Breaking News

ಬಿಜೆಪಿಕಾರ್ಯಾಲಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇಜನ್ಮದಿನಾಚರಣೆ

Atal Bihari Vajpayee’s 100th birth anniversary celebration at BJP office

ಜಾಹೀರಾತು

ಇಂದು ಭಾರತೀಯ ಜನತಾ ಪಾರ್ಟಿ ಗಂಗಾವತಿ ಕಾರ್ಯಾಲಯದಲ್ಲಿ ಭಾರತರತ್ನ, ಅಜಾತಶತ್ರು, ಶತಮಾನದ ರಾಜಕೀಯ ಸಂತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಇಡೀ ಜಗತ್ತು ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿದ್ದಾಗ ಕುಂಟುತ್ತಿದ್ದ ಭಾರತದ ಆರ್ಥಿಕತೆಯನ್ನು ಎತ್ತಿ ಹಿಡಿದು ಚಿರತೆವೇಗದಲ್ಲಿ ಇತರ ದೇಶಗಳೊಂದಿಗೆ ಪೈಪೋಟಿ ನಡೆಸಿ ಸದೃಢ ಭಾರತ ಕಟ್ಟುವಲ್ಲಿ ಹಾಗೂ ದೇಶದ ಉದ್ದಗಲಕ್ಕೂ ಸುಸಜ್ಜಿತ ಹೆದ್ದಾರಿಗಳ ನಿರ್ಮಾತೃ, ನದಿ ಜೋಡಣೆಯ ಕನಸಿನ ಮತ್ತು ಕವಿ ಮನಸ್ಸಿನ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಚಿರಕಾಲಕ್ಕೂ ನಮ್ಮೆಲ್ಲರಿಗೂ ಆದರ್ಶ ಪ್ರಾಯರಾಗೇ ಉಳಿಯುತ್ತಾರೆ ಹಾಗೂ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಭಾರತದ ಅಭ್ಯುದಯಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂದು ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಮಹನೀಯರಿಗೆ ನುಡಿನಮನ ಸಲ್ಲಿಸಿದರು.
ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಅರಿಕೇರಿ, ರಾಜ್ಯ ಎಸ್.ಟಿ ಮೋರ್ಚಾ ಸದಸ್ಯರಾದ ವೀರಭದ್ರಪ್ಪ ನಾಯಕ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ನವೀನ ಮಾಲಿಪಾಟೀಲ ಪ್ರಮುಖರಾದ ಸಿದ್ದರಾಮ ಸ್ವಾಮಿ ಎಚ್.ಎಮ್, ಸಂಗಮೇಶ ಸುಗ್ರೀವಾ, ರಾಚಪ್ಪ ಸಿದ್ದಾಪುರ, ಚಂದ್ರಶೇಖರ ಅಕ್ಕಿ, ಮಂಜುನಾಥ ಕಟ್ಟಿಮನಿ, ಶ್ರೀಮತಿ ರಾಧಾ ಉಮೇಶ ಪ್ರಧಾನ ಕಾರ್ಯದರ್ಶಿಗಳಾದ ಸಂಗಯ್ಯ ಸ್ವಾಮಿ, ಶ್ರೀನಿವಾಸ ಧೂಳಾ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *