A woman was killed by lightning in Kallura village.
ಕೊಪ್ಪಳ : ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದ ಮಮತಾ (32) ಗಂಡ ರಾಜಮಹ್ಮದ ಬಳಗೇರಿ ಈ ಮಹಿಳೆಯು ಹೊರವಲಯದಲ್ಲಿರುವ ಜಮೀನಿಗೆ ಹೆಸರು ಬುಡ್ಡಿ ಬಿಡಿಸಲು ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಈಗ ಬೆಳೆಗಳು ಕಟಾವಿಗೆ ಬಂದಿದ್ದು, ಬಡ ರೈತಾಪಿ ವರ್ಗದವರು, ಕೂಲಿಯಾಳುಗಳು ಪ್ರತಿ ನಿತ್ಯ ಹೆಸರು ಬುಡ್ಡಿಯನ್ನು ಬಿಡಿಸಲು ಜಮೀನಿಗೆ ತೆರಳುವುದು ಸಹಜ.
ಆದರೆ ಈ ಮಳೆಗಾಲ ಆರಂಭದಿಂದಲೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು ಬೆಳೆಗಳು ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗುತ್ತದೆ. ಎಂದು ದಿನ ನಿತ್ಯದ ಕಾಯಕಕ್ಕೆ ತೆರಳಿದ ಮಮತಾ ಇವರ ಪಾಲಿಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ಗ್ರಾಮದ ಮೂರು ನಾಲ್ಕು ಜನ ಬಡ ಕೂಲಿ ಕಾರ್ಮಿಕ ಮಹಿಳೆಯರು ಬುಡ್ಡಿ ಬಿಡಿಸಲು ಹೋದ ಸಂದರ್ಭದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಮಳೆಯ ಹನಿಯಿಂದ ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಕವರ್ ಗಳಿರುವಲ್ಲಿಗೆ ದೌಡಾಯಿಸುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.
ಘಟನೆ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದಂತೆ ನೂರಾರು ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಆಗಮಿಸಿದರು ಎಂದು ತಿಳಿದು ಬಂದಿದ್ದು ಈ ಕುರಿತು ಇನ್ನೂ ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.