Breaking News

ಅದ್ದೂರಿಯಾಗಿ ಜರುಗಿದವಿಜಯಮಹಾಂತೇಶ್ವರ ಜಾತ್ರಾಮಹೋತ್ಸವ,,,

Vijaya Mahantheshwar Jatramahotsava was held in grand style.

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ತಾಲೂಕಿನ ಕುದರಿಮೋತಿ ಗ್ರಾಮದ ಶ್ರೀ ಜಗದ್ಗುರು ಸಂಸ್ಥಾನ ಮೈಸೂರುಮಠದ ವಿಜಯಮಹಾಂತೇಶ್ವರನ ಜಾತ್ರಾ ಮಹೋತ್ಸವವು ಬುಧವಾರ ಸಾಯಂಕಾಲ 5.30ಗಂಟೆಗೆ ನೆರೆದ ಸಹಸ್ರಾರು ಭಕ್ತಾಧಿಗಳ ಜಯ ಘೋಷದೊಂದಿಗೆ ಅದ್ದೂರಿಯಾಗಿ ಜರುಗಿತು.

ರಥೋತ್ಸವಕ್ಕೆ ಗ್ರಾಮದ ಸುತ್ತಮುತ್ತಲಿನ ಸಹಸ್ರಾರು ಭಕ್ತಾಧಿಗಳು ಆಗಮಿಸಿ, ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು.

ಈ ಜಾತ್ರೋತ್ಸವದ ಸಾನಿಧ್ಯವನ್ನು ಶ್ರೀಮಠದ ವಿಜಯಮಹಾಂತ ಸ್ವಾಮೀಜಿಗಳು ವಹಿಸಿ ಆಶಿರ್ವಚನ ನೀಡಿ ಮಾತನಾಡಿ ಜಾತ್ರೆ ಉತ್ಸವಗಳೆಂದರೇ ಸರ್ವ ಸಮಾಜವನ್ನು ಒಂದುಗೂಡಿಸಿ ಭಾವೈಕ್ಯತೆಯಿಂದ ರಥೋತ್ಸವ ನೆರವೇರಿಸಿ ಬಂಧು, ಭಾಂದವರೊಂದಿಗೆ ಸಂಭ್ರಮ ಹಂಚಿಕೊಂಡು ಎಲ್ಲರೂ ಒಂದಾಗಿ ಬಾಳಲು, ಹಿಂದೆ ಹಿರಿಯರು ಹಾಕಿಕೊಟ್ಟ ಮಾರ್ಗವೇ ಈ ಜಾತ್ರೆ ಉತ್ಸವಗಳಾಗಿವೆ ಎಂದರು.

ಯಾವ ಧರ್ಮಗಳಲ್ಲೂ ಜಾತಿ, ಮತ, ಪಂಥಗಳ ಬಗ್ಗೆ ಬರೆದಿಲ್ಲಾ ಅವರವರ ಧರ್ಮ ಆಚರಣೆಗಳಂತೆ ಅವರು ಜೀವನ ಸಾಗಿಸುತ್ತಾರೆ. ಎಲ್ಲಾ ಧರ್ಮಗಳಲ್ಲೂ ಎಲ್ಲರಲ್ಲೂ ಸಮಾನತೆ ಕಾಣಬೇಕು ಎಂದಿದೆ ಅದರಂತೆ ನಮ್ಮ ಗ್ರಾಮವು ಕೂಡಾ ಹೊರತೆನಲ್ಲಾ, ಅದರಂತೆ ನಮ್ಮ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮದ ಭಕ್ತಾಧಿಗಳ ಶ್ರದ್ದಾ ಭಕ್ತಿಯ ಪೀಠವಾಗಿ ಸುಮಾರು 11ನೂರು ವರ್ಷಗಳ ಇತಿಹಾಸ ಹೊಂದಿದಮಠ ನಮ್ಮದು, ಇಲ್ಲಿನ ಎಲ್ಲಾ ಭಕ್ತರ ಮನೋಮಂದಿರದಲ್ಲಿ ವಿಜಯಮಹಾಂತೇಶ್ವರ ಇದ್ದು ಆತನ ಪ್ರೇರಣೆಯಿಂದ ನಮ್ಮ ಮಠ ಇಲ್ಲಿಯವರೆಗೆ ಧಾರ್ಮಿಕ ಶ್ರದ್ದಾ ಭಕ್ತಿಯ ಪೀಠವಾಗಿದೆ ಎಂದರು.

ಇಲ್ಲಿ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮ ಹಾಗೂ ಅಯ್ಯಾಚಾರ, ಸಾಮೂಹಿಕ ವಿವಾಹ ಹಾಗೂ ಪ್ರಸಾದ ವಿತರಣೆ ಕಾರ್ಯದಲ್ಲಿ ಇಲ್ಲಿನ ಪ್ರತಿಯೊಬ್ಬ ಭಕ್ತರು ಬೆವರುಹರಿಸಿ ದುಡಿಯುವ ಸಾಕಷ್ಟು ಕಾಣದ ಕೈಗಳಿವೆ ಅವರೆಲ್ಲರಿಗೂ ಆ ವಿಜಯ ಮಹಾಂತೇಶನು ಸನ್ಮಂಗಲ ಮಾಡಲಿ ಎಂದು ಆಶಿರ್ವದಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂ, ಉಪಾಧ್ಯಕ್ಷೆ ಲಕ್ಷ್ಮೀ ದಾಸರ, ಗ್ರಾಪಂ ಅಭಿವೃದ್ದಿ ಅಧಿಕಾರಿ ಪರುಶುರಾಮ ನಾಯಕ, ಉಧ್ಯಮಿಗಳಾದ ಸತ್ಯನಾರಾಯಣರೆಡ್ಡಿ, ಮುಖಂಡರಾದ ಮಂಜುನಾಥ ಗಟ್ಟೆಪ್ಪನವರ್, ಅಮರೇಶ ತಲ್ಲೂರ, ಅಶೋಕ ಗಟ್ಟೆಪ್ಪನವರ್, ಬಸಪ್ಪ ದೊಡ್ಮನಿ, ಶಿವಶಂಕರ್ ದೇಸಾಯಿ, ವೀರಯ್ಯ ವಸ್ತ್ರದ, ಶರಣಯ್ಯ ಕರಡಿಮಠ, ಲಕ್ಷ್ಮೀದೇವಿ ದೊಡ್ಡಮನಿ, ಮಂಜುನಾಥ ಸಜ್ಜನ್, ಶ್ರೀ ಶೈಲ ಕೊಡದಾಳ, ಹನುಮವ್ವ ಹನ್ಮಟ್ಟಿ, ದಳಪತಿ ಹನುಮಗೌಡ ಪೊ.ಪಾಟೀಲ, ರವಿ ಗಟ್ಟಗಿ, ಅಮರೇಶ ತಲ್ಲೂರು, ಸುರೇಶ ಚೌಡ್ಕಿ, ಪಂಪಾಪತಿ ವಣಗೇರಿ, ಪ್ರಶಾಂತ ಅಬಕಾರಿ, ದ್ಯಾಮಣ್ಣ ಉಚ್ಚಲಕುಂಟಿ, ದುರಗಪ್ಪ ದೂಪಂ ಸೇರಿದಂತೆ ಇತರರು ಇದ್ದರು.

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *