Breaking News

ಹೇಮಗುಡ್ಡ ಗ್ರಾಮದ ಉಗ್ರನರಸಿಂಹಸ್ಮಾರಕದ ಬಳಿ ಶ್ರಮದಾನ

Shramadana near the Ugranarasimha memorial in Hemagudda village

ಪಾರಂಪರಿಕ ತಾಣಗಳ ರಕ್ಷಣೆ, ನಮ್ಮ ಹೊಣೆ ತಾಪಂ ಇಓ ಲಕ್ಷ್ಮೀದೇವಿ ಹೇಳಿಕೆ

ಗಂಗಾವತಿ : ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಪುರಾತತ್ವ ಸರ್ವೇಕ್ಷಣ ಇಲಾಖೆ, ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯಗಳು ಹಾಗೂ ಪರಂಪರಾ ಇಲಾಖೆ ಮೈಸೂರು, ಜಿಲ್ಲಾಡಳಿತ ಕೊಪ್ಪಳ, ತಾಲೂಕು ಆಡಳಿತ, ತಾ.ಪಂ. ಗಂಗಾವತಿ ಹಾಗೂ ಗ್ರಾಪಂ ಚಿಕ್ಕಬೆಣಕಲ್ ಸಹಯೋಗದಲ್ಲಿ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಸ್ವಚ್ಛತಾ ಅಭಿಯಾನ ಅಂಗವಾಗಿ ಗ್ರಾಮದ ದುರ್ಗಾದೇವಿ ದೇವಸ್ಥಾನ ಹತ್ತಿರದ ಐತಿಹಾಸಿಕ ಹಿನ್ನೆಲೆಯುಳ್ಳ ಉಗ್ರನರಸಿಂಹ ಸ್ಮಾರಕದಲ್ಲಿ ಬುಧವಾರ ಶ್ರಮದಾನ ಮಾಡಲಾಯಿತು.

ಮುಳ್ಳುಕಂಟಿ, ಕಸದಿಂದ ಕೂಡಿದ್ದ ಉಗ್ರ ನರಸಿಂಹ ಸ್ಮಾರಕ ಬಳಿ ಬೆಳಗ್ಗೆ 8 ಗಂಟೆಯಿಂದ 12 ಗಂಟೆವರೆಗೆ 80 ಕ್ಕೂ ಹೆಚ್ಚು ಜನರಿಂದ ಸ್ವಚ್ಛತಾ ಕಾರ್ಯ ನಡೆಯಿತು.

ಸ್ಮಾರಕ, ಕೋಟೆ, ದೇವಾಲಯ ಮೇಲೆ ಬೆಳೆದಿದ್ದ ಗಿಡ, ಕಸ ವಿಲೇವಾರಿ ಮಾಡಲಾಯಿತು. ಜೊತೆಗೆ ದೇವಾಲಯ ಗೋಡೆಗಳಲ್ಲಿ ಆವರಿಸಿದ್ದ ಧೂಳು ಸ್ವಚ್ಛಮಾಡಲಾಯಿತು

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಐತಿಹಾಸಿಕ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರೂ ದೇಗುಲಗಳ ರಕ್ಷಣೆಗೆ ಮುಂದಾಗಬೇಕು. ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಪಾರಂಪರಿಕ ತಾಣಗಳ ರಕ್ಷಣೆಗೆ ಯುವ ಪೀಳಿಗೆ ಬದ್ಧರಾಗಬೇಕು. ಜೊತೆಗೆ ವಿದ್ಯಾರ್ಥಿಗಳು ಐತಿಹಾಸಿಕ ತಾಣಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಸ್ವಚ್ಚತಾ ಕಾರ್ಯಕ್ಕೆ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಡಿಪಿಓ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೈಯಲ್ಲಿ ಕೊಡಲಿ, ಕುಡುಗೋಲು, ಸಲಾಕೆ, ಪೊರಕೆ ಹಿಡಿದು ಸ್ವಚ್ಚತಾ ಕಾರ್ಯ ನಡೆಸಿದರು.

ತಹಸೀಲ್ದಾರರಾದ ವಿಶ್ವನಾಥ ಮುರಡಿ, ಸಿಡಿಪಿಓ ಪ್ರವೀಣ್ ಕುಮಾರ್ ಹೇರೂರು, ಉಪ ತಹಸೀಲ್ದಾರರಾದ ಅಬ್ದುಲ್ ರಹೆಮಾನ್, ಕಂದಾಯ ನಿರೀಕ್ಷಕರಾದ ಮಹೇಶ ದಲಾಲ್, ಗ್ರಾಪಂ ಪಿಡಿಓ ಇಂದಿರಾ, ಕಾರ್ಯದರ್ಶಿಗಳಾದ ಶ್ರೀ ಭೀಮಣ್ಣ, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸದಸ್ಯರಾದ ಸಂತೋಷ ಕುಮಾರ್ , ಗ್ರಾಮದ ಹಿರಿಯರಾದ ರಂಗನಗೌಡ ಪೊಲೀಸ್ ಪಾಟೀಲ್, ಹನುಮಂತಪ್ಪ ತಳವಾರ, ಮುಕ್ಕುಂಪಿ ಪ್ರೌಢಶಾಲೆ ಮುಖ್ಯಶಿಕ್ಷಕರಾದ ಶಿವಶರಣಪ್ಪ ಗಿರೇಗೌಡರ್, ಸಹ ಶಿಕ್ಷಕರು, ಶಾಲೆ ಮಕ್ಕಳು, ಎಸ್ಡಿಎಂಸಿ ಅಧ್ಯಕ್ಷರು, ಗ್ರಾಪಂ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಮದ ಮುಖಂಡರು ಇದ್ದರು.

About Mallikarjun

Check Also

ಕಿಡಿಗೇಡಿಗಳಿಂದ ಜೋಳದ ಕಡ್ಡಿಗೆ ಬೆಂಕಿ ರೈತರಿಗೆ ನಷ್ಟ

ವರದಿ : ಬಂಗಾರಪ್ಪ ಸಿ .ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕುಳ್ಳೆಗೌಡ ಮಾದಪ್ಪ ರವರ ಮಗ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.