Breaking News

ಮಾದಪ್ಪ ಸನ್ನಿಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ ಸಚಿವರಾದ ರಾಮಲಿಂಗರೆಡ್ಡಿ

Minister Ramalingareddy emphasized on development in the presence of Madappa.


ವರದಿ ; ಬಂಗಾರಪ್ಪ ಸಿ ಹನೂರು.
ಹನೂರು /ಬೆಂಗಳೂರು : ಪ್ರಸಿದ್ದ ಯಾತ್ರ ಸ್ಥಳವಾದ
ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರದ 15 ನೇ ಸಭೆ ಬೆಂಗಳೂರಿನ ವಿಕಾಸ ಸೌಧ ದಲ್ಲಿ ದಿನಾಂಕ 18/01/2024 ರಂದು ನಡೆಯಿತು, ಮಾದಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸಲು ತಿರುಪತಿ ಮಾದರಿಯಲ್ಲಿ ಹೈಟೆಕ್ ದಾಸೋಹ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ,ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ .ವೆಂಕಟೇಶ್ ಹಾಗೂ, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗರೆಡ್ಡಿ ಹಾಜರಿದ್ದು ಯಶಸ್ವಿಯಾಗಿ ನಿರ್ವಹಿಸಿದರು .
ನಂತರ ಮಾತನಾಡಿದ ಮುಜುರಾಯಿ ಸಚಿವರು
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಇತ್ತೀಚಿನ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರಿಕರು ಹಾಗೂ ಭಕ್ತರು ಆಗಮಿಸುತ್ತಿದ್ದಾರೆ. ಇವರಿಗೆ ವಿಶ್ರಾಂತಿ ಪಡೆಯಲು 9.5 ಕೋಟಿ ವೆಚ್ಚದಲ್ಲಿ ತಾಳಬೆಟ್ಟ ಹಾಗೂ ದಾಸೋಹ ಮುಂಭಾಗ ಶೆಲ್ಟರ್ ನಿರ್ಮಾಣ ಮಾಡುವ ಕಾಮಗಾರಿ ಸಂಬಂಧ ಚರ್ಚಿಸಲಾಯಿತು.
ಮಲೆ ಮಾದೇಶ್ವರ ಬೆಟ್ಟದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಒಳಚರಂಡಿ ಕಾಮಗಾರಿಗೆ ಸರ್ಕಾರದ ವತಿಯಿಂದ 13.5 ಕೋಟಿ ಅನುದಾನ ಬಿಡುಗಡೆಯಾಗಲು ಬೇಕಿತ್ತು. ಈ ಬಗ್ಗೆ ಸಚಿವರು ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಗಳಿಗೆ ಹಾಗೂ ಒಳಚರಂಡಿ ಮಂಡಳಿಯವರಿಗೆ ಶೀಘ್ರವೇ ಅನುದಾನ ನೀಡುವಂತೆ ಸೂಚನೆ ನೀಡಿದರು.
ತಾಳಬೆಟ್ಟದಿಂದ ಕತ್ತಿ ಪವಾಡದವರೆಗೆ ನಿರ್ಮಾಣ ಮಾಡುತ್ತಿರುವ ಮೆಟ್ಟಿಲು ಕಾಮಗಾರಿ ಅಪೂರ್ಣಗೊಂಡಿದ್ದು ಶೀಘ್ರವೇ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿ, ಮಾರ್ಗ ಮಧ್ಯದಲ್ಲಿ ಶೌಚಾಲಯ ಹಾಗೂ ತಂಗುದಾಣ ಮಾಡಲು ಅರಣ್ಯ ಇಲಾಖೆಯವರು ತೊಂದರೆ ನೀಡಬಾರದು ಎಂದು ಉಪ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಪಾಟೀಲ್ ಅವರಿಗೆ ಸೂಚನೆ ನೀಡಿದರು.
ಇನ್ನು ಎಂ ಎಸ್ ಐ ಎಲ್ ವತಿಯಿಂದ ಒಂದು ಮೆಗಾ ವ್ಯಾಟ್ ಉತ್ಪಾದಿಸಲು ಸೋಲಾರ್ ಪ್ರಾಜೆಕ್ಟ್ ಮಾಡಲಾಗಿದ್ದು ಇನ್ನು ಮೂರು ತಿಂಗಳೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು . ಮುಂದುವರಿದು ಮಾತನಾಡಿದ
ಮುಜರಾಯಿ ಸಚಿವ ರಾಮಲಿಂಗ ರೆಡ್ಡಿರವರು ಆಲ0ಬಾಡಿ ಗ್ರಾಮದಲ್ಲಿ ಜುಂಜೇಗೌಡರು ನಿರ್ಮಾಣ ಮಾಡಿರುವ ನಾರಾಯಣಸ್ವಾಮಿ ದೇವಾಲಯ ಅಳಿವಿನಂಚಿನಲ್ಲಿರುವುದರಿಂದ ಪುರಾತತ್ವ ಇಲಾಖೆ ವತಿಯಿಂದ ಜೀರ್ಣೋದ್ಧಾರ ಮಾಡಲು ಮುಂದಿನ ಬಜೆಟ್ ನಲ್ಲಿ ಒಂದು ಕೋಟಿ ನೀಡುವುದಾಗಿ ತಿಳಿಸಿದರು. ಜೀರ್ಣೋದ್ಧಾರ ಕಾಮಗಾರಿಗೆ 3 ಕೋಟಿಗೂ ಹೆಚ್ಚು ಹಣ ಬೇಕಾಗಿರುವುದರಿಂದ ಹೆಚ್ಚುವರಿ ಹಣವನ್ನು ಪ್ರಾಧಿಕಾರದಿಂದ ನೀಡಿ ದೇವಾಲಯ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ದೀಪದ ಗೀರಿ ಒಡ್ಡಿನಲ್ಲಿ ನಿರ್ಮಾಣವಾಗಿರುವ
108 ಎತ್ತರದ‌ ಮಲೆ ಮಹದೇಶ್ವರ ಪ್ರತಿಮೆಯ ಒಳ ಆವರಣದಲ್ಲಿ ಲೀಲೆಗಳ ಕಾಮಗಾರಿ ಪ್ರಗತಿಯಲ್ಲಿದ್ದು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, ಇನ್ನು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹದಿಮೂರು ಕಾಮಗಾರಿಗಳಾದ ರಸ್ತೆ, ಶೌಚಾಲಯ ತಡೆಗೋಡೆ ಸೇರಿದಂತೆ ವಿನೂತನ ಮಾದರಿಯಲ್ಲಿ ದೀಪಾಲಂಕರದ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 10 ಉಪ ದೇವಾಲಯಗಳಿಗೆ ಈ ಹಿಂದೆ ಕಡಿಮೆ ಪೂಜಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿತ್ತು. ಇದೀಗ ಒಂದು ದೇವಾಲಯಕ್ಕೆ 5 ಕೆಜಿ ಅಕ್ಕಿ ಐದು ಬೆಲ್ಲ ಒಂದು ಲೀಟರ್ ದೀಪದ ಎಣ್ಣೆ 5 ಕಾಯಿ ನೀಡಲು ಒಪ್ಪಿಗೆ ನೀಡಲಾಗಿದೆ. ಇದಲ್ಲದೆ ತಾಳುಬೆಟ್ಟದ ಸಮೀಪವಿರುವ ಕೂಡುಗಲ್ಲು ಮಾದೇಶ್ವರ ಕೋವಿ ಮಾದೇಶ್ವರ ಎರಡು ದೇವಾಲಯಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಲಾಯಿತು.ಇದೇ ಸಂದರ್ಭದಲ್ಲಿ
ಶಾಸಕರುಗಳಾದ ಎ ಆರ್ ಕೃಷ್ಣಮೂರ್ತಿ, ವಿಧಾನ ಪರಿ ಷತ್ ಸ ದಸ್ಯರುಗಳಾದ ಮಧು ಜಿ ಮಾದೇಗೌಡ, ಡಾ. ತಿಮ್ಮಯ್ಯ, ಮಂಜೇಗೌಡ, ಚಾಮರಾಜನಗರ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಮುಜರಾಯಿ ಇಲಾಖೆಯ ಆಯುಕ್ತರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಬಸವರಾಜೇಂದ್ರ, ಜಿಲ್ಲಾಧಿಕಾರಿ ಶಿಲ್ಪನಾಗ್, ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ,CEO ,SP ,PWD secretary ಇನ್ನಿತರರ ಅಧಿಕಾರಿಗಳು ಹಾಜರಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.