Breaking News

ಶತ ಶತಮಾನಗಳಿಂದ ಜಾತಿ ರಹಿತ,ತಾರತಮ್ಯ ರಹಿತ ಸಮಾಜದ ರಚನೆಗಾಗಿ ಶ್ರಮಿಸಿದ ಶೇಷ್ಠ ದಾರ್ಶನಿಕರಾದ ಬಸವಣ್ಣ ನವರು

Basavanna, one of the greatest philosophers, worked for the creation of a caste-free and non-discrimination society for centuries.

ಜಾಹೀರಾತು

ಗಂಗಾವತಿ,21:ಶತ ಶತಮಾನಗಳಿಂದ ಜಾತಿ ರಹಿತ,ತಾರತಮ್ಯ ರಹಿತ ಸಮಾಜದ ರಚನೆಗಾಗಿ ಶ್ರಮಿಸಿದ ಶೇಷ್ಠ ದಾರ್ಶನಿಕರಾದ ಬಸವಣ್ಣ ನವರು, ಅಲ್ಲಮಪ್ರಭುಗಳು ಮತ್ತು ಬ್ರಿಟಿಷರ ವಿರುದ್ಧ ವಿರೋಚಿತ ಹೋರಾಟ ನಡೆಸಿದ ವೀರವನಿತೆ ಕಿತ್ತೂರು ಚನ್ನಮ್ಮ ನವರ ಮೌಲ್ಯಾದರ್ಶ ಗಳನ್ನು ಮರುಸ್ಥಾಪಿಸುವ ದಿಶೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮುನ್ನಡೆಯುತ್ತಿದ್ದು,ಇಡೀ ಜಗತ್ತಿಗೆ ಸಾಂಸ್ಕೃತಿಕ ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳಿಗೆ ಹೊಸ ದಿಕ್ಕನ್ನು ತೋರಿಸಿದ ವಚನ ಚಳುವಳಿಯ ನಾಯಕತ್ವವನ್ನು ವಹಿಸಿದ್ದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು, ಅನುಪಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಟ್ಟ ಮೊದಲ ಬಾರಿಗೆ ಸ್ಥಾಪಿಸಿದ ಅಲ್ಲಮಪ್ರಭುಗಳ ಹೆಸರನ್ನು ಶಿವಮೊಗ್ಗದ ಹಳೆಯ ಜೈಲ್ ಆವರಣಕ್ಕೆ ನಾಮಕರಣ ಮಾಡಿ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕನ್ನು ಚೆನ್ನಮ್ಮನ ಕಿತ್ತೂರು ಎಂದು ಮರುನಾಮಕರಣ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.ಚುನಾವಣೆಯಲ್ಲಿ ಭರವಸೆ ನೀಡಿದ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ ಮತ್ತು ಜನರ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ, ಗಂಗಾವತಿಯ ಆರಾಧ್ಯ ದೈವ ಶ್ರೀ ಚನ್ನಬಸವ ತಾತನ ಮತ್ತು ಗ್ರಾಮ ದೇವತೆ ದುರ್ಗಾದೇವಿಯ ಜಾತ್ರೆ ಇರುವುದರಿಂದ ಗಂಗಾವತಿ ನಗರಾದ್ಯಂತ ರಸ್ತೆಗಳ ದುರಸ್ತಿ ಕಾರ್ಯ, ಸ್ವಚ್ಛತಾ ಕಾರ್ಯಗಳ ಕಡೆ ಗಂಗಾವತಿಯ ಶಾಸಕರು ಮುತುವರ್ಜಿ ವಹಿಸಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರುಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಮುಖಂಡರುಗಳಾದ ನಗರಸಭಾ ಸದಸ್ಯರಾದ ಮನೋಹರ್ ಸ್ವಾಮಿ ಹಿರೇಮಠ, ಜಿಲ್ಲಾ ಪಂಚಾಯತ್ ಮಾಜಿ ಅಮರೇಶ್ ಗೋನಾಳ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ನೀಲಪ್ಪ ಸಣ್ಣಕ್ಕಿ, ಸದಸ್ಯರಾದ ಯಮನಪ್ಪ ವಿಟ್ಲಾಪೂರ್, ನಗರಸಭಾ ಸದಸ್ಯರಾದ ಎಫ್. ರಾಘವೇಂದ್ರ, ಮಾಜಿ ಸದಸ್ಯರಾದ ಹುಸೇನಪ್ಪ ಹಂಚಿನಾಳ, ಮುಖಂಡರುಗಳಾದ ವಿಶ್ವನಾಥ್ ಪಾಟೀಲ್, ರಾಮಣ್ಣ ಬಳ್ಳಾರಿ, ಜುಬೇರ, ಗಿರೀಶ್ ಗಾಯಕ್ವಾಡ್, ನೀಲಕಂಠಪ್ಪ ಹೊಸಳ್ಳಿ, ಆಸಿಫ್ ಅಹಮದ್, ರಫೀಕ್ ಸಂಪಂಗಿ, ಪ್ರಸಾದ್ ಪಾನಗಂಟಿ, ಅಯುಬ್ ಅಲಿ, ಆನಂದ್ ಹಾಸಲ್ಕರ್, ಜೆಕೆ ರವಿ ನಾಯಕ್, ಕೆ.ವಿ. ಬಾಬು ಮುಕ್ತಿಯರ್, ರಾಮು ಕಿರಿಕಿರಿ, ಹೊನ್ನೂರ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

“ಭಗವಂತನಾಗುವ ಆಸೆ ಇರೋರಿಗೆ ಮುಂದೇನು ಅಂತ ಗೊತ್ತಿಲ್ಲ”ಭಾಗ್ವತ್ ಹೇಳಿಕೆಗೆ ಸ್ವಾಗತ,ಭಾರಧ್ವಾಜ್

Bhagwat welcomes Bhagwat’s statement, “Irori’s desire to become Lord does not know what is next.” …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.