Breaking News

ಪಬ್ಲಿಕ್ ಶಾಲೆಯಲ್ಲಿ ಮನಸುರೆಗೊಂಡ ಟ್ಯಾಲೆಂಟ್ ಫೆಸ್ಟ್ ವಸ್ತುಪ್ರದರ್ಶನ

Enthusiastic talent fest exhibition at a public school

ಬೆಂಗಳೂರು: ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿ ವರ್ಷವೂ ವಿಶೇಷ ಚಟುವಟಿಕೆಯನ್ನು ನೀಡಲಾಗುತ್ತದೆ, ಅದೇ ರೀತಿ ಈ ಭಾರಿಯೂ ಟ್ಯಾಲೆಂಟ್ ಫೆಸ್ಟ್ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಕ್ಕಳಲ್ಲಿ ಸುಪ್ತ ಪ್ರತಿಭೆಯನ್ನು ಗುರುತಿಸಲಾಗುತಿದೆ ಎಂದು ಸೇಂಟ್ ಲಾರ್ಡ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶ್ರೀಹರ್ಷ ತಿಳಿಸಿದರು.

ಬೆಂಗಳೂರಿನ ಮಾಗಡಿ ರಸ್ತೆಯ ಕೆಪಿ ಅಗ್ರಹಾರದಲ್ಲಿ ಕಲಾ ಮತ್ತು ವಿಜ್ಞಾನದ ವಸ್ತು ಪ್ರದರ್ಶನವನ್ನು ಶಾಲೆಯ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದ ಅವರು, ನಮ್ಮ ಶಾಲೆಯಲ್ಲಿ 500 ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ, ಪ್ರತಿ ವರ್ಷವು ಸಹಾ ಒಂದೊಂದು ಥೀಮ್ ಇಟ್ಟುಕೊಂಡು ಮಕ್ಕಳಲ್ಲಿ ಅಡಗಿರುವ ವಿನೂತನ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತದೆ. ಅದೇ ರೀತಿ ಈ ಭಾರಿ talent ಫೆಸ್ಟ್ ನಲ್ಲಿ ಕಲಾ, ವಿಜ್ಞಾನದ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸವನ್ನು ಮಾಡಲಾಯಿತು ಎಂದರು.

ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ತೋರಿಸಿಕೊಳ್ಳಲು ಒಂದು ವೇದಿಕೆ ಜೊತೆಗೆ, ಅವಕಾಶವಾಗಿದೆ, ಅದನ್ನು ಮಕ್ಕಳು ತೋರಿಸಿದ್ದಾರೆ, ಮಕ್ಕಳು ತಯಾರಿಸಿರುವ ವಿಜ್ಞಾನ, ಕಲಾ, ಪ್ರಕಾರಗಳನ್ನು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದೆ. ಪುಟಾಣಿ ಮಕ್ಕಳು ಯಾರಿಗೂ ಕಮ್ಮಿ ಇಲ್ಲದಂತೆ ತಮ್ಮ ಕೈಚಳಕದಿಂದ ಮಾಡಿ ತೋರಿಸಿದ್ದಾರೆ ಎಂದು ಮಕ್ಕಳ ಪ್ರತಿಭೆಯನ್ನು ಕೊಂಡಾಡಿದರು. ಮಕ್ಕಳಿಗೆ ಭವಿಷ್ಯದಲ್ಲಿ ವಿಪುಲವಾದ ಅವಕಾಶಗಳು ಸಿಗಲಿವೆ ಎಂದು ಇದೇ ವೇಳೆ ತಿಳಿಸಿದರು.

