Lingayat Dharma Realization Cradle Program and Mobile Shiva Experience Session in Chikbo Kammanal Village

ಕೊಪ್ಪಳ :-ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ, ಶನಿವಾರ 21-06-2025ರಂದು ““ಲಿಂಗಾಯತ ಧರ್ಮ ನಿಜಾಚಾರಣೆ ತೊಟ್ಟಿಲು ಕಾರ್ಯಕ್ರಮ ಹಾಗೂ ಸಂಚಾರಿ ಶಿವನುಭವ ಗೋಷ್ಠಿ”ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಬೀದರ ಬಸವಗಿರಿಯಿಂದ ಆಗಮಿಸಿದ ಪೂಜ್ಯ ಶ್ರೀ ಮ.ನಿ.ಪ್ರ ಪ್ರಭುದೇವ ಮಹಾಸ್ವಾಮಿಗಳು ಲಿಂಗಾಯತ ಮಹಾಮಠ ಬಸವಗಿರಿ ಬೀದರ ಇವರು ಲಿಂಗದೀಕ್ಷೆ ಮಾಡಿದರು. ನಂತರದಲ್ಲಿ ಶಿವಾನುಭವ ಗೋಷ್ಠಿಯನ್ನು ಪ್ರಾರಂಭಿಸುತ್ತಲಾಯಿತು.
ಶಿವಾನುಭವ ಗೋಷ್ಠಿಯ ಮೊದಲು ತೊಟ್ಟಿಲು ಕಾರ್ಯಕ್ರಮವನ್ನು ಪೂಜ್ಯ ಶ್ರೀ ಮ.ನಿ.ಪ್ರ ಪ್ರಭುದೇವ ಮಹಾಸ್ವಾಮಿಜಿಯವರು ಹಾಗೂ ವಿಶ್ವಗುರು ಬಸವೇಶ್ವರ ಟ್ರಸ್ಟನ ಶರಣಬಳಗದವರು ಈ ಒಂದು ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಲಿಂಗಾಯತ ಧರ್ಮದಂತೆ ವಚನಗಳನ್ನು ಹಾಡಿದರು ವಚನಗಳ ಜೋಗುಳ ಪದ ವಿಶೇಷವಾಗಿ ಮೂಡಿ ಬಂತು. ಪೂಜ್ಯ ಶ್ರೀ ಪ್ರಭುದೇವರು ಶರಣಬಳಗದವರು ವಚನಗಳನ್ನು, ಸ್ವರ ವಚನಗಳನ್ನು, ಜೋಗುಳ ಪದಗಳನ್ನು ಹಾಡಿ ಅರ್ಥಪೂರ್ಣವಾಗಿ ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಶರಣ ಶಿವಣ್ಣ ಗಿ. ಇಂಗಳದಾಳ ಮೊಮ್ಮಗಳಾದ, ಶರಣೆ ಶರಣಮ್ಮ ಶರಣ ಮುದಿಯಪ್ಪ ಹಳ್ಳಿ ಇವರ ಸುಪುತ್ರಿ ಶರಣೆ ವಿಜಯಲಕ್ಷ್ಮೀ ಗಂ.ಶರಣಪ್ಪ ಇವರ ಸುಪುತ್ರಿಯ “ಬಸವಾರ್ಪಿತಾ” ಎಂದು ಹೆಸರಿಡಲಾಯತು.
ತೊಟ್ಟಿಲು ಕಾರ್ಯಕ್ರಮದ ನಂತರ ಶಿವಾನುಭವ ಗೋಷ್ಠಿಯನ್ನು ಆರಂಭಿಸಲಾಯಿತು. ಪ್ರಸ್ತಾವಿಕವಾಗಿ ಮಾತನಾಡಿ ಲಿಂಗಾಯತ ಧರ್ಮದ ನೀಚ ಆಚರಣೆಯ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ ಘಟಕದ ಅಧ್ಯಕ್ಷರಾದ ಹನುಮೇಶ ಕಲ್ಮಂಗಿ ವಿವರಿಸಿದರು. ನಂತರದಲ್ಲಿ ಬಸವರಾಜಪ್ಪ ಇಂಗಳದಾಳ ಅವರು, ಲಿಂಗಾಯತ ಧರ್ಮದ ನಿಜ ಆಚರಣೆ, ಶಿವಾನಗೋಷ್ಠಿಯ ಅರ್ಥತೆಯ ಬಗ್ಗೆ ಮಾತನಾಡಿದರು.
ಅದೇ ರೀತಿ ಅಮರೇಶಪ್ಪ ಗಡೆಳ್ಳಿಯವರು ‘ವಚನದ ಮೂಲಕ ತೊಟ್ಟಿಲು ಕಾರ್ಯಕ್ರಮ ಯಾಕೆ ನಿಜಚರಣೆ ಲಿಂಗಾಯತರಿಗೆ ಯಾಕೆ ತಿಳಿದಿಲ್ಲ’ ಎಂಬ ವಿಷಯದ ಬಗ್ಗೆ ವಿವರಿಸಿದರು. ಯಲಬುರ್ಗಾ ತಾಲೂಕಿನ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಅಂಬರೇಶಪ್ಪ ಬಳ್ಳಾರಿಯವರು ಗಣಾಚಾರಿ ತತ್ವದ ಬಗ್ಗೆ ತಿಳಿಸುತ್ತಾ ನಿಜಾಚರಣೆಯನ್ನು ಮಾಡಿಸುತ್ತಿದ್ದ ಕುರಕುಂದಿ ವೀರಭದ್ರಪ್ಪ ಅವರನ್ನು ನೆನೆದು ಭಾವುಕರಾದರು.
ಪೂಜ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ ಪ್ರಭುದೇವ ಮಹಾಸ್ವಾಮಿಗಳು, ಗರ್ಭದಿಂದ ಮಗುವಿನ ಹುಟ್ಟಿನಿಂದ ಬೆಳವಣಿಗೆಯವರೆಗೂ ಆಗಬೇಕಾ ಸಂಸ್ಕಾರದ ಬಗ್ಗೆ ತಿಳಿಸಿದರು. ತಾಯಿ 8 ತಿಂಗಳ ಗರ್ಭಿಣಿಯಾದ ಸಂದರ್ಭದಲ್ಲಿ ಗರ್ಭಲಿಂಗ ದೀಕ್ಷೆ, ಮಗು ಹುಟ್ಟಿದ ನಂತರ ತೊಟ್ಟಿಲು ಕಾರ್ಯಕ್ರಮ, ಎಂಟು ವರ್ಷಕ್ಕೆ ಲಿಂಗ ದೀಕ್ಷೆಯನ್ನು ಮಾಡಿಸಿ ಮಕ್ಕಳಿಗೆ ಸಂಸ್ಕಾರದ ಬಗ್ಗೆ ಮಾಹಿತಿ ನೀಡಬೇಕೆಂದು ವಿವರಿಸಿದ್ದರು. ಹಳ್ಳಿ ಬಂಧುಗಳ ಮನೆಮಗಳಾದಂತ ಶರಣೆ ವಿಜಯಲಕ್ಷ್ಮಿ ಶರಣ ಶರಣಪ್ಪ ಇವರ ಸುಪುತ್ರಿಯ ನಾಮಕರಣ ಅರ್ಥಪೂರ್ಣವಾಗಿ ಆಚರಿಸಿದ ಹಳ್ಳಿ ಮನೆತನವನ್ನು ಸ್ಮರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶರಣ ರುದ್ರಪ್ಪ ಹಳ್ಳಿಯವರು ನೆರವೇರಿಸಿದರು, ಅತಿಥಿಗಳಾಗಿ ಆಗಮಿಸಿದ ಶರಣ ಹನುಮಂತಪ್ಪ ಗುಳೇದ ಗ್ರಾಮ ಪಂಚಾಯತಿ ಅಧ್ಯಕ್ಷರು ಸಾ. ಚಿಕ್ಕಬೊಮ್ಮನಾಳ, ಗ್ರಾಮ ಘಟಕ ರಾಷ್ಟ್ರೀಯ ವನಜಬಾವಿ ಅಧ್ಯಕ್ಷರಾದ ಶರಣ ದೇವಪ್ಪ ಕೋಳೂರು, ಶರಣ ರುದ್ರಯ್ಯ ಹಿರೇಮಠ ಅವರು, ಇಂಗಳದಾಳ ಮನೆಯ ಹಿರಿಯ ಜೀವ ಶರಣ ಶಿವಪ್ಪ ಇಂಗಳದಾಳ, ಶರಣ ಗವಿಶ ಸಸಿಮಠ ರವರು, ಹಾಗೂ ಎಲ್ಲ ಬಸವ ಪರ ಸಂಘಟನೆಗಳ ಮುಖಂಡರು, ಕೊಪ್ಪಳ ಯಲಬುರ್ಗಾ ಮತ್ತು ಕುಷ್ಟಗಿ ಸುತ್ತಮುತ್ತಲು ಗ್ರಾಮದ ಶರಣ ಬಂಧುಗಳು ಮುಖ್ಯವಾಗಿ ಹಳ್ಳಿ ಬಂಧುಗಳು ಹಾಗೂ ಇಂಗಳದಾಳ ಬಂಧುಗಳು ಉಪಸ್ಥಿತರಿದ್ದರು.