Purana initiation pre-bhavi sabha at Sri Vijaya Durgadevi temple


ಶ್ರೀ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ಪುರಾಣ ಪ್ರಾರಂಭ ಪೂರ್ವ ಭಾವಿ ಸಭೆ
ಯಲಬುರ್ಗಾ: ಸುಕ್ಷೇತ್ರ ಯಲಬುರ್ಗಾದ ಶ್ರೀ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಸೆ.25 ರಂದು ಶುಕ್ರವಾರ ಸಂಜೆ ಪುರಾಣ ಪ್ರಾರಂಭದ ಬಗ್ಗೆ ಹಾಗು ಲೇಖ್ಖ ಪತ್ರದ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ಮುಖಂಡ ವೀರಣ್ಣ ಹುಬ್ಬಳ್ಳಿ ಇವರ ಅಧ್ಯಕ್ಷತೆಯಲ್ಲಿ ಚರ್ಚಿಸಲಾಗಿತು. ನಂತರ ಶ್ರೀ ವಿಜಯದುರ್ಗಾ ದೇವಸ್ಥಾನದ ಸಮಿತಿಯ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಗಿತು. ಅಧ್ಯಕ್ಷರಾಗಿ ಫಕೀರಪ್ಪ ಉಪ್ಪಾರ,ಉಪಾಧ್ಯಕ್ಷರಾಗಿ ಕೊಟ್ರಪ್ಪ ಚೌವಡಿ, ಕಾರ್ಯದರ್ಶಿಯಾಗಿ ಹುಲ್ಲಣಸಾ ತುಳಸಿಕಟ್ಡಿ, ಶರಣಬಸಪ್ಪ ದಾನಕೈ, ಹಾಗು ಖಜಾಂಚಿಯಾಗಿ ಪ್ರಕಾಶ ಶೇಟ್ಟರ ಇವರನ್ನು ಆಯ್ಕೆ ಮಾಡಲಾಗಿತು.ಈ ವೇಳೆ ಮುಖಂಡರಾದ ಶೇಖರಗೌಡ್ರ ಉಳ್ಳಾಗಡ್ಡಿ, ವೀರನಗೌಡ ಭರಮಗೌಡ್ರ , ಅಂದಯ್ಯ ಕಳ್ಳಿಮಠ,ಬಸಪ್ಪ ಕಮ್ಮಾರ, ಶಿವಕುಮಾರ ಭೂತೆ, ಸುರೇಶಗೌಡ ಶಿವನಗೌಡ್ರ ದಾನನಗೌಡ ತೊಂಡಿಹಾಳ,ವಿಜಯಕುಮಾರ ಕರಂಡಿ, ಹನುಮಂತಪ್ಪ ದಾನಕೈ, ಬಸವರಾಜ ಗುಳಗುಳಿ, ಮಂಜಪ್ಪ ಅಧಿಕಾರಿ, ಷಣ್ಮುಖಪ್ಪ ರಾಂಪೂರ, ಮಹಾದೇವಪ್ಪ ಕಮ್ಮಾರ,ಅಶೋಕ ಮಾಲಿಪಾಟೀಲ, ದೇವಪ್ಪ ವಾಲ್ಮೀಕಿ, ಶರಣಗೌಡ ಕೊಡಗಲಿ, ಕುಬ್ಬಣ್ಣ ಪತ್ತಾರ, ಚಿದಾನಂದ ಬಡಿಗಗೇರ ಸೇರಿದಂತೆ ದೇವಸ್ಥಾನದ ಸಮತಿಯ ಸದಸ್ಯರು ಭಾಗವಹಿಸಿದ್ದರು.



