Breaking News

ಕ್ರೀಡಾ ಇಲಾಖೆ ಸಹಾಯಕನಿರ್ದೇಶಕರಾಗಿ ನಾಗರಾಜ ಅಧಿಕಾರ ಸ್ವೀಕಾರ

Nagaraja assumed office as Assistant Director of Sports Department

ಕೊಪ್ಪಳ: ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆಯ ತೆರವಾದ ಸಹಾಯಕ ನಿರ್ದೇಶಕರ ಹುದ್ದೆಗೆ ಚಿಇ ಇಲಾಖೆಯ ಹಿರಿಯ ಸುಪರಿಂಟೆಂಡೆಂಟ್ ಆಗಿರುವ ನಾಗರಾಜ ಹೆಚ್. ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಇಲಾಖೆಯ ನಿರ್ದೇಶನದ ಮೇರೆಗೆ ಅಧಿಕಾರ ಸ್ವೀಕರಿಸಿದ ನಾಗರಾಜ ಅವರು ಬೆಂಗಳೂರು ಸೇರಿದಂತೆ ಹಲವೆಡೆ ಉತ್ತಮ ಕೆಲಸ ಮಾಡಿದ್ದು, ಅಪಾರ ಜ್ಞಾನ ಹೊಂದಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿರುವ ಕಾರಣ ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಯುವಜನರಿಗೆ ಉತ್ತಮ ಮಾರ್ಗದರ್ಶನ ನೀಡಬಲ್ಲರಾಗಿದ್ದಾರೆ.
ಈ ಸಂದರ್ಭದಲ್ಲಿ ಇಲಾಖೆಯ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮತ್ತು ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಹಲವು ವರ್ಷಗಳಿಂದ ಇಲಾಖೆ ಬಹಳ ಸಪ್ಪೆಯಾಗಿದೆ, ಯುವ ಸಂಘಗಳ ಪರಿಸ್ಥಿತಿ ಸಹ ಶೋಚನೀಯವಾಗಿದೆ. ಆದರೆ ನಾಗರಾಜ್ ಅವರು ಕ್ರೀಡಾ ಹಾಸ್ಟೆಲ್, ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕ ಕ್ರೀಡಾಂಗಣಗಳ ಉನ್ನತೀಕರಣ, ಕ್ರೀಡಾ ಕಾರ್ಯಕ್ರಮಗಳು ಮತ್ತು ಯುವಜನರ ಸಾಂಸ್ಕೃತಿಕ ಮೇಳಗಳು, ಸರಕಾರಿ ನೌಕರರ ಕ್ರೀಡಾಕೂಟ ಸೇರಿದಂತೆ ಹಲವು ಆಲೋಚನೆಗಳನ್ನು ಹೊಂದಿದ್ದಾರೆ ಇಂತಹ ವೇಳೆಯಲ್ಲಿ ಅಧಿಕಾರ ಸ್ವೀಕರಿಸಿದ್ದು ಇಲಾಖೆಗೆ ಮರುಜೀವ ಬಂದಂತಾಗಿದೆ ಎಂದರು.
ಇಲಾಖೆಯ ಅಧಿಕಾರಿಗಳು ಕೇವಲ ಕಛೇರಿ ನಿರ್ವಹಣೆ ಮಾಡಿಕೊಂಡರೆ ಸಾಲದು ಇದು ಓಡಾಡಿ ಕೆಲಸ ಮಾಡುವ ಹುದ್ದೆಯಾಗಿದ್ದು, ಹೊರಗಿನವರಿಗೆ ಚಾರ್ಜ್ ಕೊಟ್ಟರೆ ಅಥವಾ ಕೆಲಸ ಮಾಡದ ಅಧಿಕಾರಿಯನ್ನು, ಅಮಾನತ್ತುಗೊಂಡ ಅಧಿಕಾರಿಗೆ ಮತ್ತೆ ಇಲ್ಲಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಚಿವರಾದ ಬಿ. ನಾಗೇಂದ್ರ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದು, ಮೂರು ವರ್ಷ ಜಿಲ್ಲೆಯ ಯುವಜನರ ಕಲ್ಯಾಣಕ್ಕೆ ವಿಶೇಷ ಅನುದಾನಗಳನ್ನು ನೀಡುವ ಮೂಲಕ ಯುವಶಕ್ತಿಯನ್ನು ಬೆಂಬಲಿಸಬೇಕು ಎಂದರು.
ಈ ವೇಳೆ ವಾಲಿಬಾಲ್ ಕೋಚ್ ಕಮಲ್ ಸಿಂಗ್ ಬಿಸ್ತ, ಖೋಖೋ ಕೋಚ್ ಎ. ಯತಿರಾಜ, ಜಗದೀಶ ಹಿರೇಮಠ, ತುಕಾರಾಮ ರಂಜಪಲ್ಲಿ, ಹನುಮೇಶ ಪೂಜಾರ, ಆನಂದ ಹಳ್ಳಿಗುಡಿ, ಮಂಜುನಾಥ ಪೂಜಾರ ಇತರರು ಇದ್ದರು.

About Mallikarjun

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.