ವಣಗೇರಿ ಗ್ರಾಮದ ಬಸವ ಯೋಗಾಶ್ರಮದಲ್ಲಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ತಾಯಿಯವರ ಜಯಂತಿ ಹಾಗು ವಚನ ದರ್ಶನ ಕಾರ್ಯಕ್ರಮ

Jayanti and Vachana Darshana program for Hadapada Appanna and Lingamma Tayi at Basava Yogashrama, Vanageri village

ಯಾವುದೇ ಕಾಯಕ ಕೀಳಲ್ಲ, ಪ್ರಾಮಾಣಿಕ ದುಡಿಮೆಯೇ ಮಾನವನ ನಿಜವಾದ ಧರ್ಮ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ ಬಸವಾದಿ ಶರಣರು: ಬಸವನಗೌಡ ಪೋಲಿಸ್ ಪಾಟೀಲ್ Rtd PSI ಸ್ಪಷ್ಟನೆ
ಯಲಬುರ್ಗಾ: ತಾಲೂಕಿನ ವಣಗೇರಾ ಗ್ರಾಮದ ಶ್ರೀ ಬಸವ ಯೋಗಾಶ್ರಮದಲ್ಲಿ ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ತಾಯಿಯವರ ೮೯೮ನೇ ಜಯಂತಿ ಹಾಗು ೧೧ನೇ ವಚನ ದರ್ಶನ ಮತ್ತು ಶ್ರಾವಣ ಮಾಸದ ವಚನ ಜೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಬಸವನಗೌಡ ಪೋಲಿಸ್ ನಿವೃತ್ತ ಪಿ.ಎಸ್.ಐ ದಂಪತಿಗಳು ಕನಸಾವಿ ಮತ್ತು ಕೊಪ್ಪಳದ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಶರಣ ಗವೀಶ್ ಶಶಿಮಠ ದಂಪತಿಗಳು ಇವರ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ ಹಾಗು ಲಿಂಗ ದೀಕ್ಷೆ ಕಾರ್ಯ ನಡೆಯಿತು. ನಂತರ ನಿಜ ಸುಖಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ತಾಯಿಯವರ ಭಾವಚಿತ್ರಕ್ಕೆ ಹಡಪದ ಸಮುದಾಯದವರ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡುವುದರ ಮೂಲಕ ಜನಸಮುದಾಯಕ್ಕೆ ವಚನ ದರ್ಶನದ ಅನುಭವ ಪ್ರಾರಂಭವಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದ ಶರಣ ಯಶವಂತ ಶರಣರು ಮಾತನಾಡಿ,
ಇಂದಿನ ದಿನಮಾನದಲ್ಲಿ ಜನರು ಸರಿಯಾದ ರೀತಿಯ ಸಂಸ್ಕಾರ ಇಲ್ಲದೆ, ಹಲವಾರು ರೀತಿಯ ದುಶ್ಚಟ, ದುರ್ನಡತೆ, ದುರ್ವಿಚಾರಕ್ಕೆ ಬಲಿಯಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ನಾವು ದುರ್ಬಲತೆಯಿಂದ ದೂರ ಆಗಬೇಕಾದರೆ,ಶರಣರ ಸಂತರ ಮಹಾತ್ಮರ ವಿಚಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇಂದು ನಾವು ಬಸವಣ್ಣ, ಹಡಪದ ಅಪ್ಪಣ್ಣನವರ ಅವರ ಚಿಂತನೆಗಳನ್ನು ಬದುಕಿನ ಆದರ್ಶವನ್ನಾಗಿ ಮಾಡಿಕೊಂಡಾಗ ಮಾತ್ರ ಜಾತಿ-ವರ್ಣ ಭೇದಗಳಿಂದ ಮುಕ್ತವಾದ, ಶ್ರಮಕ್ಕೆ ಗೌರವ ನೀಡುವ, ಶಿಕ್ಷಣಕ್ಕೆ ಮಹತ್ವ ಕೊಡುವ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದಿಂದ ಕೂಡಿದ ಸಮಸಮಾಜ ನಿರ್ಮಾಣವಾಗುತ್ತದೆ ಎಂದರು.
ನಂತರ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ.ಎಸ್ ಐ ಇವರು ಮಾತನಾಡಿ
ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಇತಿಹಾಸದಲ್ಲಿ ಸಮಾಜದ ಉದ್ಧಾರಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಅನೇಕ ಶರಣರು ಜನಿಸಿದ್ದಾರೆ. ಅವರು ತಮ್ಮ ಜೀವನದ ಮೂಲಕ ಮಾನವೀಯತೆ, ಸಮಾನತೆ, ಶ್ರಮದ ಗೌರವ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಸಾರಿದ್ದಾರೆ. ಅಂತಹ ಮಹನೀಯರಲ್ಲಿ ವಿಶ್ವಗುರು ಬಸವಣ್ಣ, ಹನ್ನೆರಡನೇ ಶತಮಾನದ ಮಹಾನ್ ಶರಣ ಹಡಪದ ಅಪ್ಪಣ್ಣ ಲಿಂಗಮ್ಮ ತಾಯಿಯವರು. ಅವರ ಸ್ಥಾನ ಅತ್ಯಂತ ವಿಶಿಷ್ಟವಾಗಿದೆ. ವಿಭಿನ್ನ ಕಾಲಘಟ್ಟಗಳಲ್ಲಿ ಬದುಕಿದ್ದರೂ ಈ ಮೂವರ ಚಿಂತನೆಗಳ ಮೂಲ ಆಶಯ ಒಂದೇ ಆಗಿತ್ತು. ಮಾನವನು ಜಾತಿ, ಮತ, ವರ್ಣ, ಲಿಂಗ ಮತ್ತು ಆರ್ಥಿಕ ಅಸಮಾನತೆಗಳ ಸಂಕೋಲೆಗಳಿಂದ ಮುಕ್ತನಾಗಿ, ಗೌರವಯುತ ಬದುಕನ್ನು ನಡೆಸಬೇಕು ಎಂಬುದೇ ಅವರ ಚಿಂತನೆಯ ಕೇಂದ್ರಬಿಂದುವಾಗಿತ್ತು.
ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಅವರು, ಸಮಾಜದಲ್ಲಿ ಮನೆಮಾಡಿದ್ದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಲಿಂಗ ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದರು. ʼಕಾಯಕವೇ ಕೈಲಾಸʼ ಎಂಬ ಮಹಾತತ್ವದ ಮೂಲಕ ದುಡಿಮೆಯನ್ನು ದೇವರ ಆರಾಧನೆಗೆ ಸಮಾನವೆಂದು ಘೋಷಿಸಿದರು. ಯಾವುದೇ ಕಾಯಕ ಕೀಳಲ್ಲ, ಪ್ರಾಮಾಣಿಕ ದುಡಿಮೆಯೇ ಮಾನವನ ನಿಜವಾದ ಧರ್ಮ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಎಲ್ಲ ಜಾತಿ, ಎಲ್ಲ ವೃತ್ತಿ, ಎಲ್ಲ ವರ್ಗದ ಜನರು ಒಂದೇ ವೇದಿಕೆಯಲ್ಲಿ ಸಮಾನವಾಗಿ ಕುಳಿತು ತಮ್ಮ ಅನುಭವ ಮತ್ತು ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿದರು. ಈ ಕಾರಣದಿಂದ ಅನುಭವ ಮಂಟಪವನ್ನು ವಿಶ್ವದ ಮೊದಲ ಪ್ರಜಾಸತ್ತಾತ್ಮಕ ವಿಚಾರ ವೇದಿಕೆ ಎಂದು ಗೌರವಿಸಲಾಗುತ್ತದೆ.
ಅದಕ್ಕಾಗಿ ಇಂದು ನಾವುಗಳು ಕೂಡ ಬಸವಾದಿ ಶಿವ ಶರಣರು ಬದುಕಿದಂತೆ ಅವರು ವಿಚಾರಗಳನ್ನು ಮೈಗೂಡಿಸಿಕೊಂಡು ಬಾಳಿ ಬದುಕಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದ ಶರಣ ಅಮರೇಶಪ್ಪ ಗಡಿಹಳ್ಳಿ ಸಾ.ಸೋಮಸಾಗರ ಇವರು ಮಾತನಾಡಿ
ಹಡಪದ ಅಪ್ಪಣ್ಣ” ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು “ಹಡಪದ” ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ “ಅನುಭವ ಮಂಟಪದಲ್ಲಿ” ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು. “ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೊಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ”. ಇವರ ಧರ್ಮಪತ್ನಿ ಲಿಂಗಮ್ಮನವರೂ ಸಹ ಮಹಾನ್ ವಚನಗಾರ್ತಿಯಾಗಿದ್ದರು.
