Request to install electric lights on the overhead bridge leading to Koppal via Ginigera.

ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದ ಮುಖಾಂತರ ಕೊಪ್ಪಳ ನಗರಕ್ಕೆ ಇರುವ ಮೇಲ್ ಸೇತುವೆ ಮೇಲೆ ವಿದ್ಯುತ್ ದೀಪ ಅಳವಡಿಸಲು ಗಿಣಿಗಿರಿ ನಾಗರಿಕ ಹೋರಾಟ ಸಮಿತಿಯಿಂದ ಮನವಿ ಮಾಡಲಾಗಿತ್ತು. ಆದರೆ ವಿದ್ಯುತ್ ದೀಪ ಇಲ್ಲದ ಕಾರಣ ದಿನಾಂಕ 12/03/2025 ರಂದು ರಾತ್ರಿ 8 ಗಂಟೆಗೆ ಟ್ರ್ಯಾಕ್ಟರ್ ಮತ್ತು ಲಾರಿ ಮುಖಾಮುಖಿ ದಿಕ್ಕಿಹೊಡೆದು ಅಪಘಾತ ಸಂಭವಿಸಿದೆ.
ಇದೇ ಮೇಲ್ ಸೇತುವೆ ಮುಖಾಂತರ ಭಾರಿ ವಾಹನಗಳು ಬರುವುದರಿಂದ ತುಂಬಾ ಅಪಾಯಕಾರಿ ಕರ್ವಿಂಗ್ ಇರುವುದರಿಂದ ಅಪಘಾತಗಳು ದಿನನಿತ್ಯ ಸಂಭವಿಸುತ್ತೇವೆ. ಇಂಥ ಅಪಾಯಕಾರಿ ಸ್ಥಳದಲ್ಲಿ ಬೈಕ್ ಸವಾರರು, ಸೈಕಲ್ ಸವಾರರು, ಕಲ್ಯಾಣಿ ಕಾರ್ಖಾನೆಯ ಕಾರ್ಮಿಕರು, ತಮ್ಮ ಕೆಲಸದ ಅವಧಿ ಮುಗಿಸಿಕೊಂಡು ಓಡಾಡುತ್ತಾರೆ ಇಂಥ ಜನ ಬಿಡಿ ಮೇಲ್ ಸೇತುವೆ ಮೇಲೆ ಕನಿಷ್ಠ ವಿದ್ಯುತ್ ದ್ವೀಪ ಇಲ್ಲದಿರುವುದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯಿಂದ ಉಗ್ರವಾಗಿ ಖಂಡಿಸುತ್ತೇವೆ.
ಈ ಅಪಘಾತಕ್ಕೆ ಕಾರಣ ವಿದ್ಯುತ್ ದೀಪ ಇಲ್ಲದಿರುವುದು ಮತ್ತು ಖರವಿಂಗ್ ನಲ್ಲಿ ರೇಡಿಯಮ್ ಅಂಟಿಸದೆ ಮುನ್ನೆಚ್ಚರಿಕೆ ಕ್ರಮದ ಬೋಡನ್ನು ಹಾಕುವ ಸಂಚಾರ ನಿಯಮ ಪಾಲನೆ ಆಗುತ್ತಿಲ್ಲ.
ಕೂಡಲೇ ದೊಡ್ಡ ಅನಾಹುತ ಸಂಭವಿಸುವ ಮುಂಚೆ ಸಂಚಾರ ನಿಯಮಗಳ ಬೋರ್ಡನ್ನು ಹಾಕುವುದು ಮತ್ತು ಕೂಡಲೇ ವಿದ್ಯುತ್ ದ್ವೀಪಗಳನ್ನು ಅಳವಡಿಸಬೇಕೆಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಸಂಚಾಲಕರಾದ ಶರಣುಗಡ್ಡಿ ಮುಖಂಡರಾದ ಮಂಗಳೇಶ ರಾತೋಡ್ ಮನವಿ ಮಾಡಿದ್ದಾರೆ.