳ ಪರವಾಗಿ ಮಾತನಾಡಲಿದೆ.
ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ನಂಬಿಕೆಯನ್ನು ಈಗಾಗಲೇ ಕಳೆದುಕೊಂಡಿದೆ, ಅವರು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿರುವದನ್ನು ರಾಜ್ಯದ ಅನೇಕ ಪ್ರಗತಿಪರ ಸಂಘಟನೆಗಳು ಸಹ ವಿರೋಧಿಸುತ್ತಿವೆ, ನಾವೂ ಸಹ ಜನರ ಮುಂದೆ ಬಿಜೆಪಿ ಮತ್ತು ಜೆಡಿಎಸ್‌ನವರ ನೀಚ ಕೃತ್ಯವನ್ನು ಬಯಲಿಗೆ ತರುತ್ತೇವೆ, ಅವಶ್ಯವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.