Breaking News

ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉದ್ಯೋಗ ಮೇಳ ಉದ್ಘಾಟನೆ: ಹತ್ತು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ

Inauguration of Job Fair at Presidency College: Aim to provide employment to 10,000 people

ಬೆಂಗಳೂರು; ಶಿಕ್ಷಣ ಮತ್ತು ಸಬಲೀಕರಣದ ದಾರಿದೀಪವಾದ ಅಸೆಟ್‌ ಸೊಸೈಟಿ, ಪ್ರತಿಭಾವಂತರಿಗೆ ಮಿತಿಯಿಲ್ಲದ ಅವಕಾಶಗಳನ್ನು ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ನಗರದ ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಲಿವೇಟ್ 2ಕೆ24 ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಹತ್ತು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ಮತ್ತು ಒಂದು ಸಾವಿರಕ್ಕೂ ಮೀರಿದ ದೂರದೃಷ್ಟಿಯುಳ್ಳವರನ್ನು ಉದ್ಯಮ ಶೀಲರನ್ನಾಗಿ ಮಾಡಲು ಸೂಕ್ತ ತರಬೇತಿಗೆ ಅಸೆಟ್‌ ಸೊಸೈಟಿ ವ್ಯವಸ್ಥೆ ಮಾಡಿದೆ ಎಂದು ಅಸೆಟ್‌ ಸೊಸೈಟಿ ಕಾರ್ಯದರ್ಶಿ ಶೆಂಕರ್‌ ಕುಮಾರ್‌ ವಿ ತಿಳಿಸಿದ್ದಾರೆ.

ಪ್ರೆಸಿಡೆನ್ಸಿ ಕಾಲೇಜಿನ ಸಹಯೋಗದಲ್ಲಿ ಈ ಮೇಳ ಆಯೋಜಿಸಿದ್ದು, ಇದು ವೃತ್ತಿಪರ ಬೆಳವಣಿಗೆಯ ಸಾಮೂಹಿಕ ಅನ್ವೇಷಣೆಗೆ ಸಹಕಾರಿಯಾಗಿದೆ. ಈ ಮೇಳ ಕಂಪೆನಿಗಳ ಮಾನವ ಸಂಪನ್ಮೂಲ ಪ್ರತಿನಿಧಿಗಳು, ದೂರದೃಷ್ಟಿಯುಳ್ಳ ಉದ್ಯಮಿಗಳನ್ನು ಒಟ್ಟುಗೂಡಿಸಿದೆ ಎಂದರು.

ಎಲಿವೇಟ್‌ 2ಕೆ24 ಎಂಬುದು ಕೇವಲ ಉದ್ಯೋಗ ಮೇಳವಲ್ಲ. ಅವಕಾಶಗಳನ್ನು ಪೂರೈಸುವ ಕನಸುಗಳ ತಾಣ. ಕೌಶಲ್ಯದ ಉದ್ದೇಶವನ್ನು ಕಂಡುಕೊಳ್ಳುವ, ಭವಿಷ್ಯವನ್ನು ರೂಪಿಸುವ ಪಾಲುದಾರಿಕೆಗೆ ಇದು ವೇದಿಕೆಯಾಗಿದೆ. ಇದಕ್ಕೆ ಪ್ರೆಸಿಡೆನ್ಸಿ ಕಾಲೇಜಿನ ಬೆಂಬಲ ಮತ್ತು ಪ್ರಮುಖ ಕಂಪೆನಿಗಳ ಮಾನವ ಸಂಪನ್ಮೂಲ ವಿಭಾಗದ ವೃತ್ತಿಪರರು ಭಾಗವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರತಿಭೆ ಮತ್ತು ಅವಕಾಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಾನವ ಸಂಪನ್ಮೂಲ ವೃತ್ತಿಪರರು ಪ್ರಮುಖ ಪಾತ್ರ ವಹಿಸುತ್ತಾರೆ. ಸಹಯೋಗ, ಶ್ರೇಷ್ಠತೆ ಮತ್ತು ಉತ್ತಮ ಕೆಲಸ ಶಾಶ್ವತ ಪರಿಣಾಮ ಉಂಟುಮಾಡುತ್ತದೆ ಎಂದರು.

About Mallikarjun

Check Also

ಹನೂರು ವಿದಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮತಗಟ್ಟೆ ಧ್ವಂಸ

ವರದಿ : ಬಂಗಾರಪ್ಪ ಸಿ .ಹನೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.