Beneficiary Interaction Program
ಬಡವರಿಗೆ ಕೈಹಿಡಿದ ಗ್ಯಾರಂಟಿ ಯೋಜನೆಗಳು ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿ ತಾಲುಕು ಅಧ್ಯಕ್ಷರಾದ ಡಾ.ಕೆ.ವೆಂಕಟೇಶ ಬಾಬು ಹೇಳಿಕೆ

ಗಂಗಾವತಿ : ಬಡವರ ಕುಟುಂಬ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ ಎಂದು ಕುಟುಂಬಗಳು ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿ ತಾಲುಕು ಅಧ್ಯಕ್ಷರಾದ ಡಾ.ಕೆ.ವೆಂಕಟೇಶ ಬಾಬು ಅವರು ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ಆರ್ಹಾಳ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿ.ಪಂ. ಕೊಪ್ಪಳ, ತಾ.ಪಂ. ಗಂಗಾವತಿ & ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿಯಿಂದ ಗ್ಯಾರಂಟಿ ಯೋಜನೆಗಳ ನಡೆ, ಗ್ರಾಮ ಪಂಚಾಯಿತಿಗಳ ಕಡೆ ಅಭಿಯಾನದಡಿ ಶುಕ್ರವಾರ ಆಯೋಜಿಸಿದ್ದ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ & ಅನ್ನಭಾಗ್ಯ ಯೋಜನೆಗಳಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಸರಕಾರ ಪಂಚ ಯೋಜನೆಗಳ ಸಹಾಯಧನವನ್ನು ಯಾವುದೇ ಮಧ್ಯವರ್ತಿ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಈ ಯೋಜನೆಗಳ ಹಣವು ಬಡ ಕುಟುಂಬಗಳ ಮಕ್ಕಳ ಶಿಕ್ಷಣ, ಪುಸ್ತಕ ಖರೀದಿ, ಕುಟಂಬ ನಿರ್ವಹಣೆಗೆ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಗ್ರಾಮದಲ್ಲಿ 1100 ಪಡಿತರ ಚೀಟಿಗಳು ಇದ್ದು, ನ್ಯಾಯಬೆಲೆ ಅಂಗಡಿಯವರು 4 ದಿನ ಮಾತ್ರ ಪಡಿತರ ವಿತರಿಸುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಕನಿಷ್ಠ 10 ದಿನ ವಿತರಿಸಿದರೆ ಗ್ರಾಮಸ್ಥರಿಗೆ ಅನುಕೂಲ ಆಗುತ್ತದೆ. ಜೊತೆಗೆ ಗೃಹ ಜ್ಯೋತಿಯಿಂದ ಕರೆಂಟ್ ಬಳಕೆ ಬಿಲ್ ಬರುವುದಿಲ್ಲ ಆದರೆ, ಪ್ರತಿ ತಿಂಗಳು ಮೀಟರ್ ಚಾರ್ಜ್ ತೆಗೆದುಕೊಳ್ಳುತ್ತಿದ್ದು, ಇದನ್ನು ನಿಲ್ಲಿಸುವಂತೆ ಕೋರಿದರು.
ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿ ತಾಲುಕು ಅಧ್ಯಕ್ಷರಾದ ಡಾ.ಕೆ.ವೆಂಕಟೇಶ ಪ್ರತಿಕ್ರಿಯಿಸಿ, ನ್ಯಾಯಬೆಲೆ ಅಂಗಡಿ ಅವರೊಂದಿಗೆ ದೂರವಾಣಿಯಲ್ಲಿ ಮಾತಮಾಡಿ ಕನಿಷ್ಠ 10 ದಿನ ವಿತರಿಸುವಂತೆ ಸೂಚಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಮಂಜುನಾಥ, ಮುಸ್ತಾಕ,
ತಾಪಂ ವಿಷಯ ನಿರ್ವಾಹಕರಾದ ರವೀಂದ್ರ ಕುಲಕರ್ಣಿ, ಗ್ರಾಪಂ ಕಾರ್ಯದರ್ಶಿ ಈಶಪ್ಪ, ಜೆಸ್ಕಾಂ ವೆಂಕಟಗಿರಿ ಶಾಖಾಧಿಕಾರಿಗಳಾದ ಪ್ರದೀಪ್, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸಿಬ್ಬಂದಿಗಳಾದ ರುದ್ರಸ್ವಾಮಿ, ರಾಜಾಭಕ್ಷಿ, ಮಹ್ಮದ್, ಸುಜಾತ,ಅಂಗನವಾಡಿ ಕಾರ್ಯಕರ್ತೆಯರು ಇದ್ದರು.