The sacrifice and struggle of the country’s soldiers is a unique contribution: Basavaraja Mustura
ಮಾನ್ವಿ : ಈ ದೇಶದ ಸೈನಿಕರ ತ್ಯಾಗ ಬಲಿದಾನ ಮತ್ತು ಹೋರಾಟ ಅನನ್ಯವಾದ ಕೊಡುಗೆ. ದೇಶ ಭಕ್ತಿಯ ಮತ್ತು ಶೌರ್ಯದ ರಕ್ತ ಪ್ರತಿಯೊಬ್ಬ ಭಾರತೀಯ ಸೈನಿಕರಲ್ಲಿ ಹರಿಯುತ್ತಿರುತ್ತದೆ. ಹಾಗಾಗಿ ಯುದ್ಧ ಮತ್ತು ಶತೃಗಳ ದಾಳಿ ಸಂದರ್ಭ ವೀರಾವೇಶದಿಂದ ಸೈನಿಕರು ಹೋರಾಡುತ್ತಾರೆ.
ಈ ಸುಂದರ ಭಾರತಕ್ಕೆ ನಾವು ತಿಳಿದುಕೊಂಡಿರುವಾ ಹಾಗೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ. ಲಕ್ಷಾಂತರ ಭಾರತೀಯರ ಅಮೂಲ್ಯ ಜೀವಗಳ ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದುದರಿಂದ ಸ್ವಾತಂತ್ರ್ಯ ವೀರ ಯೋಧರ ಆತ್ಮಕ್ಕೆ ಶಾಂತಿ ಕೊರುವುದರ ಜೊತೆಗೆ ಅವರ ಕುಟುಂಬಕ್ಕೆ ನಾವು ಸದಾ ಚಿರಋಣಿಯಾಗಿರಬೇಕು ಎಂದು ಮಾಜಿ ಯೋಧ ಬಸವರಾಜ ಮುಸ್ಟೂರ ಹೇಳಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ
ಹುತಾತ್ಮ ವೀರ ಯೋಧ ಮಂಜುನಾಥ್ ಅಂಗಡಿ ಸಾದಾಪುರ ರವರ ಸ್ಮಾರಕದ ಬಳಿ ಹಮ್ಮಿಕೊಂಡಿದ್ದ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವೀರ ಯೋಧನಿಗೆ ಮಾಲಾರ್ಪಣೆ ಮತ್ತು ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಕಳೆದ 78 ವರ್ಷಗಳಿಂದ ಭಾರತ ಸಾಕಷ್ಟು ಅಭಿವೃದ್ಧಿಯನ್ನು ಒಂದು ಮೂಲಕ ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿ ಮುಂಚೂಣಿಯಲ್ಲಿ ಇದೆ ಎಂದರು.
ಭಾರತವು ವಿಶ್ವಗುರು ಆಗುವಲ್ಲಿ ದಾಪುಗಾಲು ಇಡುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿ. ಇಡೀ ಜಗತ್ತು ಭಾರತವನ್ನು ನೋಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ. ಈ ದೇಶ ಕಟ್ಟುವಲ್ಲಿ ನಮ್ಮನ್ನ ನಾವು ತೊಡಗಿಸಿಕೊಳ್ಳೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾದಾಪುರ ಗ್ರಾಮದ ಯುವಕರು ಶಾಲಾ ವಿದ್ಯಾರ್ಥಿಗಳು ಪಟ್ಟಣದ ದೇಶಭಕ್ತರು, ಬಡವರ ಬಂಧು ಸಂಘದ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಯೋಧರು ಪಾಲ್ಗೊಂಡಿದ್ದರು.