Town development work will be done as per MLA Rayardi’s wish: Gagana Notagara

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ರಾಜ್ಯದಲ್ಲಿ ಪಟ್ಟಣ ಪಂಚಾತಿ ಚುನಾವಣೆ ಮುಗಿದು, ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ 28 ತಿಂಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಭಾಗ್ಯ ಮೀಸಲಿನಂತೆ ಒಲಿದು ಬಂದಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಗಗನ ನೋಟಗಾರ ಹೇಳಿದರು.
ಅವರು ಕುಕನೂರು ಪಟ್ಟಣದ 8ನೇ ವಾರ್ಡ್ ಅಂಬೇಡ್ಕರ್ ನಗರದ ಗಾಳೆಮ್ಮ ದೇವಿ ದೇವಸ್ಥಾನದಲ್ಲಿ ಪಟ್ಟಣ ಪಂಚಾಯತಿಯ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ ಆರ್ ಬೆರಳಿನ್ ಇವರಿಗೆ ಹಾಗೂ ವಾರ್ಡಿನ ಮುಖಂಡರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದರು.
ಶಾಸಕ ರಾಯರಡ್ಡಿಯವರು ಯಲಬುರ್ಗಾ ಕ್ಷೇತ್ರವನ್ನು ಶೈಕ್ಷಣಿಕವಾಗಿ ರಾಜ್ಯದಲ್ಲಿ ಮಂಚೂಣಿಯಲ್ಲಿ ತಂದಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.
ಅದಲ್ಲದೇ ಆರೋಗ್ಯ ಸುಸ್ಥಿರ ಸಮಾಜಕ್ಕಾಗಿ ತಾಲೂಕಿನಾಧ್ಯಂತ ಆರೋಗ್ಯ ಕೇಂದ್ರಗಳನ್ನು ತಂದಿರುವುದು, ಸೇರಿದಂತೆ ವಿದ್ಯುತ್, ಗ್ರಾಮ ಸ್ವಚ್ಚತೆಗೆ ಪ್ರತಿಯೊಂದು ಗ್ರಾಮದ ವಾರ್ಡಗಳಲ್ಲಿ ಸಿಸಿ ರಸ್ತೆಯನ್ನು ಮಾಡಿಸುವ ಮೂಲಕ ಅಭಿವೃದ್ದಿಯನ್ನು ಹರಿಕಾರರೆಂದು ಜನ ಮನ್ನಣೆ ಪಡೆದಿರುವ ಇವರ ಅಣತಿಯಂತೆ ಪಟ್ಟಣ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಅಭಿವೃದ್ದಿ ಧಾಪುಗಾಲನ್ನು ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ನಂತರದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ ಮಾತನಾಡಿ ಶಾಸಕರ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಪಟ್ಟಣದ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುವುದು ಎಂದರು.
ನಂತರ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ ಮಾತನಾಡಿ ಪಟ್ಟಣದ ಅಭಿವೃದ್ದಿಗೆ ನಾವು ಪಕ್ಷಾತೀತವಾಗಿ ಕಾರ್ಯವನ್ನು ಮಾಡಲಾಗುವುದು. ಕೇವಲ ಚುನಾವಣೆಗಳಲ್ಲಿ ಪಕ್ಷಗಳಿರಬೇಕು ಅಭಿವೃದ್ದಿಯಲ್ಲಿ ಪಕ್ಷಾತೀತವಾಗಿ ನಡೆದುಕೊಂಡು ಪಟ್ಟಣದ ಜನತೆ ವಿಶ್ವಾಸ ಗಳಿಸುತ್ತೇವೆ ಎಂದರು.
ಈ ವೇಳೆ ವಾರ್ಡ್ ನ ಮುಖಂಡರಾದ ನಿಂಗಪ್ಪ ಗೊರ್ಲೆಕೊಪ್ಪ, ಶಿವಪ್ಪ ಬಂಡಾರಿ, ಲಕ್ಷ್ಮಣ ಬಾರಿಗಿಡದ, ಮಲಿಯಪ್ಪ ಅಣ್ಣಿಗೇರಿ, ಯಮನೂರಪ್ಪ ಗೊರ್ಲೆಕೊಪ್ಪ ಇನ್ನೀತರರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಾರ್ಡನ ಮುಖಂಡರು ಹಾಗೂ ಸಾರ್ವಜನಿಕರು, ಯುವಕರು ಪಾಲ್ಗೋಂಡಿದ್ದರು.