Breaking News

ಅಕ್ರಮ ಮರಳು ದಂಧೆ, ಅಕ್ರಮಮದ್ಯಮಾರಾಟ, ಅಕ್ರಮ ಜೂಜಾಟವನ್ನು ತಡೆಯಲು ಒತ್ತಾಯಿಸಿ ಕೆ.ಕೆ.ಡಿ.ಎಸ್.ಎಸ್. ಪ್ರತಿಭಟನೆ

KKDSS protests demanding a stop to illegal sand mining, illegal liquor sales, and illegal gambling

ಜಾಹೀರಾತು

ಗಂಗಾವತಿ: ಕನಕಗಿರಿ, ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳಾದ್ಯಂತ ಅನಧಿಕೃತ ಮರಳು ಪಾಯಿಂಟ್‌ಗಳು, ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಮದ್ಯ ಮಾರಾಟ, ಅಕ್ರಮ ಜೂಜಾಟಗಳಾದ ಮಟ್ಕಾ, ಇಸ್ಪೀಟ್ ದಂಧೆ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳು ಹೆಗ್ಗಿಲ್ಲದೇ ನಡೆಯುತ್ತಿದ್ದು, ಅವುಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೇ-೨೧ ಬುಧವಾರ ಗಂಗಾವತಿ ಪೊಲೀಸ್ ಉಪವಿಭಾಗ ಕಛೇರಿ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ನೀಲಪ್ಪ ಡಣಾಪುರ ಪ್ರಕಟಣೆಯಲ್ಲಿ ತಿಳಿಸಿದರು.
ಈ ಅಕ್ರಮ ಮರಳು ದಂಧೆಯಿAದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದ್ದು, ಅಕ್ರಮ ಜೂಜಾಟ, ಅಕ್ರಮ ಚಟುವಟಿಕೆಗಳಿಗೆ ಬಡಕುಟುಂಬಗಳು ಬಲಿಯಾಗಿ ಬೀದಿಪಾಲಾಗುತ್ತಿವೆ.
ಪ್ರಮುಖವಾಗಿ ಮೇಲಿನ ಮೂರು ತಾಲ್ಲೂಕುಗಳಲ್ಲಿ ಅನಧಿಕೃತವಾಗಿ ಮರಳು ಪಾಯಿಂಟ್‌ಗಳನ್ನು ಸ್ಥಾಪಿಸಿ, ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಅದೇರೀತಿ ಅಕ್ರಮ ಜೂಜಾಟಗಳಾದ ಮಟ್ಕಾ, ಇಸ್ಪೀಟ್ ಕ್ಲಬ್‌ಗಳು ಹೆಗ್ಗಿಲ್ಲದೇ ನಡೆಯುತ್ತಿದ್ದು, ಈ ದಂಧೆಯಲ್ಲಿ ಪ್ರಮುಖರು, ಪ್ರಭಾವಿಗಳು ಭಾಗಿಯಾಗಿದ್ದು, ಈ ಎಲ್ಲಾ ಅಕ್ರಮ ದಂಧೆಗಳನ್ನು ತಡೆಯಲು ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಬೇಕಾಗಿದೆ.
ಪೊಲೀಸ್ ಇಲಾಖೆ ಒಂದು ವಿಶೇಷವಾದ ಪೊಲೀಸ್ ತಂಡವನ್ನು ರಚಿಸಿ, ತನಿಖೆ ನಡೆಸಿ, ಅಕ್ರಮ ಚಟುವಟಿಕೆಗಳ ತಾಣಗಳ ಮೇಲೆ ದಾಳಿ ಮಾಡಿ, ಅಕ್ರಮ ದಂಧೆಕೋರರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ, ನಮ್ಮ ಕೆ.ಕೆ.ಡಿ.ಎಸ್.ಎಸ್ ಸಂಘಟನೆಯು ಮೇ-೨೧ ಬುಧವಾರ ಬೆಳಗ್ಗೆ ೧೧:೦೦ಕ್ಕೆ ಗಂಗಾವತಿ ನಗರದ ಶ್ರೀಕೃಷ್ಣದೇವರಾಯ ವೃತ್ತದಿಂದ ಪೊಲೀಸ್ ಠಾಣೆವರೆಗೆ ರ‍್ಯಾಲಿ ಕೈಗೊಂಡು, ನಂತರ ಗಂಗಾವತಿ ಪೊಲೀಸ್ ಉಪಾವಿಭಾಗ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಿದೆ. ಈ ಪ್ರತಿಭಟನೆಗೆ ಪ್ರಗತಿಪರರು, ಸಾಮಾಜಿಕ ಹೋರಾಟಗಾರರು, ಸಮಾಜ ಸೇವಕರು, ಸಮಾಜ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸಮಿತಿಯ ಗಂಗಾವತಿ ತಾಲೂಕ ಅಧ್ಯಕ್ಷರಾದ ಸುಮಿತ್ರ, ಪ್ರಧಾನ ಕಾರ್ಯದರ್ಶಿಯಾದ ದೇವದಾಸ್, ಮರಳಿ ಹೋಬಳಿ ಘಟಕದ ಅಧ್ಯಕ್ಷರಾದ ಮರಿಸ್ವಾಮಿ ಹೊಸಕೇರಿ ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಿದ್ದರು.

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *