Taluk In-charge Committee meeting under the chairmanship of Sub Divisional Officer Koppala today
ಗಂಗಾವತಿ: ಉಪವಿಭಾಗಾಧಿಕಾರಿಗಳು ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ ಇಂದು ತಾಲೂಕು ಉಸ್ತುವಾರಿ ಸಮಿತಿ ಸಭೆ ಹಮ್ಮಿಕೊಂಢಿದ್ದು
ಸಭೆಯಲ್ಲಿ ಚರ್ಚಿಸಿದ ವಿವರ
1)ದಾಸನಾಳ್ ಹಾಗೂ ತಹಸೀಲ್ದಾರ್ ಕಚೇರಿ ಹತ್ತಿರ ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಕುರಿತು ಪುನರ್ ಪ್ರಸ್ತಾವನೇ ಜಿಲ್ಲಾ ಸಮಿತಿಗೆ ಕಳಿಸುವಂತೆ ಭೂ ವಿಜ್ಯಾನನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು
2)ಶ್ರೇಣಿ 1,2, ಹಾಗೂ 3 ಪಾಯಿಂಟ್ ಗಳನ್ನು ಗುರುತಿಸಿ ವರದಿ ಕಳಿಸುವ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು
3) ಶ್ರೇಣಿ 4,5 ಹಾಗೂ 6 ಪಾಯಿಂಟ್ ಗಳನ್ನು ಗುರಿತಿಸುವಲ್ಲಿ ಸಂಬಂಧಪಟ್ಟ ತಹಸೀಲ್ದಾರ್ ಹಾಗೂ ಇಒ ಗಳ ಜವಾಬ್ದಾರಿಯಾಗಿದ್ದು ಸೆಪ್ಟೆಂಬರ್ 15 ರ ಒಳಗಡೆ ವರದಿಯನ್ನು ಕೆಳಿಸುವಂತೆ ಸೂಚಿಸಿದರು
4)ಮುಖ್ಯವಾಗಿ ಅಕ್ರಮ ಗಣಿಗಾರಿಕೆ ತಡೆಗಟುವಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದ್ದು, ಅಕ್ರಮ ಗಣಿಗಾರಿಕೆ/ಸಾಗಾಣಿಕೆ ಕುರಿತು ಕರೆಗಳು ಬಂದಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು
5)ನದಿ ಪಾತ್ರದಲ್ಲಿ ಇರುವ ಸ್ಥಳೀಯ ಗ್ರಾಮಸ್ಥರು ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ದೂರವಾಣಿ ಕರೆಗಳ ಮುಖಾಂತರ ಸಾರ್ವಜನಿಕರು ಹಾಗೂ ಅನಾಮಿಕ ವ್ಯಕ್ತಿಗಳು ದೂರ ನೀಡುತ್ತಿದ್ದು ಕೂಡಲೇ ಸಂಬಂಧಪಟ್ಟ ಪಿ ಡಿ ಓ ಹಾಗೂ ಗ್ರಾ ಆ ಅ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುವವರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಸೂಚಿಸಿದರು.