Breaking News

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷಸ್ಥಾನಕ್ಕೆತಾಲೂಕಿನ ಸಿಂಗನಾಳ ಗ್ರಾಮದ ರುದ್ರಪ್ಪ ಬಸಾಪಟ್ಟಣ ಅವರ ಹೆಸರನ್ನು ಶಿಫಾರಸ್ಸು ಮಾಡಲು ಒತ್ತಾಯಿಸಿ ಮನವಿ

Request to recommend the name of Rudrappa Basapatna of Singanala village of the taluk for the chairmanship of the State Sheep and Wool Development Corporation.


ಕಾರಟಗಿ : ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತಾಲೂಕಿನ ಸಿಂಗನಾಳ ಗ್ರಾಮದ ರುದ್ರಪ್ಪ ಬಸಾಪಟ್ಟಣ ಅವರ ಹೆಸರನ್ನು ಶಿಫಾರಸ್ಸು ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಪಟ್ಟಣದ ಅವರ ಗೃಹ ಕಚೇರಿಗೆ ಭೇಟಿ ನೀಡಿ ನೂರಾರು ಕುರಿಗಾಹಿಗಳು ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಬಳಿಕ ಕುರಿಗಾಹಿಗಳು ಮಾತನಾಡಿ ರುದ್ರಪ್ಪ ಅವರು ನೂರಾರು ಕುರಿಗಳನ್ನು ಸಾಕಿದ್ದು ಕುರಿಗಾಹಿಗಳ ಕಷ್ಟ-ನಷ್ಟವನ್ನು ತಿಳಿದವರು. ಜತೆಗೆ ಯುವಮುಖಂಡರು ಹಾಗೂ ಕುರಿಗಾಹಿಗಳು ಯವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡರೆ ಕೂಡಲೇ ಸ್ಪಂದನೆ ಮಾಡುತ್ತಾರೆ. ಹೀಗಾಗಿ ಅಂತ ವ್ಯಕ್ತಿಯನ್ನು ನಿಗಮಕ್ಕೆ ಆಯ್ಕೆ ಮಾಡುವುದರಿಂದ ಕುರಿಗಾಹಿಗಳಿಗೆ ಅನುಕೂಲವಾಗಲಿದೆ. ಅವರ ಸೇವೆಯನ್ನು ರಾಜ್ಯಾದ್ಯಂತ ಮಾಡಲು ಅವಕಾಶ ನೀಡಬೇಕೆಂದು ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಬೂದಗುಂಪಾ, ಹಿರಿಯ ಮುಖಂಡರು, ಕಾರ್ಯಕರ್ತರು ಸೇರಿ ನೂರಾರು ಕುರಿಗಾಹಿಗಳು ಇದ್ದರು.

ಜಾಹೀರಾತು

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.