A request to cancel the examination conducted by KPSC is flawed

ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಹಾಗೂ ಅಖಿಲಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ತಾಲೂಕು ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಗ್ರೇಡ್ -೨ ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ತಾ.ಅಧ್ಯಕ್ಷ ದೇವರಾಜ ಪೋತ್ನಾಳ್ ಮಾತನಾಡಿ ಇತ್ತೀಚಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆದ ೩೮೪ ಗೆಜೆಟೆಡ್ ಪ್ರಬೇಷನರಿ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಹಲವು ದೋಷಗಳಿವೆ ಹಾಗೂ ಅಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಪ್ರೇಶ್ನೆಗಳನ್ನು ತರ್ಜುಮೆ ಮಾಡುವಾಗ ಅರ್ಥಗಳು ಅದಲು ಬದಲಾಗಿರುವಂತೆ ಇರುವುದರಿಂದ ಪರೀಕ್ಷೆಗೆ ಹಜಾರಾಗಿರುವ ಬಹಳಷ್ಟು ಜನರು ಅನುತಿರ್ಣರಾಗಲಿದ್ದಾರೆ ಅದರಿಂದ ಮುಖ್ಯ ಮಂತ್ರಿಗಳು ದೋಷಪೂರಿತವಾಗಿರುವ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷರಾದ ಪ್ರಭು ಪೋತ್ನಾಳ್ , ತಾ.ಉಪಾಧ್ಯಕ್ಷರಾದ ಶಿವುಕುಮಾರ್, ಕಾರ್ಯದರ್ಶಿ ಮುಕೇಶ್, ಯಶವಂತಕುಮಾರ , ದೇವುಪವರ್. ಅಮರೇಶ,ಈರೇಶ,ರಮೇಶ,ನಾಗರಾಜ ಸೇರಿದಂತೆ ಇನ್ನಿತರರು ಇದ್ದರು.