Breaking News

ಹನೂರುನಿಂದ ಬಂಡಳ್ಳಿ ಮಾರ್ಗ ರಸ್ತೆ ಸೇರಿದಂತೆ ಹಲವು ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಮ್ಆರ್ ಮಂಜು ನಾಥ್

MLA MR Manjunath performed many kudali pujas, including on the road from Hanur to Bandalli.

ಜಾಹೀರಾತು


ವರದಿ : ಬಂಗಾರಪ್ಪ ಸಿ.

ಹನೂರು : ತಾಲೂಕಿನ ವಿವಿಧ ಗ್ರಾಮಗಳಿಗೆ ಹಲವು ದಿನಗಳಿಂದ ಬಹು ಬೇಡಿಕೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ಅಂದಾಜು 67 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯವನ್ನು ನೆರವೇರಿಸಲಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ಹನೂರು ತಾಲೂಕಿನ ದೊಡ್ಡಿಂದವಾಡಿ ಗ್ರಾಮದ ಕನಕಗಿರಿ ಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು
ಕ್ಷೇತ್ರ ವ್ಯಾಪ್ತಿಯ ಶ್ರೀ ಕ್ಷೇತ್ರ ಚಿಕಲ್ಲೂರು ಸಿದ್ದಪ್ಪಾಜಿ ಧಾರ್ಮಿಕ ಸ್ಥಳ ದೇವಾಲಯಕ್ಕೆ ತೆರಳುವ ಭಕ್ತಾದಿಗಳಿಗೆ ಮತ್ತು ವಿವಿಧ ಗ್ರಾಮಗಳಿಗೆ ತೆರಳಲು ಹಲವಾರು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಣದೆ ಹದಗೆಟ್ಟು ಹೋಗಿದ್ದನ್ನು ಮನಗಂಡು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಶ್ರೀ ಕ್ಷೇತ್ರದಲ್ಲಿರಸ್ತೆ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಶ್ರೀ ಕ್ಷೇತ್ರದ ಭಕ್ತರಿಗೆ ಮತ್ತು ಈ ಭಾಗದ ಬಹುದಿನದ ಜನತೆಯ ಬೇಡಿಕೆಯ ಅನುಗುಣವಾಗಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಎರಡುವರೆ ದಶಕಗಳಿಂದ ( 25 ) ವರ್ಷಗಳ ನಂತರ ಬಂಡಳ್ಳಿ ಮನಗಳ್ಳಿ ಹನೂರು ಪಟ್ಟಣದ ಮುಖ್ಯ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು ರಸ್ತೆಯಲ್ಲಿ ಸಂಚರಿಸುವುದೇ ಈ ಭಾಗದ ಜನತೆಯೇ ಕಷ್ಟಕರದ ಹಲವಾರು ವರ್ಷಗಳ ಬಹು ಬೇಡಿಕೆಯ ನಂತರ ಸಾರ್ವಜನಿಕರ ಮತ್ತು ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಒತ್ತು ನೀಡುವ ಸದುದ್ದೇಶದಿಂದ ಅನುದಾನ ತಂದು ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.
ಅಂತರಾಜ್ಯ ರಸ್ತೆ ಅಭಿವೃದ್ಧಿಗೆ ಒತ್ತು : ಹನೂರು ಪಟ್ಟಣದಿಂದ ನಾಲಾರ ರೋಡ್ ಮಾರ್ಗವಾಗಿ ರಾಮಾಪುರ ಸೇರಿದಂತೆ ತಮಿಳುನಾಡಿಗೆ ದಿನನಿತ್ಯ ನೂರಾರು ವಾಹನಗಳು ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತಿರುವುದರಿಂದ ದಿಂಬಂ ರಸ್ತೆಯಲ್ಲಿ ಪಾರಿವಾಹನಗಳಿಗೆ ನಿಷೇಧ ಏರಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ದಿನನಿತ್ಯ ರಾತ್ರಿ ಅಗಲು ಎನ್ನದೆ ವಾಹನಗಳು ಸಂಚರಿಸುತ್ತಿರುವುದರಿಂದ ತೀವ್ರವಾಗಿ ಅದೇ ಕಟ್ಟಿರುವ ರಸ್ತೆ ಅಭಿವೃದ್ಧಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಈ ರಸ್ತೆಯನ್ನು ಅಂತರ್ ರಾಜ್ಯ ರಸ್ತೆಯನ್ನಾಗಿ ಪರಿವರ್ತಿಸಿ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಗಮನಕ್ಕೆ ತಂದು ಸುಸರ್ಜಿತವಾದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು .
ಹನೂರಿನಿಂದ ರಾಮಪುರ ಮಾರ್ಗವಾಗಿ ಕೌದಳ್ಳಿ ಗ್ರಾಮಕ್ಕೆ ಸೇರಿದ ಒಂದು ಕಿಲೊ ಮೀಟರ್ ರಸ್ತೆ ಅಭಿವೃದ್ಧಿಗೂ ಸಹ ಗುದ್ದಲಿ ಪೂಜೆ ನೆರವೇರಿಲಾಗಿದೆ ,
ದೊಡ್ಡಿಂದುವಾಡಿ ಕೊತ್ತನೂರು,ಬಂಡಳ್ಳಿ, ಹನೂರು, ಕೌದಳ್ಳಿ ಗ್ರಾಮಸ್ಥರಿಂದ ಶಾಸಕರಿಗೆ ಸನ್ಮಾನ : ಬಂಡಳ್ಳಿ ರಸ್ತೆ ಅಭಿವೃದ್ಧಿಗೆ ಶಾಸಕರ ಹೆಚ್ಚಿನ ಅನುದಾನ ನೀಡುವ ಮೂಲಕ ಸುಸಜ್ಜಿತವಾದ ರಸ್ತೆಯನ್ನು 25 ವರ್ಷಗಳ ನಂತರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಗ್ರಾಮಸ್ಥರು ಶಾಸಕ ಎಂಆರ್ ಮಂಜುನಾಥ್ ಅವರಿಗೆ ಸನ್ಮಾನಿಸಿ ಗೌರವಿಸಿ ನಂತರ ಉಳಿದ ರಸ್ತೆಗಳಿಗೂ ಸಹ ಅಭಿವೃದ್ಧಿ ಕಾಮಗಾರಿಗೆ ಮತ್ತು ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಡಾಕ್ಟರ್ ದತ್ತೇಶ್ ಕುಮಾರ್ ನಮ್ಮ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ಡಾಂಬರ್ ಕಾಣದ ರಸ್ತೆಗಳೆ ಕಾಣುತ್ತಿದ್ದವು ಇತ್ತಿಚಿನ ದಿನಗಳಲ್ಲಿ ಮಾನ್ಯ ಶಾಸಕರಾದ ಎಮ್ ಆರ್ ಮಂಜುನಾಥ್ ಮಾಡುತ್ತಿದ್ದಾರೆ ಎಂದು ತಿಲಿಸಿದರು .

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಂಜೇಶ್ ಗೌಡ .
ವೆಂಕಟೇಗೌಡ , ಶ್ಯಾಗ್ಯಬಾಬು , ಅಥಿಕ್ , ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಆನಂದ್ ಕುಮಾರ್ , ಸದಸ್ಯರುಗಳಾದ ಮಹೇಶ್ ,ಮಹೇಶ್ ನಾಯ್ಕ, ಮುಖಂಡರುಗಳಾದ
ರಾಜುಗೌಡ,ಚಿನ್ನವೆಂಕಟ,ಶಿವಮೂರ್ತಿ, ವಿಜಯಕುಮಾರ್ ,ಡಿ ಆರ್ ಮಾದೇಶ್ , ಸೇರಿದಂತೆ ಲೋಕೋಪಯೋಗಿ ಇಲಾಖೆ ವ. ಇ. ಇ ಪುರುಷೋತ್ತಮ್ ಚಿನ್ನಣ್ಣ ಸುರೇಂದ್ರ ಹಾಗೂ ವಿವಿಧ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *