
ಲೈಕ್ ವಿವ್ಸ್ ಗೆ ಜನ ಏನೋನೋ ಮಾಡುತ್ತಿದ್ದಾರೆ ನೋಡಿ…ಇನ್ನೂ ಏನೇನ್ ನೋಡ್ಬೇಕು ನಾ ಕಾಣೆನು!

Look at the things people are doing just for likes and views... goodness knows what else we’ll have to see!

ಲೈಕ್ ವಿವ್ಸ್ ಗೆ ಜನ ಏನೋನೋ ಮಾಡುತ್ತಿದ್ದಾರೆ ನೋಡಿ…
ಇನ್ನೂ ಏನೇನ್ ನೋಡ್ಬೇಕು ನಾ ಕಾಣೆನು!
: ಸುಮಾರು 70 ವರ್ಷದ ವಯೋವೃದ್ಧೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುವ ಮೂಲಕ ಹುಬ್ಬಳ್ಳಿ-ಧಾರವಾಡ ಜನತೆಯನ್ನು ಕ್ಷಣಕಾಲ ದಂಗಾಗಿಸಿತ್ತು.
ಮಗುವಿಗೆ ಜನ್ಮ ನೀಡಿದ 70ರ ಅಜ್ಜಿ?
ಇದರ ಹಿಂದಿನ ಸತ್ಯ ಬೇರೆಯೇ ಇದೆ…
ಸುಮಾರು 70 ವರ್ಷದ ವಯೋವೃದ್ಧೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುವ ಮೂಲಕ ಹುಬ್ಬಳ್ಳಿ-ಧಾರವಾಡ ಜನತೆಯನ್ನು ಕ್ಷಣಕಾಲ ದಂಗಾಗಿಸಿತ್ತು. “ನನಗೆ ದೇವರು ಮಗುವನ್ನು ಕೊಟ್ಟಿದ್ದಾನೆ” ಎಂದು ಅಜ್ಜಿ ಹೇಳುವ ಮಾತುಗಳನ್ನು ಕೇಳಿ ಲಕ್ಷಾಂತರ ಜನರು ಆಶ್ಚರ್ಯಚಕಿತರಾಗಿದ್ದರು. ಆದರೆ, ಈ ವಿಡಿಯೋದ ಸಂಪೂರ್ಣ ತನಿಖೆ ನಡೆಸಿದಾಗ ಇದು ಯಾವುದೇ ಪವಾಡ ಅಥವಾ ಸತ್ಯ ಘಟನೆಯಲ್ಲ, ಬದಲಿಗೆ ಲೈಕ್ಸ್ ಮತ್ತು ವ್ಯೂಸ್ಗಾಗಿ ಮಾಡಿದ ‘ಫೇಕ್ ರೀಲ್ಸ್’ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೋಗೆನಾಗರಕೊಪ್ಪ ಗ್ರಾಮದ ಪಕ್ಕೀರಮ್ಮ ಎಂಬ ವೃದ್ಧೆಯೇ ಈ ವೈರಲ್ ವಿಡಿಯೋದ ಪ್ರಮುಖ ರೂವಾರಿ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಲಗಿದ್ದ ಅಜ್ಜಿ, ತನ್ನ ಪಕ್ಕದಲ್ಲಿ ನವಜಾತ ಮಗುವೊಂದನ್ನು ಮಲಗಿಸಿಕೊಂಡು ಈ ವಿಡಿಯೋ ಮಾಡಿದ್ದಾರೆ. “ನಾನೇ ಈ ಮಗುವಿಗೆ ಜನ್ಮ ನೀಡಿದ್ದೇನೆ, ಇದನ್ನು ನನಗೆ ಆ ದೇವರೇ ಕರುಣಿಸಿದ್ದಾನೆ” ಎಂದು ಅಜ್ಜಿ ಅಭಿನಯಿಸಿ ರೀಲ್ಸ್ ಶೂಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ವೈದ್ಯಕೀಯ ಲೋಕವೇ ಅಚ್ಚರಿಪಡುವಂತಹ ಘಟನೆ ನಡೆದಿದೆಯೇ ಎಂದು ಜನರು ಬೆರಗಾಗಿದ್ದರು. ಅನೇಕರು ಈ ವಯಸ್ಸಿನಲ್ಲಿ ಮಗು ಹೇಗಾಯಿತು ಎಂದು ಚರ್ಚಿಸಲು ಶುರು ಮಾಡಿದ್ದರು. ಆದರೆ, ಸ್ಥಳೀಯರು ಹಾಗೂ ಆಸ್ಪತ್ರೆ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಅದು ಬೇರೊಬ್ಬರ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ಮಾಡಿದ ಬರೀ ‘ರೀಲ್ಸ್ ಗಿಮಿಕ್’ ಎಂಬುದು ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಜನ ಎಷ್ಟರಮಟ್ಟಿಗೆ ಹುಚ್ಚಾಟ ಆಡುತ್ತಾರೆ ನೋಡಿ.
70ರ ವಯಸ್ಸಿನಲ್ಲಿ ತಾಯಿಯಾಗುವುದು ಸಾಧ್ಯವೇ?
ವೈದ್ಯಕೀಯ ವಿಜ್ಞಾನದ ಪ್ರಕಾರ ಮಹಿಳೆಯರಲ್ಲಿ ವಯಸ್ಸು ಹೆಚ್ಚಾದಂತೆ ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಋತುಬಂಧದ ನಂತರ ಸಹಜವಾಗಿ ಗರ್ಭಧರಿಸುವುದು ಸಾಮಾನ್ಯವಾಗಿ ಸಾಧ್ಯವಿಲ್ಲ. ಆದರೆ ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದ ಕೆಲವು ಮಹಿಳೆಯರು ಹೆಚ್ಚಿನ ವಯಸ್ಸಿನಲ್ಲಿಯೂ ತಾಯಿಯಾಗಿರುವ ಉದಾಹರಣೆಗಳಿವೆ.
ವಿಶೇಷವಾಗಿ ಐವಿಎಫ್ (IVF) ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ ತಂತ್ರಜ್ಞಾನವು ಸಂತಾನೋತ್ಪತ್ತಿ ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ನೆರವಾಗುತ್ತಿದೆ. ದಾನಿಗಳ ಅಂಡಾಣುಗಳನ್ನು ಬಳಸುವ ಮೂಲಕ ಋತುಬಂಧದ ನಂತರವೂ ಕೆಲವು ಮಹಿಳೆಯರು ಗರ್ಭಧರಿಸಲು ಸಾಧ್ಯವಾಗುತ್ತದೆ.
ಭಾರತದಲ್ಲೂ ನಡೆದಿತ್ತು ಇಂತಹ ಅಪರೂಪದ ಘಟನೆ!
2019ರಲ್ಲಿ ಆಂಧ್ರಪ್ರದೇಶದ ಎರ್ರಮಟ್ಟಿ ಮಂಗಾಯಮ್ಮ ಎಂಬ ಮಹಿಳೆ 73 ವರ್ಷ ವಯಸ್ಸಿನಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿರುವುದಾಗಿ ವರದಿಯಾಗಿತ್ತು. ಐವಿಎಫ್ ತಂತ್ರಜ್ಞಾನದ ನೆರವಿನಿಂದ ಅವರು ತಾಯಿಯಾಗಿದ್ದರು.
ಈ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಹೆಚ್ಚಿನ ವಯಸ್ಸಿನಲ್ಲಿ ಮಹಿಳೆಯೊಬ್ಬರು ಮಕ್ಕಳಿಗೆ ಜನ್ಮ ನೀಡಿರುವುದು ವೈದ್ಯಕೀಯ ಕ್ಷೇತ್ರದಲ್ಲಿಯೂ ಚರ್ಚೆಗೆ ಕಾರಣವಾಗಿತ್ತು.
70 ವರ್ಷ ವಯಸ್ಸಿನ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಕೇಳಿದಾಗ, ಅದು ಸಹಜ ಗರ್ಭಧಾರಣೆಯಿಂದ ಸಂಭವಿಸಿದೆ ಎಂದು ಭಾವಿಸುವುದು ಸರಿಯಲ್ಲ.
70 ವರ್ಷ ವಯಸ್ಸಿನ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಮಹಿಳೆಯರು 45ರಿಂದ 55 ವರ್ಷಗಳ ನಡುವೆ ಋತುಬಂಧಕ್ಕೆ ಒಳಗಾಗುತ್ತಾರೆ. ಹೀಗಿರುವಾಗ 70ರ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ಸವಿತಾ ಜೆ
#newspaper #NewsUpdate #newsfeed #darawad #hubballi



