Breaking News

ಕಳಪೆ ಮೆಕ್ಕೆಜೋಳ ವಿತರಣೆ ರೈತರು ಅಕ್ಷರಶಃ ಕಂಗಾಲು

Poor maize distribution leaves farmers literally destitute

ಜಾಹೀರಾತು

*ನೂರಾ ಐವತ್ತು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ ಬೀಜ ಬಿತ್ತನೆ,ಮೊಳಕೆ ಬರದ ರೈತರು ಅಕ್ಷರಶಃ ಕಂಗಾಲು *

ಕೊಟ್ಟೂರು ತಾಲ್ಲೂಕು ತಾಲ್ಲೂಕಿನಾದ್ಯಂತ ಇತ್ತೀಚೆಗೆ ಮಳೆ ಚೆನ್ನಾಗಿ ಆಗಿದ್ದು, ಗಾಣಗಟ್ಟೆ ಗ್ರಾಮದಲ್ಲಿನ ಇಪ್ಪತ್ತೈದಕ್ಕೂ ಹೆಚ್ಚು ರೈತರು ಸುಮಾರು ನೂರಾ ಐವತ್ತು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ ಬೀಜವನ್ನು ಬಿತ್ತನೆ ಮಾಡಿದ್ದರು. ಮೆಕ್ಕೆಜೋಳ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸರಿಯಾಗಿ ಹುಟ್ಟಿರುವುದಿಲ್ಲವೆಂದು ರೈತರು ಗೋಳಾಡುತ್ತಿದ್ದಾರೆ. ಗಾಣಗಟ್ಟೆ ಗ್ರಾಮದ ರೈತರಾದ ಹನುಮಂತಪ್ಪ, ಎನ್ ಮಹಾಂತೇಶ, ಮಾರುತಿ, ಪ್ರವೀಣ, ಮಹಾಂತೇಶ, ವೆಂಕಟೇಶ, ರಾಜಶೇಖರ, ಎಸ್ ಮಾಯಪ್ಪ, ಬಸವರಾಜ, ಆನಂದಪ್ಪ, ಬುಡ್ರಿ ಮಹೇಶ, ರಾಜಣ್ಣ, ಇನ್ನು ಹೆಚ್ಚು ರೈತರು ರಾಣೇಬೆನ್ನೂರಿನಿಂದ ಬೀಜವನ್ನು ಶಿವಂ ಸೀಡ್ಸ್ ಅಂಗಡಿಯಿಂದ ಖರೀದಿ ಮಾಡಿ ತಂದಿದ್ದರು. ಮಳೆ ಬಂದ ನಂತರ ಬಿತ್ತನೆಯನ್ನು ಮಾಡಿದ್ದರು ಆದರೆ ಬೀಜಗಳ ಗುಣಮಟ್ಟ ಸರಿಯಿಲ್ಲದ ಕಾರಣ ಬಿತ್ತನೆ ಮಾಡಿದ ಸಸಿಗಳು ಮೊಳಕೆ ಬಂದಿರುವುದಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಕಳಪೆ ಬೀಜಕ್ಕೆ ಕಾರಣರಾದವರ ಮೇಲೆ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಕೇಳಿಕೊಳ್ಳುತ್ತಿದ್ದಾರೆ. ಮೊಳಕೆ ಬರದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಾಗಿದೆ. ಎಂದರು

ಕೋಟ್-೧
ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸ್ಥಳೀಯವಾಗಿ ವಿಶ್ವಾಸಾರ್ಹ ಮತ್ತು ಪರವಾನಗಿ ಪಡೆದ ಮಾರಾಟಗಾರರಿಂದ ಬೀಜಗಳನ್ನು ಖರೀದಿಸಬೇಕು ಮತ್ತು ಭೂಮಿ ಸಮರ್ಪಕವಾಗಿ ತೇವಾಂಶವನ್ನು ನೋಡಿ ಬಿತ್ತನೆ ಮಾಡಬೇಕು.
ಶ್ಯಾಮ್ ಸುಂದರ್
ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಕೊಟ್ಟೂರು.

ಪ್ರತಿ ವರ್ಷ ರೈತ ಸಂಪರ್ಕ ಕೇಂದ್ರದಲ್ಲಿ ತರುತ್ತಿದ್ದೆ ಆದರೆ ಈ ವರ್ಷ ಕೆಲವು ರೈತರ ಮಾತು ಕೇಳಿ ರಾಣೆಬೆನ್ನೂರು ಬೀಜ ಇಳುವರಿ ಬರುತ್ತದೆ ಎಂದು ಹೇಳಿದರು.ಆದ್ದರಿಂದ ಈ ವರ್ಷ ರಾಣೆಬೆನ್ನೂರು ಬೀಜ ತಂದು ಕಷ್ಟಕ್ಕೀಡಾದನು. ನನಗೆ ೧೨ ಎಕರೆ ಹೋಲಕ್ಕೆ ೩೦ ಪಾಕೆಟ್ ಬೀಜವನ್ನು ಖರೀದಿ ಮಾಡಿದ್ದನು ಸಂಪೂರ್ಣವಾಗಿ ಕಳಪೆ ಬೀಜವಾಗಿದೆ.
ಎಸ್ ಮಾಯಪ್ಪ
ಗಾಣಗಟ್ಟೆ ಗ್ರಾಮದ ರೈತ.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *