Breaking News

ಬಂಡೆಯ ನಾಡು ರಾಯಚೂರ ಜಿಲ್ಲೆಯ ಜನತೆಗೆ ಶಕ್ತಿ ಯೋಜನೆ ಬಹು ಉಪಕಾರಿ

The energy project is very beneficial for the people of the rock-hewn Raichur district.

ಜಾಹೀರಾತು

೧) ಹನುಮಂತಿ, ರಾಯಚೂರು, ಶಕ್ತಿ ಯೋಜನೆಯ ಫಲಾನುಭವಿ,
೨) ಯಶೋಧಾ, ದೇವಸಗೂರು, ಶಕ್ತಿ ಯೋಜನೆಯ ಫಲಾನುಭವಿ

ವಿಶೇಷ ಲೇಖನ


‘ಬಂಡೆಯ ನಾಡು’ ರಾಯಚೂರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರ ವಿಭಾಗದಿಂದ ಸಮರ್ಪಕವಾಗಿ ಅನುಷ್ಠಾನವಾಗುತ್ತ, ಜನಮಾನಸದ ಯೋಜನೆಯಾಗಿ ಹೊರಹೊಮ್ಮಿದೆ.
ರಾಯಚೂರ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 2023ರ ಜೂನ ಮಾಹೆಯಲ್ಲಿ ಸರಾಸರಿ ಶೇ.18.42ರಷ್ಟು ಇದ್ದು, ಅದು ಇದೀಗ 2025ರ ಏಪ್ರೀಲ್ ಮಾಹೆಯಲ್ಲಿ ಶೇ.35.81ಕ್ಕೆ ತಲುಪಿದೆ. ಆದಾಯದ ಪ್ರಮಾಣವು 2023ರ ಜೂನ್ ಮಾಹೆಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಈ ಮೊದಲು 678.67 ಕೋಟಿ ರೂ.ದಷ್ಟಿದ್ದ ಆದಾಯವು 2025ರ ಏಪ್ರೀಲ್ ಮಾಹೆಯಲ್ಲಿ 1798.81 ಕೋಟಿ ರೂ.ದಷ್ಟು ಹೆಚ್ಚಾಗಿದೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದ 2025ರ ಏಪ್ರೀಲ್ ಮಾಹೆವರೆಗೆ ರಾಯಚೂರ 1ನೇ ಘಟಕ, ರಾಯಚೂರ 2ನೇ ಘಟಕ, ರಾಯಚೂರ 3ನೇ ಘಟಕ, ಲಿಂಗಸೂರ ಘಟಕ, ಸಿಂಧನೂರ, ಮಾನವಿ ಘಟಕ, ದೇವದುರ್ಗ ಘಟಕ ಮತ್ತು ಮಸ್ಕಿ ಘಟಕ ಸೇರಿ 2023ರ ಜೂನ್ ಮಾಹೆಯಲ್ಲಿ 18.42 ಲಕ್ಷ, ಜುಲೈನಲ್ಲಿ 30.81 ಲಕ್ಷ, ಆಗಸ್ಟ್ ಮಾಹೆಯಲ್ಲಿ 36.06 ಲಕ್ಷ, ಸೆಪ್ಟೆಂಬರ್ ಮಾಹೆಯಲ್ಲಿ 38.18 ಲಕ್ಷ, ಅಕ್ಟೋಬರ್ ಮಾಹೆಯಲ್ಲಿ 35.47 ಲಕ್ಷ, ನವೆಂಬರ್ ಮಾಹೆಯಲ್ಲಿ 36.07 ಲಕ್ಷ, ಡಿಸೆಂಬರ್ ಮಾಹೆಯಲ್ಲಿ 38.57 ಲಕ್ಷ ಅದೇ ರೀತಿ 2024ರ ಜನವರಿ ಮಾಹೆಯಲ್ಲಿ 39.27 ಲಕ್ಷ, ಫೆಬ್ರವರಿಯಲ್ಲಿ 38.38 ಲಕ್ಷ, ಮಾರ್ಚನಲ್ಲಿ 35.87 ಲಕ್ಷ, ಏಪ್ರೀಲ್‌ನಲ್ಲಿ 32.92 ಲಕ್ಷ, ಮೇ ನಲ್ಲಿ 32.63 ಲಕ್ಷ, ಜೂನ್‌ದಲ್ಲಿ 34.24 ಲಕ್ಷ, ಮೇನಲ್ಲಿ 32.63 ಲಕ್ಷ, ಜೂನದಲ್ಲಿ 34.24 ಲಕ್ಷ, ಜುಲೈನಲ್ಲಿ 36.04 ಲಕ್ಷ, ಆಗಸ್ಟನಲ್ಲಿ 37.86 ಲಕ್ಷ, ಸೆಪ್ಟೆಂಬರ್‌ನಲ್ಲಿ 34.26 ಲಕ್ಷ, ಅಕ್ಟೋಬರನಲ್ಲಿ 34.86 ಲಕ್ಷ, ನವೆಂಬರನಲ್ಲಿ 36.70 ಲಕ್ಷ, ಡಿಸೆಂಬರ್‌ನಲ್ಲಿ 37.28 ಲಕ್ಷ, ಅದೇ ರೀತಿ 2025ರ ಜನವರಿ ಮಾಹೆಯಲ್ಲಿ 34.65 ಲಕ್ಷ, ಫೆಬ್ರವರಿಯಲ್ಲಿ 34.32 ಲಕ್ಷ, ಮಾರ್ಚನಲ್ಲಿ 32.83 ಲಕ್ಷ ಮತ್ತು ಏಪ್ರೀಲನಲ್ಲಿ 35.81 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇಲ್ಲಿವರೆಗೆ ದಾಖಲೆ ಪ್ರಮಾಣದಲ್ಲಿ ನಿಗಮಕ್ಕೆ ಆದಾಯವು ಹರಿದುಬಂದಿದೆ. ಯೋಜನೆ ಜಾರಿಯಿಂದ ಹಿಡಿದು 2025ರ ಏಪ್ರೀಲ್ ಮಾಹೆವರೆಗೆ ರಾಯಚೂರ 1ನೇ ಘಟಕದಿಂದ 13.05 ಕೋಟಿ ರೂ., ರಾಯಚೂರ 2ನೇ ಘಟಕದಿಂದ 43.23 ಕೋಟಿ ರೂ., ರಾಯಚೂರ 3ನೇ ಘಟಕದಿಂದ 38.39 ಕೋಟಿ ರೂ., ಲಿಂಗಸೂರ ಘಟಕದಿಂದ 66.41 ಕೋಟಿ ರೂ., ಸಿಂಧನೂರ ಘಟಕದಿಂದ 50.16 ಕೋಟಿ ರೂ.. ಮಾನವಿ ಘಟಕದಿಂದ 21.77 ಕೋಟಿ ರೂ., ದೇವದುರ್ಗ ಘಟಕದಿಂದ 42.79 ಕೋಟಿ ರೂ ಮತ್ತು ಮಸ್ಕಿ ಘಟಕದಿಂದ 44.12 ಕೋಟಿ ರೂ.ನಷ್ಟು ಆದಾಯ ಬಂದಿರುವುದು ಗಮನಾರ್ಹ ಸಾಧನೆಯಾಗಿದೆ.
ಶಕ್ತಿ ಯೋಜನೆ ಜಾರಿಯಾಗಿ 2024ರ ಏಪ್ರಿಲ್ 1 ರಿಂದ 25ರ ಏಪ್ರೀಲ್ 15ರವರೆಗೆ ರಾಯಚೂರ 1ನೇ ಘಟಕದಲ್ಲಿ 4.16 ಲಕ್ಷ, ರಾಯಚೂರ 2ನೇ ಘಟಕದಲ್ಲಿ 6.04 ಲಕ್ಷ, ರಾಯಚೂರ 3ನೇ ಘಟಕದಲ್ಲಿ 4.32 ಲಕ್ಷ, ಲಿಂಗಸೂರ ಘಟಕದಲ್ಲಿ 11.35 ಲಕ್ಷ, ಸಿಂಧನೂರದಲ್ಲಿ 7.95 ಲಕ್ಷ, ಮಾನವಿಯಲ್ಲಿ 4.76 ಲಕ್ಷ, ದೇವದುರ್ಗದಲ್ಲಿ 6.85 ಲಕ್ಷ ಮತ್ತು ಮಸ್ಕಿಯಲ್ಲಿ 7.36 ಲಕ್ಷ ಪ್ರಮಾಣದಷ್ಟು ಶಕ್ತಿ ಯೋಜನೆಯ ಫಲಾನುಭವಿಗಳ ಅಂಕಿ ಸಂಖ್ಯೆ ದಾಖಲಾಗಿರುತ್ತದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರಾಜ್ಯ ಸರ್ಕಾರದಿಂದ 2023-24ನೇ ಸಾಲಿನಲ್ಲಿ 646.07 ಕೋಟಿ ರೂ, 2024-25ನೇ ಸಾಲಿನಲ್ಲಿ 1012.94 ಕೋಟಿ ರೂ. ಹಾಗೂ 2025-26ನೇ ಸಾಲಿನಲ್ಲಿ 84.41 ಕೋಟಿ ರೂ ಸೇರಿದಂತೆ ಜೂನ್ 2023ರಿಂದ ಇಲ್ಲಿವರೆಗೆ 1743.42 ಕೋಟಿ ರೂ.ನಷ್ಟು ಅನುದಾನ ನೀಡಲಾಗಿರುತ್ತದೆ.
ಶಕ್ತಿ ಯೋಜನೆ ಜಾರಿಯಾದ ನಂತರ ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 98 ಹೊಸದಾದ ಅನುಸೂಚಿಗಳನ್ನು ಪ್ರಾರಂಭಿಸಲಾಗಿದೆ. ಕಾರ್ಯಚರಣೆಯಲ್ಲಿದ್ದ ಅನುಸೂಚಿಗಳ ಪೈಕಿ 188 ಅನುಸೂಚಿಗಳಿಗೆ ಪರಿಷ್ಠರಣೆ ಮಾಡಿ ಒಟ್ಟು 346 ಟ್ರಿಪ್‌ಗಳನ್ನು ಹೆಚ್ಚಿಗೆ ಸೇರ್ಪಡೆಗೊಳಿಸಲಾಗಿದೆ. ಒಟ್ಟು 159 ಹೊಸ ವಾಹನಗಳು ಸೇರ್ಪಡೆಯಾಗಿರುವುದು ವಿಶೇಷ ಸಾಧನೆಯಾಗಿದೆ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಂ.ಎಸ್.ಚಂದ್ರಶೇಖರ.
‘ನಿತ್ಯ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಿ ಕೆಲಸ ಮಾಡುವವರಿಗೆ, ಮಹತ್ವದ ಕಾರ್ಯಕ್ಕಾಗಿ ಪ್ರತಿನಿತ್ಯ ಸಂಚರಿಸುವವರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ರಾಜ್ಯ ಸರ್ಕಾರಕ್ಕೆ ನಾವು ಅನಂತ ಧನ್ಯವಾದಗಳನ್ನು ತಿಳಿಸುತ್ತೇವೆ’ ಎನ್ನುತ್ತಾರೆ ರಾಯಚೂರ ಜಿಲ್ಲೆಯ ಶಕ್ತಿ ಯೋಜನೆಯ ಫಲಾನುಭವಿಗಳಾದ ರಾಯಚೂರದ ಹನುಮಂತಿ ಹಾಗೂ ದೇವಸಗೂರಿನ ಯಶೋಧ ಅವರು. ಅದೇ ರೀತಿ ಸಿಂಧನೂರ, ಮಸ್ಕಿ, ಮಾನವಿ, ಲಿಂಗಸೂರ, ದೇವದುರ್ಗ, ಹಾಗೂ ಸಿರವಾರ ತಾಲೂಕಿನಲ್ಲಿನ ಶಕ್ತಿ ಯೋಜನೆಯ ಫಲಾನುಭವಿಗಳು ಸಹ ಶಕ್ತಿ ಯೋಜನೆಯಿಂದಾಗಿ ನಮಗೆ ಸಾಕಷ್ಟು ಅನುಕೂಲವಾಗಿದೆ ಎಂದು ಅಭಿಪ್ರಾಯಪಡುವುದು ಈ ಯೋಜನೆಯ ಜನಪ್ರಿಯೆತೆಗೆ ಸಾಕ್ಷಿಯಾಗಿದೆ.
ಗವಿಸಿದ್ದಪ್ಪ ಹೊಸಮನಿ, ವಾರ್ತಾ ಸಹಾಯಕರು, ವಾರ್ತಾಇಲಾಖೆ, ರಾಯಚೂರು


About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *