Breaking News

ಸುವರ್ಣ ಸಂಭ್ರಮದ ರಥಯಾತ್ರೆ: ಅದ್ದೂರಿ ಸ್ವಾಗತ

Golden Jubilee Rath Yatra: A grand welcome

ಕನಕಗಿರಿ:ಕರ್ನಾಟಕ ಸಂಭ್ರಮ- 50ರ ರಥಯಾತ್ರೆಯು ಡಿ. 4, 5 ಹಾಗೂ 6ರಂದು ಪಟ್ಟಣ ಸೇರಿದಂತೆ
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿದ್ದು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಅದ್ದೂರಿಯಾಗಿ ಸ್ವಾಗತಿಸಿ ರಥ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಗ್ರೇಡ್-2 ತಹಶೀಲ್ದಾರ ವಿರೂಪಾಕ್ಷಪ್ಪ ಹೊರಪೇಟೆ ಹೇಳಿದರು.
ಇಲ್ಲಿನ ಯಾತ್ರಿ ನಿವಾಸದಲ್ಲಿ ರಥಯಾತ್ರ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ತಾವರಗೇರಾ ಗ್ರಾಮದಿಂದ ತಾಲ್ಲೂಕಿನ ಹುಲಿಹೈದರ ಗ್ರಾಮಕ್ಕೆ ಡಿ. 4ರಂದು ಆಗಮಿಸುವ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಬೇಕು, ಹಾಗೆಯೆ ಪಟ್ಟಣದಲ್ಲಿಯೂ ಸ್ಥಳೀಯರು ಹಾಗೂ ಕನ್ನಡಪರ ಸಂಘಟನೆಗಳು ಹಾಜರಿರಬೇಕೆಂದು ತಿಳಿಸಿದರು. ಡಿ.5ರಂದು ಬೆಳಿಗ್ಗೆ 9 ಗಂಟೆಗೆ ಯಾತ್ರೆಗೆ ಚಾಲನೆ ನೀಡಲಾಗುವುದು,
ಕಲ್ಮಠದಿಂದ ವಾಲ್ಮೀಕಿ ವೃತ್ತದ ವರೆಗೆ ರಥಯಾತ್ರೆ ಸಂಚರಿಸಲಿದೆ, ಮುಸಲಾಪುರ ಗ್ರಾಮಕ್ಕೂ ಹೋಗಲಿದೆ, ಡಿ. 6ರಂದು ತಾಲ್ಲೂಕಿನ ನವಲಿ ಮಾರ್ಗವಾಗಿ ಕಾರಟಗಿಗೆ ತೆರಳುತ್ತದೆ ಎಂದು ಅವರು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಚಂದ್ರಶೇಖರ ಕಂದಕೂರು ಮಾತನಾಡಿ ತಾಲ್ಲೂಕಿನಲ್ಲಿ ಎರಡು ದಿನಗಳ ಕಾಲ ರಥಯಾತ್ರೆ ಸಂಚರಿಸಲಿದ್ದು ಆಯಾ ಗ್ರಾಮದಲ್ಲಿ ವಿಜೃಂಭಣೆಯಿಂದ ಸ್ವಾಗತಿಸಲು ಸೂಚಿಸಲಾಗಿದೆ, ಸಾರ್ವಜನಿಕರು ಹಾಗೂ ಸ್ಥಳೀಯ ಕಲಾವಿದರು, ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಕಲಾವಿದ ವಿರುಪಣ್ಣ ಕಲ್ಲೂರು,
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ,
ಗೌರವ ಕಾರ್ಯದರ್ಶಿ ಕನಕರೆಡ್ಡಿ ಕೆರಿ, ಪಟ್ಟಣ ಪಂಚಾಯಿತಿ ಸದಸ್ಯ ಅನಿಲಕುಮಾರ ಬಿಜ್ಜಳ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಕೆ. ವಿರೂಪಾಕ್ಷಿ , ಕಟಗಿ ಶರಣಪ್ಪ ಸಜ್ಜನ್ ಮಾತನಾಡಿ ರಥಯಾತ್ರೆಯ ಮೆರವಣಿಗೆ ಅದ್ದೂರಿಯಾಗಬೇಕು, ಸ್ಥಳೀಯ ವಿವಿಧ ಶಾಲಾ-ಕಾಲೇಜುಗಳ ಸ್ಕೌಟ್ಸ್ ಹಾಗೂ ಗೈಡ್ ಘಟಕದವರು ಹಾಗೂ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ತಾಷ ಮೇಳ ಭಾಗವಹಿಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು. ರಾಜಬೀದಿಯನ್ನು ಸ್ವಚ್ಛಗೊಳಿಸಿ ನೀರು ಸಿಂಪರಣೆ ಮಾಡಬೇಕು, ತೇರು ಬೀದಿಯ ಎರಡು ಕಡೆ
ತಳಿರು, ತೋರಣ, ಕನ್ನಡದ ಧ್ವಜಗಳನ್ನು ಕಟ್ಟಿ ಸ್ವಾಗತಿಸಬೇಕೆಂದು
ಸಲಹೆ‌ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಎಎಸ್ ಜಾಫರುದ್ದೀನ್, ಶಿಕ್ಷಣ ಸಂಯೋಜಕ ಆಂಜನೇಯ, ಗ್ರಾಪಂ ಉಪಾಧ್ಯಕ್ಷ ನಾಗರಾಜ ತಳವಾರ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹನುಮಂತ ಕಲ್ಲೂರು, ಪ್ರಮುಖರಾದ ಸಿದ್ದನಗೌಡ ಪಾಟೀಲ, ಜಡಿಯಪ್ಪ ಭೋವಿ ಕನ್ನಡಪರ ಸಂಘಟನೆಗಳ ಪ್ರಮುಖರಾದ ಶರಣಪ್ಪ ಬಜಾರದ, ವೀರಭದ್ರಪ್ಪ ಮೂಲಿಮನಿ, ಕಸಾಪ ಪದಾಧಿಕಾರಿಗಳಾದ ವಿಶ್ವನಾಥ ಅಕ್ಕನವರ, ಅಂಬರೇಶ ಪಟ್ಟಣಶೆಟ್ಟಿ, ಚಾಂದಪಾಷ, ರವಿ ಬಲಿಜ, ಇದ್ದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.