Breaking News

ವಿದ್ಯಾರ್ಥಿಗಳಿಗೆ ಪ್ರಗತಿಪರ ಶಿಕ್ಷಕರ ವೇದಿಕೆ ವತಿಯಿಂದ ಲೇಖನ ಸಾಮಗ್ರಿ ವಿತರಣೆ

Distribution of stationery to students by Progressive Teachers Forum

ಜಾಹೀರಾತು

ಕೊಟ್ಟರು: ಇಂದು ಹಗರಿ ಬೊಮ್ಮನಹಳ್ಳಿ ಯಲ್ಲಿ ಪ್ರಗತಿಪರ ಶಿಕ್ಷಕರ ವೇದಿಕೆ ವತಿಯಿಂದ ರಾಮನಗರ ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೋನಿಯಾ ಗಾಂಧಿನಗರ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳಾದ ಮಗ್ಗಿ ಪುಸ್ತಕ, ನೋಟು ಪುಸ್ತಕ, ಪೆನ್ನು, ಪೆನ್ಸಿಲ್, ಸ್ಕೇಲು ರಬ್ಬರ್.ಮೆಂಡರ್ ವಿತರಿಸಲಾಯಿತು

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷರಾದ ಶ್ರೀ ಮರಿ ರಾಮಪ್ಪ ಅವರು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮೈಲೇಶ್ ಬೇವೂರ್ ರವರು ವಹಿಸಿದ್ದರು.
ಶಿಕ್ಷಕ ಕೆ .ಹುಸೇನ್ ಸಾಹೇಬ್ ಪ್ರಾಸ್ತಾವಿಕ ನುಡಿ ಮಾತನಾಡಿ 2022 – 23ನೇ ಸಾಲಿನಲ್ಲಿ 13 ಶಾಲೆಗಳಿಗೆ 24 -25 ನೇ ಸಾಲಿನಲ್ಲಿ 9 ಶಾಲೆಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಗಿದೆ ಹಾಗೂ 2025 26ನೇ ಸಾಲಿನಲ್ಲಿ 13 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ರಾಜಕುಮಾರ್ ನಾಯ್ಕ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಪ್ಪ ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಎಂಪಿಎಂ ಮಂಜುನಾಥ, ತಾಲೂಕು ಕಾರ್ಯದರ್ಶಿ. ಟಿ ಸೋಮಶೇಖರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್. ಲೋಕಪ್ಪ, ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷರಾದ ಎಲ್ ಕೃಷ್ಣ ನಾಯ್ಕ, ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಮೀಠ್ಯಾನಾಯ್ಕ , ಕಾರ್ಯದರ್ಶಿ ಟಿ. ಮಾರುತಿ ಖಜಾಂಚಿ ಬಿ. ರಾಮಣ್ಣ ಸಂಘಟನಾ ಕಾರ್ಯದರ್ಶಿ ಚಾರಿದುರ್ಗಪ್ಪ, ನಿಕಟ ಪೂರ್ವ ಅಧ್ಯಕ್ಷ ಹೆಚ್ ಕೊಟ್ರಪ್ಪ, ಬಿಆರ್ ಪಿ ಪರಮೇಶ್ವರ ಸೊಪ್ಪಿಮಠ, ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಶಿಕ್ಷಕ ನೌಕರ ಸಂಘದ ಅಧ್ಯಕ್ಷರಾದ ಗೋಣಿಬಸಪ್ಪ ನಿರ್ದೇಶಕರಾದ ಎಂ. ಎಸ್ ಮೈಲಪ್ಪ, ಮುನೀರ್ ಸಾಹೇಬ್, ಶಾಲೆಯ ಪ್ರಭಾರಿ ಮುಖ್ಯಗುರು ವೀರೇಶ್ ಕೆಎಸ್, ಸಿಆರ್‌ಪಿ ಗೌರಮ್ಮ ,ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೈಫುಲ್ಲಾ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2024 -25 ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪಡೆದ ತಾಲೂಕಿನ ಕ್ರಿಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮೈಲೇಶ್ ಬೇವೂರ್ ಸರ್ ಅವರಿಗೆ ವಿವಿಧ ವೃಂದ ಸಂಘಟನೆಗಳ ಪದಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು .ಶಿಕ್ಷಕಿ ರಾಧಮ್ಮ ಪ್ರಾರ್ಥನೆ ಮಾಡಿದರು, ಶಿಕ್ಷಕ ಸಿದ್ದನಗೌಡ ಎಲ್ಲರಿಗೂ ವಂದಿಸಿದರು. ನವೀನ್ ಕೃಷ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *