JESCOM Munirabad: Power outage in various villages today.

ಕೊಪ್ಪಳ : ಮುನಿರಾಬಾದ ಉಪ ವಿಭಾಗದಲ್ಲಿ ವಿದ್ಯುತ್ ವಿತರಣಾ ಕಾರ್ಯ ನಡೆಯುತ್ತಿರುವ 11 ಕೆ.ವಿ ಫೀಡರ್ ನಿರ್ವಹಣಾ ಕಾರ್ಯದ ಪ್ರಯುಕ್ತ ಮುನಿರಾಬಾದ್ ವ್ಯಾಪ್ತಿಯ ಗ್ರಾಹಕರಿಗೆ ಫೆಬ್ರವರಿ 5ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 5.30 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಲಿಂಗಾಪುರ, ಹೊಸಳ್ಳಿ, ಬೇವಿನಹಳ್ಳಿ,
ಹುಲಿಗಿ (ಆರ್.ಎಸ್), ಟಾಟಾ ಶೋ ರೂಮ್ ಏರಿಯಾ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಏರಿಯಾ, ಮುನಿರಾಬಾದ್, ಎಸ್ ಆರ್, ಎಸ್ ಲಿಂಗಾಪುರ, ಹಾರ್ಟಿಕಲ್ಚರ್ ಕಾಲೇಜ ಏರಿಯಾ, ಚಿಕ್ಕ ಕಾಸನಕಂಡಿ, ಗುಳದಳ್ಳಿ, ಬೂದಗುಂಪಾ, ಇಂದಿರಾನಗರ, ಬಿಳೇಬಾವಿ, ಅಲ್ಲಾನಗರ, ಹೀರೆಬಗನಾಳ ಹಾಗೂ ಕಾಸನಕಂಡಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ನಿರ್ವಹಣಾ ಕಾರ್ಯದ ಪ್ರಯುಕ್ತ ವಿದ್ಯುತ್ ಮಾರ್ಗಮುಕ್ತತೆ (ಲೈನ್ ಕ್ಲೇರ್) ತೆಗೆದುಕೊಳ್ಳಲಾಗಿರುತ್ತದೆ. ಒಂದು ವೇಳೆ ನಿರ್ಣಯಿಸಿದ ಅವಧಿಗಿಂತ ಮೊದಲೇ ಕಾಮಗಾರಿ ಪೂರ್ಣಗೊಂಡರೆ, ತಕ್ಷಣವೇ ಮಾರ್ಗಮುಕ್ತತೆಯನ್ನು ರಿಟರ್ನ್ ಮಾಡಿ ವಿದ್ಯುತ್ ಪೂರೈಕೆಯನ್ನು ಪುನಃ ಸ್ಥಾಪಿಸಲಾಗುವುದು. ಆದ್ದರಿಂದ ಸಾರ್ವಜನಿಕರು, ಗ್ರಾಹಕರು ಯಾವುದೇ ಕಾರಣಕ್ಕೂ ಮಾರ್ಗಮುಕ್ತತೆ ತೆಗೆದುಕೊಂಡ ಅವಧಿಯಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಯಾವುದೇ ಕಾಮಗಾರಿಯನ್ನು ನಡೆಸಬಾರದೆಂದು ಈ ಮೂಲಕ ಕೋರಲಾಗಿದೆ. ಈ ಕಾರಣದಿಂದಾಗಿ ಯಾವುದೇ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಕಾಮಗಾರಿಯನ್ನು ನಡೆಸಿದರೆ, ಕಾಮಗಾರಿಯನ್ನು ನಡೆಸಿದ ಸಾರ್ವಜನಿಕರೇ ಅಥವಾ ಗ್ರಾಹಕರೇ ನೇರ ಹೊಣೆಗಾರರಾಗುತ್ತಾರೆ.
ಇಂತಹ ವಿದ್ಯುತ್ ಅವಘಡಕ್ಕೆ ಜೆಸ್ಕಾಂ ಯಾವುದೇ ರೀತಿಯಲ್ಲಿ ಜವಾಬ್ದಾರವಲ್ಲ ಎಂದು ಈ ಮೂಲಕ ಸ್ಪಷ್ಟಪಡಿಲಾಗಿದೆ” ಎಂದು ಮುನಿರಾಬಾದ್ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.