ಅಂತಹ ಮಹಾನ್ ಅನುಭವ ಮಂಟಪದ ಪ್ರಮುಖ ಶರಣರಲ್ಲಿ ಹಡಪದ ಅಪ್ಪಣ್ಣ ಅವರು ಅತ್ಯಂತ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದರು. ಕ್ರಿ.ಶ. 1134ರಲ್ಲಿ ಇಂದಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಾಬೀನಾಳ ಗ್ರಾಮದಲ್ಲಿ ಚನ್ನವೀರಪ್ಪ ಮತ್ತು ದೇವಕಮ್ಮ ದಂಪತಿಗೆ ಜನಿಸಿದ ಅಪ್ಪಣ್ಣನವರು ಕ್ಷೌರಿಕ ಹಡಪದ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ಅವರು ತಮ್ಮ ವೃತ್ತಿಯನ್ನು ಕೇವಲ ಜೀವನೋಪಾಯವೆಂದು ಪರಿಗಣಿಸಲಿಲ್ಲ. ತಮ್ಮ ಕಾಯಕವನ್ನೇ ಶಿವಸೇವೆಯಾಗಿ ಸ್ವೀಕರಿಸಿ, ಬಸವಣ್ಣನವರ ʼಕಾಯಕವೇ ಕೈಲಾಸʼ ಎಂಬ ತತ್ವವನ್ನು ತಮ್ಮ ಬದುಕಿನಲ್ಲಿ ಅಕ್ಷರಶಃ ಅಳವಡಿಸಿಕೊಂಡರು. ಶ್ರಮಕ್ಕೆ ಗೌರವ ನೀಡಿದ ಅವರು, ಪ್ರತಿಯೊಂದು ಕಾಯಕವೂ ಪವಿತ್ರ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅದಕ್ಕಾಗಿ ಹಡಪದ ಅಪ್ಪಣ್ಣ ಶರಣರ ಬಳುವಳಿಯಿಂದ ಬಂದು ಈಗಿನ ಹಡಪದ ಸಮಾಜದವರು ತಮ್ಮ ಮನೆ ಮತ್ತು ಕಾಯಕ ಮಾಡುವ ಸ್ಥಳದಲ್ಲಿ ಕುಲಗುರು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ತಾಯಿಯ ಫೋಟೋ ಹಾಗು ಧರ್ಮ ಗುರು ಬಸವಣನವರ ಭಾವ ಚಿತ್ರ ಗಳನ್ನ ಕಡ್ಡಾಯವಾಗಿ ಹಾಕಿಕೊಂಡು, ಅಂಗದ ಮೇಲೆ ಲಿಂಗ ಧರಿಸಿ ಲಿಂಗಾಂಗ ಸಾಮರಸ್ಯದಿಂದ ಬದುಕಿದ್ದಾಗ ಮಾತ್ರ ನಮ್ಮ ಜೀವನ ಪಾವನ ಆಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣೆ ಅರ್ಚನಾ ಗವೀಶ್ ಸಶೀಮಠ ಕೋಪ್ಪಳ ಇವರು ಮಾತನಾಡಿ,
ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಅವರು, ಸಮಾಜದಲ್ಲಿ ಮನೆಮಾಡಿದ್ದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಲಿಂಗ ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದರು. ʼಕಾಯಕವೇ ಕೈಲಾಸʼ ಎಂಬ ಮಹಾತತ್ವದ ಮೂಲಕ ದುಡಿಮೆಯನ್ನು ದೇವರ ಆರಾಧನೆಗೆ ಸಮಾನವೆಂದು ಘೋಷಿಸಿದರು. ಯಾವುದೇ ಕಾಯಕ ಕೀಳಲ್ಲ, ಪ್ರಾಮಾಣಿಕ ದುಡಿಮೆಯೇ ಮಾನವನ ನಿಜವಾದ ಧರ್ಮ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಎಲ್ಲ ಜಾತಿ, ಎಲ್ಲ ವೃತ್ತಿ, ಎಲ್ಲ ವರ್ಗದ ಜನರು ಒಂದೇ ವೇದಿಕೆಯಲ್ಲಿ ಸಮಾನವಾಗಿ ಕುಳಿತು ತಮ್ಮ ಅನುಭವ ಮತ್ತು ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿದರು. ಈ ಕಾರಣದಿಂದ ಅನುಭವ ಮಂಟಪವನ್ನು ವಿಶ್ವದ ಮೊದಲ ಪ್ರಜಾಸತ್ತಾತ್ಮಕ ವಿಚಾರ ವೇದಿಕೆ ಎಂದು ಗೌರವಿಸಲಾಗುತ್ತದೆ.
ಅಂತಹ ಮಹಾನ್ ಅನುಭವ ಮಂಟಪದ ಪ್ರಮುಖ ಶರಣರಲ್ಲಿ ಹಡಪದ ಅಪ್ಪಣ್ಣ ಅವರು ಅತ್ಯಂತ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದರು. ಕ್ರಿ.ಶ. 1134ರಲ್ಲಿ ಇಂದಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಾಬೀನಾಳ ಗ್ರಾಮದಲ್ಲಿ ಚನ್ನವೀರಪ್ಪ ಮತ್ತು ದೇವಕಮ್ಮ ದಂಪತಿಗೆ ಜನಿಸಿದ ಅಪ್ಪಣ್ಣನವರು ಕ್ಷೌರಿಕ ಹಡಪದ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ಅವರು ತಮ್ಮ ವೃತ್ತಿಯನ್ನು ಕೇವಲ ಜೀವನೋಪಾಯವೆಂದು ಪರಿಗಣಿಸಲಿಲ್ಲ. ತಮ್ಮ ಕಾಯಕವನ್ನೇ ಶಿವಸೇವೆಯಾಗಿ ಸ್ವೀಕರಿಸಿ, ಬಸವಣ್ಣನವರ ʼಕಾಯಕವೇ ಕೈಲಾಸʼ ಎಂಬ ತತ್ವವನ್ನು ತಮ್ಮ ಬದುಕಿನಲ್ಲಿ ಅಕ್ಷರಶಃ ಅಳವಡಿಸಿಕೊಂಡರು. ಶ್ರಮಕ್ಕೆ ಗೌರವ ನೀಡಿದ ಅವರು, ಪ್ರತಿಯೊಂದು ಕಾಯಕವೂ ಪವಿತ್ರ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಶಿವಾನಂದ ಸ್ವಾಮೀಜಿ ಮಕ್ಕಳಿ ಇವರು ಮಾತನಾಡಿ
ಹಡಪದ ಅಪ್ಪಣ್ಣನವರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾನತೆ, ದಾಸೋಹ, ಕಾಯಕ ಮತ್ತು ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತರಿಸಿದರು. ಜಾತಿ, ಮತ ಮತ್ತು ವರ್ಣಭೇದಗಳನ್ನು ತಿರಸ್ಕರಿಸಿ, ಪ್ರತಿಯೊಬ್ಬ ಮಾನವನಲ್ಲಿಯೂ ಶಿವನನ್ನು ಕಾಣುವ ಬಸವ ತತ್ವವನ್ನು ತಮ್ಮ ಜೀವನದಲ್ಲಿ ಆಚರಿಸಿದರು. ಕಲ್ಯಾಣದ ಶರಣ ಚಳವಳಿಯಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಅವರು ತೋರಿದ ನಿಷ್ಠೆ, ಧೈರ್ಯ ಮತ್ತು ಸೇವಾಭಾವ ಇಂದಿಗೂ ಮಾದರಿಯಾಗಿದೆ. ಅವರ ಜೀವನವು ಕೇವಲ ಒಬ್ಬ ಶರಣನ ಜೀವನವಲ್ಲ, ಸಮಾಜಕ್ಕೆ ದಾರಿದೀಪವಾದ ಆದರ್ಶ ಜೀವನವಾಗಿದೆ ಎಂದರು.
ನಂತರ ಜಮಖಂಡಿ ಪುಜ್ಯ ಮಹಾರಾಜರು, ಮತ್ತು ಗವೀಶ ಶಶಿಮಠ ಮತ್ತು ಯಲಬುರ್ಗಾ ತಾಲೂಕ ಹಡಪದ ಸಮಾಜದ ಅಧ್ಯಕ್ಷ ರು ವೇದಿಕೆ ಹಂಚಿಕೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಣಗೇರಿ ಮತ್ತ ಯಲಬುರ್ಗಾ ತಾಲೂಕಿನ ಹಡಪದ ಸಮಾಜದ ಶರಣರು ಇನ್ನಿತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
✍️ ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ
