Secretary G. Purushotham made excellent arrangements at Madappana Betta on the occasion of Bheemana Amavasya.

ಮಾದಪ್ಪನ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆಯಂದು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ ಕಾರ್ಯದರ್ಶಿ ಜಿ ಪುರೊಷತ್ತಮ್ .

ವರದಿ: ಬಂಗಾರಪ್ಪ .ಸಿ.
ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಾದೆಶ್ವರನ ಬೆಟ್ಟದಲ್ಲಿ ದೇವಾಲಯಕ್ಕೆ ಬಹು ದೊಡ್ಡ ಮೊತ್ತದ ಆಕರ್ಷಕ ಅಲಂಕಾರವನ್ನು ಭಕ್ತಾಧಿಗಳು ನೆರವೇರಿಸಿದ್ದಾರೆ .
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಕ್ಷೇತ್ರದಲ್ಲಿನ ದೇವಾಲಯದಲ್ಲಿ
ತಮಿಳುನಾಡು ಮೂಲದ ಭಕ್ತರೊಬ್ಬರು ಭೀಮನ ಅಮಾವಾಸ್ಯೆ ಹಿನ್ನೆಲೆ 1 ಲಾರಿ ಹೂವುಗಳಿಂದ ಮಲೆ ಮಹದೇಶ್ವರ ದೇವಾಲಯವನ್ನು ಪುಷ್ಪಲಂಕಾರ ಮಾಡಿಸಿದ್ದಾರೆ, ಬೆಟ್ಟದಲ್ಲಿ ಭೀಮನ ಅಮಾವಾಸ್ಯೆಯ ಸಂಭ್ರಮ. ಹಿನ್ನೆಲೆಯಲ್ಲಿ ನಾನಾಭಾಗದಿಂದ ಭಕ್ತಸಾಗರವೇ ಹರಿದು ಬಂದಿದೆ.
ಭೀಮನ ಅಮಾವಾಸ್ಯೆ ಹಿನ್ನೆಲೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ದೇವಾಲಯವು ವಿವಿಧ ಬಗೆಯ ಪುಷ್ಪಗಳಿಂದ ಕಂಗೊಳಿಸುತ್ತಿದೆ. ತಮಿಳುನಾಡಿನ ಹೊಸೂರು ಮೂಲದ ಭಕ್ತ ರೋಸ್ ರಮೇಶ್ ಎಂಬವರು 15 ಲಕ್ಷ ರೂ. ವೆಚ್ಚದಲ್ಲಿ 1 ಲಾರಿ ಹೂವುಗಳಿಂದ ಪುಷ್ಪಲಂಕಾರ ಮಾಡಿಸಿದ್ದಾರೆ. ಇತರ ಭಾಗಗಳಾದ
ಗರ್ಭಗುಡಿ, ರಾಜಗೋಪುರ, ದೇವಾಲಯದ ಹೊರಾಂಗಣ, ರುದ್ರಾಕ್ಷಿ ಮಂಟಪ, ಬಸವ ವಾಹನ ಹಾಗೂ ರಥೋತ್ಸವ ಮಾರ್ಗವನ್ನು ಲಿಲಿಯಂ, ಆರ್ಕಿಡ್, ಕಾರ್ನೇಷನ್, ಜರ್ಬೆರಾ, ಡೈಸಿ, 5 ಬಗೆಯ ಗುಲಾಬಿಗಳು ಸೇರಿದಂತೆ ಒಟ್ಟು 20 ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.
ಭೀಮನ ಅಮಾವಾಸ್ಯೆ ನಿಮಿತ್ತ ಮಂಗಳವಾರದಂದು ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನೆರವೇರಿದ್ದು ಇಂದು ಸರದಿ ಬೇಡಗಂಪಣ ಅರ್ಚಕರು ಸಾಂಪ್ರಾದಾಯಿಕ ವಿಶೇಷ ಪೂಜೆ ಸಲ್ಲಿಸಿ ಮಹದೇಶ್ವರನ ಲಿಂಗಕ್ಕೆ ಮಹಾ ಮಜ್ಜನ ನೆರವೇರಿಸಿ ಗಂಧಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ ಮಾಡಲಾಯಿತು,
ರಾಜ್ಯದ ನಾನಾ ಭಾಗದಿಂದ ಬಂದ ಭಕ್ತರು, ಸರತಿ ಸಾಲಿನಲ್ಲಿ ನಿಂತು ಮಾದಪ್ಪನನ್ನು ಕಣ್ತುಂಬಿಕೊಂಡು ಉಘೇ ಉಘೇ ಮಾದಪ್ಪ ಘೋಷವಾಕ್ಯ ಮೊಳಗಿಸಿದರು. ದೂಪ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಹರಕೆ ಕಟ್ಟಿಕೊಂಡ ಭಕ್ತರು ಮುಡಿಸೇವೆ ನೀಡಿದ್ದು ಕಂಡಿಬಂದಿತು.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಭೀಮನ ಅಮಾವಾಸ್ಯೆ ಪೂಜೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಮಾರ್ಗದರ್ಶನದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನೂತನವಾಗಿ ಅಧಿಕಾರ ವಹಿಸಿಕೊಂಡ ಪ್ರಾಧಿಕಾರದ ಕಾರ್ಯದರ್ಶಿಗಳಾದ ಜಿ ಪುರೋಷೊತ್ತಮ್ ರವರು ಕಾರ್ಯಕ್ಕೆ ಎಲ್ಲಾರಿಂದ ಮೆಚ್ಚುಗೆಗೆ ಪಾತ್ರವಾಗಿದೆ ,
ವಿಶೇಷ ದಾಸೋಹ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾಡಲಾಗಿದ್ದು,ಪಾರುಪತ್ತೇದಾರರಾದ ಮಹಾದೇವಸ್ವಾಮಿ . ರಾಜಶೇಖರ್ , ಉಮೇಶ್ .ಸೇರಿದಂತೆ ಇನ್ನಿತರರು ನೌಕರರು ಯಾವುದೇ ಭಕ್ತರಿಗೆ ಲೋಪವಾಗದಂತೆ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಎಚ್ಚರ ವಹಿಸಿದರು. ಭಕ್ತಾದಿಗಳಿಗೆ ವಿಶೇಷವಾಗಿ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ನಡೆಸುತ್ತಿದ್ದು ಭಕ್ತರಿಗೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
