On February 13th and 14th, Vidhana Soudha was visited by Asha Workers Association
ಕೊಪ್ಪಳ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೂ .15000 ನೀಡಲು ಮತ್ತು ಇತರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಮಟ್ಟದ ಪ್ರತಿಭಟನೆ ಮತ್ತು
ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೆಬ್ರುವರಿ 13, 14ನೇ ತಾರೀಖಿನಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಹೋರಾಟದ ಕುರಿತು ಮಾನ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ಮಾತನಾಡಿ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ ಹೋರಾಟದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಅಶಾ ಕಾರ್ಯಕರ್ತೆಯರು ಭಾಗವಹಿಸುತ್ತಾರೆ.
ಕಳೆದ 7-8 ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಧನ ನೀಡಲು ಈ ಅನ್ ಲೈನ್ ಪೋರ್ಟಲ್‌ಗೆ ಲಿಂಕ್ ಮಾಡಿರುವರು . ಆಗಿನಿಂದಲೂ ಇವರು ದುಡಿದಷ್ಟು ಪ್ರೋತ್ಸಾಹಧನ ಬರದೆ ಎಲ್ಲಾ ಕಾರ್ಯಕರ್ತೆಯರು ಸಾವಿರಾರೂ ರೂ. ನಷ್ಟ ಅನುಭವಿಸಿರುವರು . ದುಡಿದ ಈ ಬಡ ಮಹಿಳೆಯರಿಗೆ ಅನ್ಯಾಯವಾಗುತ್ತಲೇ ಇದೆ . ಈ ಮೂಲಕ ನಿಜಕ್ಕೂ ಮಹಿಳೆಯರ ಪರ ಇರುವ ಸರ್ಕಾರದಿಂದ ಈ ಮಹಿಳಾ ಶೋಷಣೆ ನಿಲ್ಲಬೇಕಿದೆ ! ಸದಾ ಸೇವೆಗೂ ಸಿದ್ಧ ! ಹೋರಾಟಕ್ಕೂ ಸಿದ್ಧ ಎನ್ನುವ ಆಶಾ ಕಾರ್ಯಕರ್ತೆಯರನ್ನು ಅನಿವಾರ್ಯವಾಗಿ ಇಲಾಖೆ ಬೀದಿಗೆ ಕರೆ ತರುತ್ತಿದೆ .ಈ ರಾಜ್ಯ ಮಟ್ಟದ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರು ಭಾಗವಹಿಸುತ್ತಾರೆ ಎಂದು ಹೇಳಿದರು. ಈ ಹೋರಾಟದ ಪೋಸ್ಟರನ್ನು ಸಂಘದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ ನಗರ ಘಟಕ ಅಧ್ಯಕ್ಷರಾದ ದ್ರಾಕ್ಷಾಯಿಣಿ ಹಡಗಲಿ ಕಾರ್ಯದರ್ಶಿಗಳಾದ ರಜಿಯಾ ಬೇಗಮ್, ಸವಿತಾ ಹಡಪದ್, ಮುಖಂಡರಾದ ಲಲಿತ ಹಿರೇಮಠ, ವಿಜಯಲಕ್ಷ್ಮಿ, ರೇಣುಕಾ ಬಂಗಾರಿ, ಗಂಗಮ್ಮ, ನಿರ್ಮಲ, ಸುನಿತಾ, ಶಿಲ್ಪ, ಶೀಲಾ, ರೇಣುಕಾ ಡಿ ಮುಂತಾದವರು ಭಾಗವಹಿಸಿದ್ದರು.