ಶಾಲೆಯ ಕಾರ್ಯದರ್ಶಿ ಅಶ್ವಿನಿ ಶ್ರೀಹರ್ಷ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳು ಇಷ್ಟು ದೊಡ್ಡ ಮಟ್ಟದ ಪ್ರತಿಭೆಯನ್ನು ಅಡಗಿಸಿ ಕೊಂಡಿದ್ದಾರೆ ಎಂದು ಗೊತ್ತಿರಲಿಲ್ಲ, ಈಗ ತಿಳಿಯಿತು. ವಸ್ತುಪ್ರದರ್ಶನದಲ್ಲಿ ಮಕ್ಕಳು ರೀಯಲ್ ಆಗಿ ಮನುಷ್ಯನ ದೇಶದ ಭಾಗಗಳನ್ನು ತೋರಿಸಿದ್ದಾರೆ, ಅದರ ಕಾರ್ಯ ಚಟುವಟಿಕೆ ಬಗ್ಗೆ ಮಕ್ಕಳೇ ವಿವರವಾಗಿ ವಿವರಿಸಿದರು. ಈ ಭಾರಿ ವಿಶೇಷವಾಗಿ ಆಕಾಶಕಾಯಗಳ ಬಗ್ಗೆ ಗ್ಲೋಬ್ ಸೃಷ್ಟಿ ಮಾಡಿ ಪ್ಲಾನಟೇರಿಯಂ ತೋರಿಸುವ ಕೆಲಸ ಮಾಡಿದರು. ಈ ಭಾರಿಯ ವಿಶೇಷ ಚಟುವಟಿಕೆಯಾಗಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಶೋಭಾರಾಣಿ ಮಾತನಾಡಿ, ಮಕ್ಕಳು ಕಡಿಮೆ ಅವಧಿಯಲ್ಲಿ ಹೇಗೆಲ್ಲ ವಸ್ತುಗಳನ್ನು ತಯಾರಿ ಮಾಡುತ್ತಾರೆ, ಅವರ ಪ್ರತಿಭೆಗಳು ಹೇಗೆಲ್ಲ ಇವೆ ಎಂಬುದನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ, ಮಕ್ಕಳಿಗೆ ಎಲ್ಲಾ ತರಹದ ಚಟುವಟಿಕೆ ಮಾಡಲು ಸಿದ್ದರಿದ್ದರು, ಆದರೆ ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವ ದೃಷ್ಟಿಯಿಂದ ಒಬ್ಬರಿಗೆ ಒಂದೊಂದು ಆಸಕ್ತಿಗೆ ಅನುಗುಣವಾಗಿ ಕೊಡಲಾಗಿದ್ದು, ಅವುಗಳನ್ನು ಶ್ರದ್ದೆಯಿಂದ ಮಾಡಿದ್ದಾರೆ. ವಿಜ್ಞಾನ, ಭಾಷೆ, ದೇಹದಲ್ಲಿ ಅಭಿನಯ, ವಾಕ್ ಚಾತುರ್ಯ ಸೇರಿದಂತೆ ಅನೇಕ ವಿಚಾರಗಳನ್ನು ಮಕ್ಕಳು ಕಲಿಯುತ್ತಿದ್ದಾರೆ, ಅದಕ್ಕೆ ಶಿಕ್ಷಕರು ತರಬೇತಿ ನೀಡಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂದರು.

ಮನ ಸೂರೆಗೊಂಡ ವಸ್ತುಪ್ರದರ್ಶನದಲ್ಲಿ ಮಕ್ಕಳೇ ತಯಾರಿಸಿದ ವಸ್ತುಗಳು :

ಇನ್ನು ಶಾಲೆಯಲ್ಲಿ ಮೊದಲನೇ ತರಗತಿಯಿಂದ ಓದುತ್ತಿರುವ ಪುಟಾಣಿಗಳಿಂದ ಹಿಡಿದು ಪ್ರೌಡ ತರಗತಿಯ ಮಕ್ಕಳು ವಿಜ್ಞಾನ, ಕಲಾ, ತಂತ್ರಜ್ಞಾನ, ವೈಜ್ಞಾನಿಕ, ದೇವರು, ಪರಿಸರ, ವಿಜ್ಞಾನದ ಪ್ರಯೋಗಾಲಯ, ಆರೋಗ್ಯ, ವಿದ್ಯುತ್ ಉತ್ಪಾದನೆ, ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಮಕ್ಕಳೇ ವಸ್ತುಗಳನ್ನು ಬಳಸಿಕೊಂಡು ತಯಾರಿಸಿ ಮಾಡಿದ ವಸ್ತು ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.

ಶಾಲೆಯ ಮಕ್ಕಳಿಗೆ ಶಿಕ್ಷಕರು ವಿದ್ಯೆ ಜೊತೆಗೆ ಕಲೆ ಸಾಹಿತ್ಯ, ಆಟಾಟೋಪ, ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನೆ, ಕ್ರೀಡೆಗಳನ್ನು ಜೊತೆಜೊತೆಯಾಗಿ ಕಲಿಸುತ್ತಿರುವುದು ಮತ್ತೋಂದು ಹೆಮ್ಮೆಯ ಸಂಗತಿಯಾಗಿದೆ. ಶಾಲೆಯಲ್ಲಿ ನುರಿತ ಶಿಕ್ಷಕಿಯರು ಇದ್ದು, ಗುಣಮಟ್ಟದ ಶಿಕ್ಷಣ ಕೊಡುವ ಕಾಯಕವನ್ನು ಹಿಂದಿನಿಂದಲೂ ರೋಡಿಸಿಕೊಂಡು ಬಂದಿದ್ದಾರೆ.

ಮಕ್ಕಳ ತಯಾರಿಸಿದ ವಸ್ತುಪ್ರದರ್ಶನಕ್ಕೆ ಪೋಷಕರ ಲಗ್ಗೆ:

ಇನ್ನು ಶಾಲೆಯಲ್ಲಿ ಮಕ್ಕಳು ಕೇವಲ 15 ದಿಂಗಳಿಂದೆ ಸಂಪೂರ್ಣವಾಗಿ ವಸ್ತುಪ್ರದರ್ಶನದ ವಿಚಾರಗಳನ್ನು ಕಲಿತು ಅತ್ಯುತ್ತಮವಾಗಿ ಸಾದರಪಡಿಸಿದ್ದು ಬಹಳ ವಿಶೇಷವಾಗಿದೆ ಎಂದರು. ವಸ್ತು ಪ್ರದರ್ಶನಕ್ಕೆ ಮಕ್ಕಳ ಪೋಷಕರು ಲಗ್ಗೆ ಇಟ್ಟು ತಮ್ಮ ಮಕ್ಕಳು ಹೇಗೆಲ್ಲ ಮಾಡಿದ್ದಾರೆ ಎಂಬುದನ್ನು ಕುತೂಹಲದಿಂದ ವೀಕ್ಷಣೆ ಮಾಡಿದರು. ಬಹಳ ಮುಖ್ಯವಾಗಿ planaterayam ಸೃಷ್ಟಿ ಮಾಡಿದ್ದು ವಸ್ತು ಪ್ರದರ್ಶನದಲ್ಲಿ ವಿಶೇಷವಾಗಿದೆ, ಗ್ಲೋಬ್ ನೋಡಲು ಪೋಷಕರು, ಮಕ್ಕಳು ಸರತಿ ಸಾಲಿನಲ್ಲಿ ನಿಂತು ವೀಕ್ಷಣೆ ಮಾಡಿದ್ದು ಮತ್ತೊಂದು ಹೆಗ್ಗಳಿಕೆ ವಿಚಾರವಾಗಿದೆ.

ಮುಂದಿನ ವರ್ಷದಲ್ಲಿ ಸಹ ಇದೇ ತರಹದ ಮಕ್ಕಳಿಗೆ ಅನುಕೂಲಕರವಾದ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ತಿಳಿಸಿದರು. ವರ್ಷದ ಉದ್ದಕ್ಕೊ ಸಹಾ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದು, ಹೊಸ ವರ್ಷ, ಸಂಕ್ರಾಂತಿ, ರಾಷ್ಟ್ರೀಯ ಹಬ್ಬಗಳು,ಭಾಷಣ ಸ್ಪರ್ಧೆ, ಕ್ವಿಜ್ ಸೇರಿದಂತೆ ಅನೇಕ ಚಟುವಟಿಕೆ ಮಾಡುವ ಮೂಲಕ ಮಕ್ಕಳ ಉನ್ನತಿಗೆ ಸಹಕರಿಸುವುದಾಗಿ ಎಂದು ತಿಳಿಸಿದರು.

ಇನ್ನು ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಪೋಷಕರು, ಮಕ್ಕಳು ಭಾಗಹಿಸಿ ಯಶಸ್ವಿಗೊಳಿಸಿದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.