Distribution of free sports uniforms in high school section of Hiresindogi Karnataka Public School
ಕೊಪ್ಪಳ : ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು ಪ್ರೌಢಶಾಲೆಯ ದೈಹಿಕ ಶಿಕ್ಷಕರು ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾದ ರೇಣುಕಾ ಮಣ್ಣೂರ ಅವರು ತಮ್ಮ ಸ್ವಂತ ಖರ್ಚಿನಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ಖರೀದಿಸಿ ವಿತರಿಸಿದ್ದಾರೆ.
ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ದೈಹಿಕ ಶಿಕ್ಷಕರಾದ ರೇಣುಕಾ ಮಣ್ಣೂರ ಅವರು ರಾಷ್ಟ್ರಮಟ್ಟದ ಕ್ರೀಡಾಪಟುಗಳು. ಇವರ ತಂದೆಯೂ ಸಹಿತ ದೈಹಿಕ ಶಿಕ್ಷಕರಾಗಿದ್ದರು ಮತ್ತು ನನ್ನ ಪ್ರೌಢಶಾಲಾ ಗುರುಗಳಾಗಿದ್ದರು. ರೇಣುಕಾ ಮಣ್ಣೂರ ಅವರ ಸಹೋದರರು, ಸಹೋದರಿಯರು ಮತ್ತು ಅವರ ಪತಿಯಾದ ಯಲ್ಲಪ್ಪನವರೂ ಸಹ ದೈಹಿಕ ಶಿಕ್ಷಕರಾಗಿದ್ದಾರೆ. ಇವರು ಇಂದು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ವಿಸ್ತರಿಸಿರುವುದು ಸಂತಸದ ಸಂಗತಿ. ಇವರು ಈ ಪರಂಪರೆಯನ್ನು ಪ್ರತಿವರ್ಷ ನಿರಂತರವಾಗಿ ಮುಂದುವರಿಸಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯರಾದ ದೇವಪ್ಪ ಬಚ್ಚಕ್ಕನವರ ಮಾತನಾಡುತ್ತಾ, ರೇಣುಕಾ ಮಣ್ಣೂರ ಅವರು ಒಬ್ಬ ದಾನಿಗಳು, ಸಹೃದಯರು, ಕ್ರೀಡಾಪ್ರೇಮಿಗಳು, ರಾಷ್ಟ್ರಮಟ್ಟದ ಕ್ರೀಡಾಪಟುಗಳೂ ಹೌದು. ಇವರು ಇಂದು ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ಉಚಿತವಾಗಿ ವಿತರಿಸಿರುವುದರಿಂದ ಜಿಲ್ಲೆಯ ದೈಹಿಕ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದರು.
ಶಿಕ್ಷಕರಾದ ಶೋಭಾ ವೇದಪಾಠಕ, ಸುಜಾತ ಅಣ್ಣಿಗೇರಿ, ಕಸ್ತೂರಿ ಕಡೇಮನಿ, ಪವಿತ್ರ ವೈದ್ಯ, ಚಾರುಲತಾ ಹೊನಕಳಸೆ, ರೇಣುಕಾ ಮಣ್ಣೂರು, ಭಾಗೀರಥಿ ಯಲ್ಲನಗೌಡರ, ಶಿಲ್ಪಾ ಚಿತ್ರಗಾರ, ಗವಿಸಿದ್ದಪ್ಪ ಜಕ್ಕಲಿ, ಕರಿಯಮ್ಮ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಫೋಟೋ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯ ವಿಭಾಗದಲ್ಲಿ ಉಚಿತವಾಗಿ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಲಾಯಿತು.