
'Kuchuku' movie to release on


‘ಕುಚುಕು’ ಚಲನಚಿತ್ರ ಮೇ.೨೨ ರಂದು ತೆರೆಗೆ

ಬೆಂಗಳೂರು : ಶ್ರೀ ಚಾಮುಂಡೇಶ್ವರಿ ಪಿಕ್ಚರ್ ಬ್ಯಾನರ್ ಮೈಸೂರು ಅವರ ಸ್ನೇಹದ
ಮಹತ್ವ ಸಾರುವ “ಕುಚುಕು” ಕನ್ನಡ ಚಲನಚಿತ್ರ ಇದೆ ಮೇ.೨೨ ರಂದು
ರಾಜ್ಯಾದ್ಯಂತ ತೆರೆಗೆ ಬರಲಿದೆ.
ಚಿತ್ರರಂಗದಲ್ಲಿ “ಕುಚುಕು” ಎಂಬ ಹೆಸರು ಕೇಳಿದೊಡನೆಯೇ ತಟ್ಟನೆ
ನೆನಪಾಗುವುದು ಚಿತ್ರರಂಗದ ಮೇರು ನಟರಾದ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ
ಸಾಹಸಸಿಂಹ ವಿಷ್ಣುವರ್ಧನ್ . ಅವರ ಸವಿ ನೆನಪಿನಲ್ಲಿ ನಿರ್ಮಾಣವಾದ ಸ್ನೇಹಿತರಿಬ್ಬರ ಬಾಂಧವ್ಯದ
ಚಿತ್ರವೇ ಈ ‘ಕುಚುಕು’. ಕಾರವಾರ, ಹೊನ್ನಾವರ, ಮೈಸೂರು ಭಾಗಗಳಲ್ಲಿ
ಸುಮಾರು ನಲವತ್ತೈದು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ,
ಚಿತ್ರದಲ್ಲಿನ ಐದು ಹಾಡುಗಳಿಗೆ ನೃತ್ಯ ಸಂಯೋಜನೆಯನ್ನು ಚಿತ್ರದ
ನಿರ್ದೇಶಕರೆ ನಿರ್ವಹಿಸಿದ್ದು, ನಾಲ್ಕು ಸಾಹಸ ದೃಶ್ಯಗಳನ್ನು ಮಾಸ್ ಮಾದ, ಹ್ಯಾರೀಶ್ ಜಾನಿ,
ಪವರ್ ಪುಷ್ಪರಾಜ್ ಸಂಯೋಜಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ನಾಯಕ ನಟನಾಗಿ ಅರ್ಜುನ್
ಚವ್ಹಾಣ್, ಬಸವರಾಜ್ ಕುಮಾರ್, ನಾಯಕಿಯಾಗಿ ಪ್ರಿಯದರ್ಶಿನಿ , ಪೋಷಕ ಪಾತ್ರಗಳಲ್ಲಿ
ಬಾಲರಾಜ್ ವಾಡಿ, ಶಂಕರ್ ಅಶ್ವಥ್, ರಮೇಶ್ ಪಂಡಿತ್, ಹನುಮಂತೇಗೌಡ್ರು, ಶಿವಾಜಿ, ಮಜಾ
ಟಾಕೀಸ್ ಜಗ್ಗಪ್ಪ, ಕೈಲಾಶ್ ಕುಟ್ಟಪ್ಪ, ಯಶೋದಮ್ಮ, ಡ್ರಾಮಾ ಜೂನಿಯರ್
ಮಹೇಂದ್ರ, ಶಶಿಗೌಡ ಮೊದಲಾದವರಿದ್ದಾರೆ.
ಛಾಯಾಗ್ರಹಣ ರಾಮನಾಥ ರಾಜ್, ಸಂಕಲನ ಅರವಿಂದ್ ರಾಜ್, ಸಂಗೀತ ಎ ಟಿ ರವೀಶ್, ಹಿನ್ನೆಲೆ
ಸಂಗೀತ ಸೂರಜ್, ಸಾಹಸ ಮಾಸ್ ಮಾದ, ಹ್ಯಾರೀಶ್ ಜಾನಿ, ಪವರ್ ಪುಷ್ಪ ರಾಜ್, ಸಂಭಾಷಣೆ
ಹಾಗೂ ಸಹ ನಿರ್ದೇಶನ ರವಿಶಂಕರನಾಗ್, ಪಿಆರ್ ಓ ಸುಧೀಂದ್ರ ವೆಂಕಟೇಶ್, ಡಾ.
ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ ಅವರಿದ್ದು,ನಿರ್ದೇಶನ ಮೈಸೂರ್ ರಾಜು
ಮಾಡಿದ್ದಾರೆ. ಶ್ರೀಮತಿ ನಾಗರತ್ನಮ್ಮ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಮನೆಮಂದಿಯೆಲ್ಲ ಕುಳಿತು ನೋಡುವ ಚಿತ್ರ ಇದಾಗಿದೆ ಎಂದು ನಿರ್ದೇಶಕ
ಮೈಸೂರು ರಾಜು ತಿಳಿಸಿದ್ದಾರೆ. **
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
