The State Farmers’ Association held a massive protest and an indefinite satyagraha against the Chescom department.
ವರದಿ : ಬಂಗಾರಪ್ಪ ಸಿ
ಹನೂರು :ವಿಧಾನ ಸಭಾ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿಯು ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡದ ಚೆಸ್ಕಾಂ ಇಲಾಖೆಯ ವಿರುದ್ದು ಇಂದು ಹನೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು .
ಚಳುವಳಿಯು ಪಟ್ಟಣದ ಹೊರವಲಯ ಎಲ್ಲೆಮಾಳ ಸರ್ಕಲ್ ನಿಂದ ಪ್ರಾರಂಬಿಸಿ ರೈತರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಚೆಸ್ಕಂ ಕಚೇರಿಯ ಮುಂದೆ ಪೆಂಡಾಲ್ ಹಾಕಿ ಕುಳಿತುಕೊಂಡು ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಚಳುವಳಿ ಸತ್ಯಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಮಯದಲ್ಲಿ ರೈತ ಮುಖಂಡರು ಮಾತನಾಡಿ ರಾಜ್ಯ ಸರ್ಕಾರಗಳು ರೈತರಿಗೆ ಹಲವಾರು ವಿಷಯಗಳಲ್ಲಿ ಅನ್ಯಾಯ ಮಾಡುತ್ತೇವೆ. ಅದರಲ್ಲಿ ಮುಖ್ಯವಾಗಿ ರೈತರಿಗೆ ವಿದ್ಯುತ್ ಸರಬರಾಜು ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಹನೂರು ತಾಲೂಕು ಅತಿ ಹೆಚ್ಚು ಕಾಡಂಚಿನ ಭಾಗ ಹೊಂದಿದ್ದು, ರಾತ್ರಿ ವೇಳೆ ಯಾವ ಪ್ರಾಣಿಗಳು ಯಾವ ಸಮಯದಲ್ಲಿ ರೈತರ ಮೇಲೆ ದಾಳಿ ಮಾಡುತ್ತದೆ ಎಂಬ ಭಯದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಉಂಟಾಗಿದೆ. ಯಾವುದೇ ನದಿ ಮೂಲಗಳಿಲ್ಲದ ಇಲ್ಲಿನ ರೈತರು ತಾವು ಪಸಲು ಬೆಳೆಯಲು ತೆರೆದ ಬಾವಿಗಳು ಹಾಗೂ ಕೊಳವೆ ಬಾವಿಗಳನ್ನು ಅವಲಂಬಿಸಿದ್ದಾರೆ ,ರೈತರು ಹೊಲಗಳಿಗೆ ನೀರು ಎತ್ತಲು ವಿದ್ಯುತ್ ಮೋಟಾರ್ ಗಳನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ ಚೆಸ್ಕಾಂ ಇಲಾಖೆ ಸರಿಯಾದ ಸಮಯಕ್ಕೆ ವಿದ್ಯುತ್ ಸರಬರಾಜುನ್ನು ಮಾಡದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಆದ್ದರಿಂದ ಸರ್ಕಾರ ಇನ್ನು ಮುಂದಾದರು ಹಗಲು ವೇಳೆ 7 ಗಂಟೆ 3 ಪ್ರೆಸ್ ವಿದ್ಯುತ್ ಸರಬರಾಜು ಮಾಡಬೇಕು ಎಂದು ಕರ್ನಾಟಕ ರೈತ ಸಂಘ ಕೊಳ್ಳೆಗಾಲ ತಾಲೂಕು ಸಮಿತಿಯ ಅಧ್ಯಕ್ಷ ಗೌಡೇ ಗೌಡ ತಿಳಿಸಿದರು.
ರೈತ ಸಂಘದ ಮುಖಂಡರಾದ ಗೌಡೇಗೌಡ ಮಾತನಾಡಿ ನಮ್ಮ ಭಾಗದಲ್ಲಿ ರೈತರಿಗೆ ಸಮರ್ಪಕ ರೀತಿಯಲ್ಲಿ ವಿದ್ಯುತ್ ನೀಡುತ್ತಿಲ್ಲ ಇವತ್ತಿನ ಚಳುವಳಿಯನ್ನು ನಾಳೆಯವರಿಗೂ ಮುಂದೂಡಲಾಗಿದೆ ನಾಳೆಯು ಕ್ಷೇತ್ರದ ಶಾಸಕರು ಆಗಮಿಸುತ್ತಾರೆ ಅವರಿಗೆ ನಮ್ಮ ಕುಂದು ಕೊರತೆಗಳನ್ನು ತಿಳಿಸಿ ನಂತರ ಮೆಲಾಧಿಕಾರಿಗಳಿಂದ ನಮಗೆ ಸೂಕ್ತ ಭರವಸೆ ನೀಡಿದರೆ ಪ್ರತಿಭಟನೆ ಕೈಬಿಡಲಾಗುವುದು ಎಂದರು.
ಕಾರ್ಯನಿರ್ವಾಹಕ ಇಂಜನೀಯರ್ ಲಿಂಗರಾಜು ಮಾತನಾಡಿ ರೈತರಿಗೆ ಅನ್ನ ಹಾಕುವಷ್ಟು ನಾವು ಶಸಕ್ತರಾಗಿಲ್ಲ ನಮ್ಮ ತಂದೆಯು ರೈತರು ಹಾಗಾಗಿ ನಾವು ಪ್ರತಿಭಟನೆ ನಿರತರಿಗೆ ಕುಡಿಯುವ ನೀರನ್ನು ನೀಡುತ್ತೆವೆ ಅನ್ಯತ ಭಾವಿಸಬೇಡಿ ನಿಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದಾಗ ಅವರು ರೈತರ ಮನವಿ ಸ್ವೀಕರಿಸಿ ನಂತರ ನಮಗೆ ತಲುಪಿಸಿ ಅದರ ಅನುಗುಣವಾಗಿ ಈ ಭಾಗದಲ್ಲಿ ಕಾಡಂಚಿನ ಭಾಗವು ಹೆಚ್ಚಿರುವ ಕಾರಣ ಪರಿಶೀಲನೆ ಮಾಡಿ ನಿಮಗೆ ವಿದ್ಯುತ್ ನೀಡಲು ಪ್ರಯತ್ನಿಸಲಾಗುವುದು ,ಅದ್ದರಿಂದ ತಕ್ಷಣ ನಿಮ್ಮ ಪ್ರತಿಭಟನೆ ನಿಲ್ಲಿಸಲು ಮನವಿ ಮಾಡಿದರು .
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷರು ಶೈಲೇಂದ್ರ .ರೈತ ಮುಖಂಡರುಗಳಾದ ಗೌಡೇಗಡ .ರವಿನಾಯ್ಡು , ಕೊಳ್ಳೆಗಾಲ ತಾಲ್ಲೋಕು ಗೌರವಾಧ್ಯಕ್ಷ ಮಾದೇವ,ಹನೂರು ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್ ಕಾರ್ಯದರ್ಶಿ ಗೋಪಾಲ ,ಗೌ ಅಧ್ಯಕ್ಷ ರಾಜಣ್ಣ , ಉಪಾಧ್ಯಕ್ಷ ಪಳನಿಸ್ವಾಮಿ, ಸಂಘಟನ ಕಾರ್ಯದರ್ಶಿ ಬಸವರಾಜು.ಮಹಿಳಾಧ್ಯಕ್ಷರು ರಾಜಮ್ಮಣಿ.ಕಾರ್ಯದರ್ಶಿ ಪೊಂಗುಡಿ ,ಕನಕಮ್ಮ , ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕು ಘಟಕದ ಎಲ್ಲಾ ಪಧಾದಿಕಾರಿಗಳು ಹಾಗೂ ಸದಸ್ಯರುಗಳು ಸೇರಿದಂತೆ ಅಧಿಕಾರಿಗಳು ,ಅರಕ್ಷಕರು ಹಾಜರಿದ್ದರು.