Breaking News

ನಕಲಿಎಸ್.ಟಿ.ಪ್ರಮಾಣ ಪತ್ರ ರದ್ದುಗೊಳಿಸಿ ಕ್ರಮಿನಲ್ ಕೇಸ್ ದಾಖಲಿಸಲು ಒತ್ತಾಯ

Fake ST Affidavit canceled and forced to file a criminal case




ಕೊಪ್ಪಳ: ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ನಕಲಿ ಎಸ್.ಟಿ. ಜಾತಿ ಪ್ರಮಾಣ ಪತ್ರಗಳು ವಿಪರೀತವಾಗಿದ್ದು, ಸಮುದಾಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜಾತಿ ಪ್ರಮಾಣ ಪತ್ರಗಳ ಪುನರ್ ಪರಿಶೀಲನಾ ಕಾರ್ಯಕ್ಕೆ ವಿಶೇಷ ಸಮಿತಿ ರಚಿಸುವ ಮೂಲಕ ಅವುಗಳನ್ನು ತಡೆಯುವ ಕೆಲಸ ಆಗಬೇಕಿದೆ. ಶಾಶ್ವತ ಜಾತಿ ಪ್ರಮಾಣ ಪತ್ರ ಕೊಡಲು ಯೋಜನೆ ರೂಪಿಸಲು ಒತ್ತಾಯಿಸಿ ಎಸ್. ಟಿ. ಒಳಮೀಸಲಾತಿ ಆಂದೋಲನ ಸಮಿತಿ ಕರ್ನಾಟಕದ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ತಹಶೀಲ್ದಾರ ಕಛೇರಿಯಲ್ಲಿ ಪರಿಶಿಷ್ಟ ಪಂಗಡ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾಗೇಂದ್ರ ಅವರಿಗೆ ಹಾಗೂ ಅವರ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಸಮುದಾಯದ ಪರವಾಗಿ ಮನವಿ ಪತ್ರ ಸಲ್ಲಿಸಿ ಇನ್ನುಮುಂದೆ ಜಾತಿಯನ್ನು ನಮೂದಿಸಿ ಶಾಶ್ವತವಾಗಿ ಲಭ್ಯವಾಗುವ ರೀತಿ ಗಣಕೀಕರಣಗೊಳಿಸಬೇಕು, ಜಾತಿ ಪ್ರಮಾಣ ಪತ್ರ ವಿತರಣೆಗೆ ಅದನ್ನೇ ಮಾನದಂಡವಾಗಿ ರೂಪಿಸಬೇಕು ಕಾರಣ ಪದೇ ಪದೇ ತಪ್ಪು ಮಾಡುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಹಕ್ಕೊತ್ತಾಯ ಮಾಡಿ ಗ್ರೇಡ್ ೨ ತಹಶೀಲ್ದಾರ ಗವಿಸಿದ್ದಪ್ಪ ಮಣ್ಣೂರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇನ್ನು ಕೊಪ್ಪಳ ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾಟ್ರಳ್ಳಿ ಗ್ರಾಮದ ಶಿವರಾಜಕುಮಾರ ತಂದಿ ನಾರಾಯಣ ಚಿತ್ತೂರ ಎಂಬಾತನ ಶಾಲಾ ದಾಖಲಾತಿ ಪ್ರಕಾರ ಹಿಂದೂ ರಡ್ಡೇರ ಜಾತಿಗೆ ಸೇರಿದ್ದು, ಆತನಿಗೆ ಹಿಂದೂ ವಾಲ್ಮೀಕಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ೧೦-೦೪-೨೦೦೮ ರಂದು ನೀಡಲಾಗಿತ್ತು, ನಂತರ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ದಾಖಲಾತಿ ಪರಿಶೀಲನೆ ಮಾಡಿ ೨೮-೦೧-೨೦೧೦ ತಹಶೀಲ್ದಾರ ಅವರು ರದ್ದುಪಡಿಸಿ ದಂಡ ವಿಧಿಸಿರುರುತ್ತಾರೆ. ಆದರೆ ಪುನಃ ಅದೇ ವ್ಯಕ್ತಿಗೆ ೨೮-೦೧-೨೦೧೭ ಬರೋಬ್ಬರಿ ೭ ವರ್ಷಗಳ ನಂತರ ಪರಿಶಿಷ್ಟ ಪಂಗಡ ವಾಲ್ಮೀಕಿ ಜಾತಿ ಪ್ರಮಾಣ ಪತ್ರವನ್ನು ನೀಡಿ ಘೋರ ತಪ್ಪು ಎಸಗಿದ್ದು, ಕೂಡಲೇ ಅಂದಿನ ತಹಶೀಲ್ದಾರ ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಇಲ್ಲವಾದಲ್ಲಿ ನಾವೇ ಆ ಕೆಲಸ ಮಾಡುತ್ತೇವೆ ಎಂದು ಅಲ್ಲದೇ ಸರಕಾರವೇ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಸಮುದಾಯ ಭಾವಿಸಬೇಕಾಗುತ್ತದೆ ಒಂದು ವಾರದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಆದೇಶ ಮಾಡದಿದ್ದಲ್ಲಿ, ತಹಶೀಲ್ದಾರ ಕಛೇರಿ ಮುಂದೆ ಸರಕಾರ ಮತ್ತು ಅಧಿಕಾರಿಗಳ ವಿರುದ್ಧ ಧರಣಿ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್, ನಿವೃತ್ತ ಕಂದಾಯ ಅಧಿಕಾರಿ ಗೋವಿಂದಪ್ಪ, ಮಾರುತಿ ಬೊಮ್ಮನಾಳ, ಅಂದಪ್ಪ ಬೊಮ್ಮನಾಳ, ಮಂಜುನಾಥ ಪೂಜಾರ, ಗ್ಯಾನಪ್ಪ ದದೇಗಲ್, ಈಶಪ್ಪ ತಳವಾರ ಇತರರು ಇದ್ದರು.

ಜಾಹೀರಾತು

About Mallikarjun

Check Also

ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ವತಿಯಿಂದ ಎಪಿಜೆ ಅಬ್ದುಲ್ ಕಲಾಂ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

Happy birthday to APJ Abdul Kalam from Karnataka Editors and Correspondents Association. ತಿಪಟೂರು. ತಾಲ್ಲೂಕಿನ ಹಾಸನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.